ಪಡುಕೆರೆಯಲ್ಲಿ ಮೀಲಾದುನ್ನಬಿ ಜಾಥಾ
![ಪಡುಕೆರೆಯಲ್ಲಿ ಮೀಲಾದುನ್ನಬಿ ಜಾಥಾ ಪಡುಕೆರೆಯಲ್ಲಿ ಮೀಲಾದುನ್ನಬಿ ಜಾಥಾ](https://www.varthabharati.in/sites/default/files/images/articles/2019/11/10/218640-1573359889.gif)
ಕೋಟ, ನ.10: ಹಿದಾಯತುಲ್ ಇಸ್ಲಾಂ ಮದ್ರಸ ಹಾಗೂ ರಿಫಾಯಿಯ್ಯ ಮಸೀದಿ ಕೋಟ ಪಡುಕರೆ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್(ಸ.)ರ ಜನ್ಮದಿನಾಚರಣೆಯ ಪ್ರಯುಕ್ತ ರವಿವಾರ ಹಲವು ಕಾರ್ಯಗಳು ನಡೆದವು.
ಕೋಟ ಪಡುಕರೆಯಿಂದ ಕೋಡಿ ಕನ್ಯಾಣದವರೆಗೆ ಸಾಗಿದ ಮೀಲಾದ್ ಜಾಥಾದಲ್ಲಿ ಸಂದೇಶ ಭಾಷಣ, ರಿಫಾಯಿಯ್ಯ ದಫ್ ತಂಡದಿಂದ ದಫ್ ಕಾರ್ಯಕ್ರಮ ಹಾಗೂ ಮದ್ರಸ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.