ಮೀಲಾದುನ್ನಬಿ: ಸವಣೂರಿನಿಂದ ಪಣೆಮಜಲು ತನಕ ಕಾಲ್ನಡಿಗೆ ಜಾಥಾ

ಸವಣೂರು, ನ.10: ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಪಣೆಮಜಲು ರಹ್ಮಾನಿಯಾ ಜುಮ್ಮಾ ಮಸೀದಿಯ ಜಂಟಿ ಆಶ್ರಯದಲ್ಲಿ ಸವಣೂರು ಪೇಟೆಯಿಂದ ಪಣೆಮಜಲಿನ ತನಕ ಮೀಲಾದ್ ಕಾಲ್ನಡಿಗೆ ಮೆರವಣಿಗೆ ನಡೆಯಿತು.
ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿ ಪ್ರಾರ್ಥನೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಚಾಪಲ್ಲ ಜಮಾಅತ್ ಕಮಿಟಿಯ ಅಧ್ಯಕ್ಷ ಪುತ್ತುಬಾವಾ ಹಾಜಿ ಧ್ವಜಾರೋಹಣಗೈದರು. ಪಣೆಮಜಲು ಖತೀಬ್ ಅಬ್ಬಾಸ್ ಮದನಿ ಈದ್ ಮಿಲಾದ್ ಸಂದೇಶ ಭಾಷಣ ಮಾಡಿದರು.
ಚಾಪಲ್ಲ ಹಾಗೂ ಪಣೆಮಜಲು ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಪದಾಧಿಕಾರಿಗಳು, ಅಲ್ ನಜಾತ್ ಯೂತ್ ಫೆಡರೇಶನ್ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಸದಸ್ಯರು, ಹಿದಾಯತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ವಿವಿಧ ಸಂಘ ಸಂಸ್ಥೆಗಳು ತಂಪು ಪಾನೀಯ, ಸಿಹಿ ತಿಂಡಿ, ಹಣ್ಣುಹಂಪಲು ವಿತರಿಸಿತು.
Next Story









