ಡ್ರೋನ್, 10 ಸಾವಿರ ಮೆಮೊರಿ ಕಾರ್ಡ್ ಸಾಗಾಟ: ಐಜಿಐ ವಿಮಾನ ನಿಲ್ದಾಣದಲ್ಲಿ ಓರ್ವನ ಬಂಧನ
ಹೊಸದಿಲ್ಲಿ, ನ. 16: ಕಸ್ಟಮ್ಸ್ ಇಲಾಖೆ ತಂಡವೊಂದು ಹೊಸದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಶನಿವಾರ ಹಲವು ಡ್ರೋನ್ ಹಾಗೂ 10 ಸಾವಿರ ಮೆಮೊರಿ ಕಾರ್ಡ್ಗಳನ್ನು ವಶಕ್ಕೆ ಪಡೆದುಕೊಂಡಿದೆ.
‘‘ಹಾಂಗ್ಕಾಂಗ್ನಿಂದ ದಿಲ್ಲಿಗೆ ತಲುಪಿದ ಬಳಿಕ ಗ್ರೀನ್ ಚಾನೆಲ್ ಮೂಲಕ ಹಾದು ಬಂದ ವ್ಯಕ್ತಿಯೋರ್ವನ ತಪಾಸಣೆ ನಡೆಸಲಾಯಿತು’’ ಎಂದು ಕಸ್ಟಮ್ಸ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತನ ಲಗೇಜ್ನಲ್ಲಿ ಹಲವು ಡ್ರೋನ್, ಮೊಬೈಲ್ ಫೋನ್ ಹಾಗೂ ಮೆಮೊರಿ ಕಾರ್ಡ್ಗಳು ಪತ್ತೆಯಾದವು. ವಿಚಾರಣೆ ವೇಳೆ ಆತ, ತಾನು ಈ ಹಿಂದೆ ಕೂಡ ಹಾಂಗ್ಕಾಂಗ್ನಿಂದ 10 ಸಾವಿರ ಮೆಮೊರಿ ಕಾರ್ಡ್ಗಳನ್ನು ಕಳ್ಳ ಸಾಗಾಟ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
10 ಸಾವಿರ ಮೆಮೊರಿ ಕಾರ್ಡ್, ಐದಾರು ಮೊಬೈಲ್ ಫೋನ್, 4 ಡಿಜೆಐ ಡ್ರೋನ್ಗಳು ಹಾಗೂ 4 ಎಂಐ ಡ್ರೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಸ್ತುಗಳ ಒಟ್ಟು ಬೆಲೆ 26 ಲಕ್ಷ ರೂಪಾಯಿ ಎಂದು ಕಸ್ಟಮ್ಸ್ ಇಲಾಖೆಯ ಮೂಲಗಳು ತಿಳಿಸಿವೆ.
ಕಸ್ಟಮ್ಸ್ ಇಲಾಖೆ ಈ ಬಗ್ಗೆ ತನಿಖೆ ಮುಂದುವರಿಸಿದೆ.