Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಭೂಮಿಯ ಗಾತ್ರ ದ್ವಿಗುಣವಾದರೆ ಏನಾಗುತ್ತೆ?

ಭೂಮಿಯ ಗಾತ್ರ ದ್ವಿಗುಣವಾದರೆ ಏನಾಗುತ್ತೆ?

ಆರ್.ಬಿ. ಗುರುಬಸವರಾಜಆರ್.ಬಿ. ಗುರುಬಸವರಾಜ10 Nov 2019 4:50 PM IST
share
ಭೂಮಿಯ ಗಾತ್ರ ದ್ವಿಗುಣವಾದರೆ ಏನಾಗುತ್ತೆ?

ನಾವೆಲ್ಲ ವಾಸಿಸುತ್ತಿರುವ ಮನೆ ಒಂದು ಗೋಳಾಕಾರದ ಕಲ್ಲು. ಅದು ಸೌರವ್ಯೆಹದ ಗೋಲ್ಡಿಲಾಕ್ ವಲಯ ದಲ್ಲಿದೆ. ಆವಿಯಾಗುವಷ್ಟು ಹೆಚ್ಚು ಉಷ್ಣವೂ ಅಲ್ಲದ, ಘನೀಭವಿಸುವಷ್ಟು ಹೆಚ್ಚು ಶೀತವೂ ಅಲ್ಲದ ಮಧ್ಯದ ವಲಯದಲ್ಲಿ ನಮ್ಮೆಲ್ಲರ ಮನೆಯಿದೆ. ಆದರೆ ಈ ನಮ್ಮ ಮನೆ ಇದ್ದಕ್ಕಿದ್ದಂತೆ ಗಾತ್ರದಲ್ಲಿ ದ್ವಿಗುಣವಾದರೆ ಏನಾಗುತ್ತೆ? ಈ ಪ್ರಶ್ನೆ ಸಹಜವಾಗಿ ಎಲ್ಲರ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರವನ್ನು ಕೆಲವು ದೃಷ್ಟಾಂತಗಳ ಮೂಲಕ ಕಂಡುಕೊಳ್ಳೋಣ.

ದ್ರವ್ಯರಾಶಿ ಮತ್ತು ತೂಕ: ಭೂಮಿಯ ಗಾತ್ರ ದ್ವಿಗುಣವಾದರೆ ಅದರ ಗುರುತ್ವಶಕ್ತಿಯೂ ದ್ವಿಗುಣವಾಗುತ್ತದೆ ಮತ್ತು ಭೂಮಿಯ ದ್ರವ್ಯರಾಶಿಯ ಈಗಿನ ದ್ರವ್ಯರಾಶಿಗಿಂತ 8 ಪಟ್ಟು ಹೆಚ್ಚಾಗುತ್ತದೆ. ಆಗ ಎಲ್ಲಾ ಪ್ರಾಣಿಗಳು ಸೇರಿದಂತೆ ನಮ್ಮ ತೂಕವೂ ಸಹ ಮೊದಲಿನ ತೂಕಕ್ಕಿಂತ ಎರಡು ಪಟ್ಟು ಹೆಚ್ಚುತ್ತದೆ. ತೂಕವನ್ನು ಬೆಂಬಲಿಸಲು ಮೂಳೆ ಮತ್ತು ಸ್ನಾಯುಗಳ ತೂಕವೂ ಹೆಚ್ಚುತ್ತದೆ.

ಚಲನೆಯ ತೊಂದರೆ: ಭೂಮಿಯ ಗಾತ್ರ ಹೆಚ್ಚಳದಿಂದ ಗುರುತ್ವವೂ ಹೆಚ್ಚುತ್ತದೆ ಎಂದು ಅರಿತೆವು. ಗುರುತ್ವ ಹೆಚ್ಚಾದರೆ ಭೂಮಿಯ ಮೇಲೆ ನಾವು ನಡೆಯಲು, ಚಲಿಸಲು ತೊಂದರೆಯಾಗುತ್ತದೆ. ಗುರುತ್ವಾಕರ್ಷಣೆ ಹೆಚ್ಚು ಇರುವುದರಿಂದ ನಡೆಯಲು ಹೆಚ್ಚು ಶಕ್ತಿ ಬೇಕಾಗುತ್ತದೆ. ಬೆನ್ನಿನ ಮೇಲೆ ಇನ್ನೊಬ್ಬರನ್ನು ಹೊತ್ತು ಒಯ್ದೊಗ ಎಷ್ಟು ಶಕ್ತಿ ವ್ಯಯವಾಗುತ್ತದೆಯೋ ಅಷ್ಟೇ ಪ್ರಮಾಣದ ಶಕ್ತಿ ವ್ಯಯವಾಗುತ್ತದೆ. ಅದೇ ರೀತಿ ಪರಭಕ್ಷಕಗಳ ಚಲನೆಯೂ ತೊಂದರೆಯಾಗುತ್ತದೆ. ಓಡಲು ಆಗದೇ ಭೇಟೆಯಾಡುವುದು ಕಷ್ಟವಾಗುತ್ತದೆ.

ಮರಗಳು ನಾಶ: ಸಾಮಾನ್ಯವಾಗಿ ಮರವು ಎಷ್ಟು ಎತ್ತರವಾಗಿ ಬೆಳೆಯಬಲ್ಲದು? ವಾಸ್ತವದಲ್ಲಿ ಮರದ ಬೆಳವಣಿಗೆಯು ಗುರುತ್ವಾಕರ್ಷಣೆಯಿಂದ ನಿಯಂತ್ರಿಸಲ್ಪಡುತ್ತದೆ. ಮರದ ತುತ್ತ ತುದಿಯವರೆಗೂ ನೀರನ್ನು ಸಾಗಿಸಲು ಬೇಕಾದ ಶಕ್ತಿಯು ದ್ಯುತಿಸಂಶ್ಲೇಷಣೆಯಿಂದ ಪಡೆಯುವ ಶಕ್ತಿಗಿಂತ ಕಡಿಮೆ ಇರುತ್ತದೆ. ಭೂಮಿಯ ಗಾತ್ರ ಹೆಚ್ಚಳವಾಗಿ ಗುರುತ್ವಾಕರ್ಷಣೆ ಹೆಚ್ಚಾದರೆ ನೀರನ್ನು ಸಾಗಿಸಲು ಹೆಚ್ಚು ಶಕ್ತಿ ಬೇಕಾಗುತ್ತದೆ. ಅಷ್ಟೊಂದು ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಮರಕ್ಕಿಲ್ಲ. ನೀರು ಸರಬರಾಜು ಇಲ್ಲದೇ ಮರಗಳು ನಾಶ ಹೊಂದುತ್ತವೆ.

ಜ್ವಾಲಾಮುಖಿಗಳ ಸ್ಫೋಟ: ಭೂಮಿಯ ಗಾತ್ರ ಹೆಚ್ಚಳದಿಂದ ಭೂಮಿಯೊಳಗೆ ಸ್ಥಿರ ಅಂಶಗಳ ಪ್ರಮಾಣ ಹೆಚ್ಚುತ್ತದೆ. ಇದು ಭೂಮಿಯೊಳಗೆ ಹೆಚ್ಚಿನ ತಾಪಕ್ಕೆ ಕಾರಣವಾಗುತ್ತದೆ. ಆಂತರಿಕ ಭೂ ತಾಪವು ಜ್ವಾಲಾಮುಖಿ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಪ್ರಪಂಚಾದ್ಯಂತ ಸಾವಿರಾರು ವರ್ಷಗಳಿಂದ ಕೆಲವು ಸುಪ್ತ ಜ್ವಾಲಾಮುಖಿಗಳಿವೆ. ಆ ಎಲ್ಲಾ ಸುಪ್ತ ಜ್ವಾಲಾಮುಖಿಗಳು ಎಚ್ಚರಗೊಳ್ಳುತ್ತವೆ. ಜ್ವಾಲಾಮುಖಿಗಳ ಚಟುವಟಿಕೆ ಭೂಮಿಯ ಆಕಾರವನ್ನು ಬದಲಿಸುತ್ತದೆ. ವಾಯುಮಂಡಲವೂ ಬದಲಾವಣೆಗೊಂಡು ಹವಾಮಾನ ವೈಪ್ಯರೀತ್ಯಗಳಾಗುತ್ತವೆ.

ಸುದೀರ್ಘ ಹಗಲು: ಭೂಮಿಯ ಗಾತ್ರ ಹೆಚ್ಚಳದಿಂದ ಕೋನೀಯ ಆವೇಗ ಸಂರಕ್ಷಿಸಲ್ಪಡುತ್ತದೆ. ಆಗ ಭೂಗ್ರಹದ ಚಲನೆಯ ವೇಗ 32 ಪಟ್ಟು ಕಡಿಮೆಯಾಗುತ್ತದೆ. ಇದರಿಂದ ಭೂಮಿಯ ಪರಿಭ್ರಮಣ ಅವಧಿ ಹೆಚ್ಚುತ್ತದೆ. ಪರಿಣಾಮವಾಗಿ ಹಗಲಿನ ಪ್ರಮಾಣ ಹೆಚ್ಚುತ್ತದೆ. ಒಂದು ದಿನದ ಅವಧಿ ತಿಂಗಳಿನ ಲೆಕ್ಕಕ್ಕೆ ಸಮನಾಗಬಹುದು. ಆಗ ಬೆಳಕು ಮತ್ತು ಕತ್ತಲೆಗಳ ಸಮಯ ಹೆಚ್ಚುತ್ತದೆ. ಬೃಹತ್ ಉಷ್ಣತೆಯು ಸೃಷ್ಟಿಸುವ ಬಿರುಗಾಳಿ, ಶಕ್ತಿಶಾಲಿಯಾದ ಕಟ್ಟಡಗಳನ್ನು ಸಮತಟ್ಟಾಗಿಸುತ್ತದೆ. 

ಗಾಳಿಯ ಒತ್ತಡ: ವಾಯುಮಂಡಲವೂ ಗಾತ್ರದಲ್ಲಿ ದುಪ್ಪಟ್ಟಾಗುತ್ತದೆ. ಗಾಳಿಯ ಒತ್ತಡ ದ್ವಿಗುಣವಾಗುತ್ತದೆ. ಹೆಚ್ಚಿನ ಗಾಳಿಯು ಉಸಿರಾಡಲು ಸಹಾಯಕವಾಬಲ್ಲದು. ಅಲ್ಲದೇ ಹೆಚ್ಚಿನ ಆಮ್ಲಜನಕವು ಮೆದುಳಿಗೆ ರವಾನೆಯಾಗುತ್ತದೆ. ದಟ್ಟವಾದ ಗಾಳಿಯು ಹಕ್ಕಿಗಳ ಹಾರುವಿಕೆಗೆ ಸಹಾಯವಾಗಬಲ್ಲದು. ಆದಾಗ್ಯೂ ಗುರುತ್ವಾಕರ್ಷಣ ಹೆಚ್ಚಳದಿಂದ ಭೂಮೇಲ್ಮೈ ನೀರಿನ ಪ್ರಮಾಣವು ಕಡಿಮೆಯಾಗುತ್ತದೆ.

share
ಆರ್.ಬಿ. ಗುರುಬಸವರಾಜ
ಆರ್.ಬಿ. ಗುರುಬಸವರಾಜ
Next Story
X