ಸೂರಿಕುಮೇರಿನಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ

ಮಾಣಿ: ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮವು ಜರುಗಿತು.
ಶುಕ್ರವಾರ ಮದ್ರಸಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಶನಿವಾರ ದಫ್ ಪ್ರದರ್ಶನ, ಬಹುಮಾನ ವಿತರಣೆ ನಂತರ ಮದ್ ಹುರ್ರಸೂಲ್ ಪ್ರಭಾಷಣ, ಆದಿತ್ಯವಾರ ಬೆಳಗ್ಗೆ ದುಆ, ಧ್ವಜ ಹಸ್ತಾಂತರ ಬಳಿಕ ಮೀಲಾದ್ ಕಾಲ್ನಡಿಗೆ ಜಾಥಾ ನಡೆಯಿತು. ಬಳಿಕ ಅನ್ನದಾನ, ಮೌಲೂದ್ ಪಾರಾಯಣ ಹಾಗೂ ತಬರ್ರುಕ್ ವಿತರಣೆ ನಡೆಯಿತು.
ಸ್ಥಳೀಯ ಖತೀಬ್ ಡಿ.ಎಸ್ ಅಬ್ದುರ್ರಹ್ಮಾನ್ ಮದನಿ, ಉಳ್ತೂರು ಸದರ್ ಅಬ್ದುಸ್ಸಲಾಂ ಹನೀಫಿ ಕಬಕ, ಅಧ್ಯಾಪಕ ಸುಲೈಮಾನ್ ಮುಸ್ಲಿಯಾರ್ ಗುರುವಾಯನಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲೂದ್ ಮಜ್ಲಿಸ್ ನಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಾರ್ಥನೆ ಮಾಡಿದರು.
ಅಧ್ಯಕ್ಷ ಮೂಸಾ ಕರೀಂ ಮಾಣಿ, ಕಾರ್ಯದರ್ಶಿ ಅಮೀರುದ್ದೀನ್, ಕೋಶಾಧಿಕಾರಿ ಹಮೀದ್ ಕಾರ್ಯಕಾರಿ ಸಮಿತಿಯ ಬಶೀರ್ ಸೂರಿಕುಮೇರು, ಹಂಝ ಕಾಯರಡ್ಕ, ಉಞ್ಞಾಕ, ಇಸ್ಮಾಯಿಲ್, ರಫೀಕ್ ಪಟ್ಲಕೋಡಿ, ಅಬ್ದುರ್ರಹ್ಮಾನ್ ಪುತ್ತು, ಮುಹಮ್ಮದಾಲಿ ಮುಸ್ಲಿಯಾರ್, ಯೂಸುಫ್ ಹಾಜಿ, ಹನೀಫ್ ಸಂಕ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಮಾಣಿ, ಬದ್ರಿಯಾ ಫೌಂಡೇಶನ್ ಸೂರಿಕುಮೇರು, ಜಿಎಸ್ಎಫ್ ಗಲ್ಫ್ ಸಮಿತಿ, ಬದ್ರಿಯಾ ಫ್ರೆಂಡ್ಸ್ ಯಂಗ್ ಮೆನ್ಸ್ ಸೂರಿಕುಮೇರು ಸೇರಿ ವಿವಿಧ ಸಂಘಟನೆಗಳು ಸಹಕಾರ ನೀಡಿತು.









