ಜಾನುವಾರು ಸಾಗಾಟ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ನ.10: ನಗರದ ವಳಚ್ಚಿಲ್ ಪದವಿನಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ ಪೊಲೀಸರು, ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಡ್ಯಾರ್ ನಿವಾಸಿ ಶಮೀಮ್ (39), ಫರಂಗಿಪೇಟೆ ನಿವಾಸಿ ಬಶೀರ್ (53) ಬಂಧಿತ ಆರೋಪಿಗಳು. ಆರೋಪಿಗಳಿಂದ ಎರಡು ದನ ಮತ್ತು ಸಾಗಾಕ್ಕೆ ಬಳಸಿದ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಭಜಂತ್ರಿ ಶನಿವಾರ ಸಂಜೆ ರೌಂಡ್ಸ್‌ನಲ್ಲಿದ್ದಾಗ ವಳಚ್ಚಿಲ್ ಪದವು ವ್ಯಾಪ್ತಿಯಲ್ಲಿ ಪಿಕಪ್‌ನಲ್ಲಿ ಎರಡು ದನಗಳನ್ನು ಸಾಗಾಟ ಮಾಡುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಶಮೀಮ್ ಮತ್ತು ಪಿಕಪ್ ಚಾಲಕ ಬಶೀರ್ ಎಂಬವರನ್ನು ವಶಪಡಿಸಿ, ಎರಡು ದನ ಹಾಗೂ ವಾಹನ ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಗಳು ದನ ಸಾಗಾಟಕ್ಕೆ ಯಾವುದೇ ದಾಖಲೆಗಳನ್ನು ಮಾಡಿಸಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





