ದಿಟ್ಟ ಚುನಾವಣಾ ಆಯುಕ್ತ ಟಿಎನ್ ಶೇಷನ್ರನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ
ಹೊಸದಿಲ್ಲಿ, ನ.11: ಚುನಾವಣಾ ಆಯೋಗದಲ್ಲಿ ತಾರತಮ್ಯವಿಲ್ಲದ, ದಿಟ್ಟ ಹಾಗೂ ಭಯಹುಟ್ಟಿಸುವ ಸುಧಾರಣೆಗಳನ್ನು ತಂದಿರುವ ಟಿ.ಎನ್. ಶೇಷನ್ರನ್ನು ನೆನಪಿಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದಿನ ದಿನಗಳಲ್ಲಿ ಚುನಾವಣಾ ಆಯೋಗದಲ್ಲಿ ಇಂತಹ ಅಂಶಗಳ ಕೊರತೆ ಇದೆ ಎಂದಿದ್ದಾರೆ.
ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತಂದಿದ್ದ ಶೇಷನ್ 1990ರಲ್ಲಿ ಚುನಾವಣೆಯ ಸುಧಾರಣೆಯಲ್ಲಿ ಭಾರೀ ಬದಲಾವಣೆ ತಂದಿದ್ದರು. 86ರ ವಯಸ್ಸಿನ ಶೇಷನ್ ರವಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶೇಷನ್ ಡಿ.15,1932ರಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ತಿರುನೆಲ್ಲೈನಲ್ಲಿ ಜನಿಸಿದ್ದರು.
ಒಂದು ಕಾಲದಲ್ಲಿ ನಮ್ಮ ಚುನಾವಣಾ ಆಯುಕ್ತರು ತಾರತಮ್ಯರಹಿತ, ಗೌರವಾನ್ವಿತ, ದಿಟ್ಟ ಹಾಗೂ ಭಯಹುಟ್ಟಿಸುವ ರೀತಿಯಲ್ಲಿದ್ದರು. ಅವರ ಪೈಕಿ ಟಿ.ಎನ್. ಶೇಷನ್ ಪ್ರಮುಖರಾಗಿದ್ದರು. ಶೇಷನ್ರನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ಸಾಂತ್ವನ ಹೇಳುವೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ
Next Story