ಜೆಸಿಐ ಇಂದ್ರಾಳಿ ಘಟಕದ ಪದಾಧಿಕಾರಿಗಳ ಪದಪ್ರಧಾನ

ಉಡುಪಿ, ನ.15: ಜೇಸಿಐ ಇಂದ್ರಾಳಿ ಉಡುಪಿ ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಇತ್ತೀಚಿಗೆ ಚಿಟ್ಪಾಡಿಯ ಲಕ್ಷ್ಮೀ ಸಭಾಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷ ಎಂ.ಎನ್.ನಾಯಕ್, ನಿಕಟಪೂರ್ವ ಅಧ್ಯಕ್ಷ ಅಶೋಕ್ ಪೂಜಾರಿ ಅವರಿಂದ ಪ್ರಮಾಣವಚನ ಸ್ವೀಕರಿಸಿದರು. ಅದೇ ರೀತಿ ಸಂಪುಟದ ಇತರ ಪ್ರಮುಖರು ಕೂಡ ಅಧಿಕಾರ ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ದಾಮೋದರ ನಾಯಕ್ ಉಪಸ್ಥಿತರಿದ್ದರು.
ಉಡುಪಿಯ ನೈನಾ ಫ್ಯಾನ್ಸಿ ಮಾಲಕ ಮುಹಮ್ಮದ್ ಮೌಲ ಹಾಗೂ ಲಿಯೋ ಜಿಲ್ಲಾಧ್ಯಕ್ಷ ಫೌಜಾನ್ ಅಕ್ರಂ ಅವರನ್ನು ಸನ್ಮಾನಿಸಲಾಯಿತು. ಜೇಸಿ ಸಂಸ್ಥೆಯ ವಲಯ 15ರ ಚುನಾಯಿತ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಹಾಗೂ ವಲಯ ಉಪಾಧ್ಯಕ್ಷ ಮೇಧಾವಿ, ಇಂದ್ರಾಳಿ ಜೆಸಿ ಸ್ಥಾಪಕ ಮನೋಜ್ ಕಡಬ, ಶೆರ್ಲಿ ಮನೋಜ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಷ್ಣುಪ್ರಸಾದ ಕಾಮ್ ವಂದಿಸಿದರು.
Next Story