ಗಾಂಜಾ ಮಾರಾಟ ಆರೋಪ: ರೌಡಿಗಳ ಬಂಧನ

ಬೆಂಗಳೂರು, ನ.10: ಮಾದಕ ವಸ್ತು ಗಾಂಜಾ ಮಾರಾಟ ಆರೋಪದಡಿ ರೌಡಿಗಳಿಬ್ಬರನ್ನು ಇಲ್ಲಿನ ಎಚ್‌ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಎಸ್.ಹುಸೇನ್ ಹಾಗೂ ಅಝಾಂ ಪಾಷಾ ಬಂಧಿತ ರೌಡಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬಂಧಿತ ಆರೋಪಿಗಳಿಂದ 15 ಕೆಜಿ ಗಾಂಜಾ, ಕಾರು ಜಪ್ತಿ ಮಾಡಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story