ಮನಪಾ ಚುನಾವಣೆ: ಬೆಂಗ್ರೆ ವಾರ್ಡ್ನಲ್ಲಿ ಎಸ್ಡಿಪಿಐಗೆ ಗೆಲುವು
ಮಂಗಳೂರು, ನ.14: ಮಂಗಳೂರು ಮಹಾನಗರ ಪಾಲಿಕೆಯ 60ನೇ ವಾರ್ಡ್ ಬೆಂಗ್ರೆಯಲ್ಲಿ ಎಸ್ಡಿಪಿಐ ಅಭ್ಯರ್ಥಿ ಗೆಲುವು ಸಾಧಿಸಿದೆ.
ಇಲ್ಲಿ ಎಸ್ಡಿಪಿಐ ಅಭ್ಯರ್ಥಿ ಮುನೀಬ್ ಬೆಂಗ್ರೆ 1701ಮತಗಳನ್ನು ಗಳಿಸಿ ಜಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಂಗಾಧರ ಸಾಲ್ಯಾನ್ 1498 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಆಸಿಫ್ ಅಹ್ಮದ್ 1192 ಮತಗಳನ್ನು ಗಳಿಸಿದ್ದಾರೆ. ಇಲ್ಲಿ 33 ನೋಟಾ ಚಲಾವಣೆಯಾಗಿದೆ.