ವಿಟ್ಲದಲ್ಲಿ ಸಂಭ್ರಮದ ಮೀಲಾದುನ್ನಬಿ

ವಿಟ್ಲ, ನ. 10: ಮೀಲಾದುನ್ನಬಿ ಪ್ರಯುಕ್ತ ವಿಟ್ಲದ ವಿವಿಧ ಭಾಗಗಳಲ್ಲಿ ರವಿವಾರ ಸಂಭ್ರಮಾಚರಣೆ ಹಾಗೂ ಸ್ವಲಾತ್ ಮೆರವಣಿಗೆ ನಡೆಯಿತು.
ವಿಟ್ಲ ಬೊಬ್ಬೆಕೇರಿ ಮುನಿರುಲ್ ಇಸ್ಲಾಂ ಮದ್ರಸ ವತಿಯಿಂದ ವಿದ್ಯಾರ್ಥಿಗಳಿಂದ ರ್ಯಾಲಿ ನಡೆಯಿತು. ಬಳಿಕ ಯುವಕರು ರಸ್ತೆಯಲ್ಲಿ ಸಂಚಾರ ಮಾಡುವ ಸರ್ವ ಧರ್ಮಿಯರಿಗೆ ಸಿಹಿತಿಂಡಿ ತಂಪು ಪಾನೀಯ ವಿತರಿಸುವ ಮೂಲಕ ಸೌಹಾರ್ದ ಸಂದೇಶ ಸಾರಿದರು.
ಇದೇ ಸಂದರ್ಭ ವಿಟ್ಲ ಠಾಣೆಯಿಂದ ವರ್ಗಾವಣೆಗೊಂಡ ವಿಟ್ಲ ಎಸ್ಸೈ ಯಲ್ಲಪ್ಪರನ್ನು ಶಾಲು ಹೊಂದಿಸಿ ಸನ್ಮಾನಿಸಲಾಯಿತು.
ಶಮೀರ್ ಪಳಿಕೆ, ಬಶೀರ್ ಬೊಬ್ಬೆಕೇರಿ, ಝುಬೈರ್ ಬೊಬ್ಬೇಕೇರಿ, ಇಕ್ಕು ಬೊಬ್ಬೇಕೇರಿ ಮತ್ತಿತರರು ನೇತೃತ್ವ ವಹಿಸಿದ್ದರು.
ಅದೇ ರೀತಿ ಒಕ್ಕೆತ್ತೂರು, ಕೊಡಂಗಾಯಿ, ಮಂಗಳಪದವು, ಕೆಲಿಂಜ ಭಾಗದಲ್ಲೂ ಮೀಲಾದ್ ರ್ಯಾಲಿ, ತಂಪು ಪಾನೀಯ ವಿತರಣೆ ಮಾಡಲಾಯಿತು.
ಪರ್ತಿಪ್ಪಾಡಿ: ಅಲ್ ಬಿರ್ರ್ ಇಸ್ಲಾಮಿಕ್ ಪ್ರೀ ಸ್ಕೂಲ್ ವತಿಯಿಂದ ರ್ಯಾಲಿಯಲ್ಲಿ ದಣಿದವರಿಗೆ ಐಸ್‌ಕ್ರೀಂ ವಿತರಿಸಲಾಯಿತು. ಪರ್ತಿಪ್ಪಾಡಿ ಖತೀಬು ಅಬ್ದುಲ್ ರಹಿಮಾನ್ ಫೈಝಿ, ಖಲಂದರ್ ಪರ್ತಿಪ್ಪಾಡಿ, ಹಕೀಂ ಪರ್ತಿಪ್ಪಾಡಿ, ಸಫ್ವಾನ್ ಮುಹಮ್ಮದ್ ಮತ್ತಿರರು ಭಾಗವಹಿಸಿದ್ದರು.









