Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ...

ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಅಪ್ಪಣ್ಣ ರಾಮದುರ್ಗ

ಮೌಲಾಲಿ ಕೆ ಆಲಗೂರ ಬೋರಗಿಮೌಲಾಲಿ ಕೆ ಆಲಗೂರ ಬೋರಗಿ17 Nov 2019 5:09 PM IST
share
ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಅಪ್ಪಣ್ಣ ರಾಮದುರ್ಗ

ಹಸಿವು ಮತ್ತು ಬಡತನ ಕಲಿಸದ ಪಾಠ ಜಗತ್ತಿನ ಯಾವ ವಿಶ್ವ ವಿದ್ಯಾನಿಲಯವು ಕಲಿಸದು ಎಂಬ ಮಾತಿದೆ. ಅದರಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಡ ಕುಟುಂಬದಲ್ಲಿ ಜನಿಸಿದ ಪ್ರತಿಭಾನ್ವಿತ ಯುವ ಕಲಾವಿದನೊಬ್ಬ ಇಂದು ಪಂಚ ಭಾಷೆಗಳಲ್ಲಿ ಮೂಡಿ ಬಂದ ನಾಯಕ ನಟ ಸುದೀಪ್ ಅಭಿನಯದ ‘ಪೈಲ್ವಾನ್’ ಚಲನಚಿತ್ರದಲ್ಲಿ ಪ್ರಮುಖ ಹಾಸ್ಯ ನಟನಾಗಿ ಕಾಣಿಸಿಕೊಂಡು ನಾಡ ಜನರ ಮನ ಗೆದ್ದು, ಹೊರ ರಾಜ್ಯಗಳ ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿದ್ದಾನೆ. ಅಲ್ಲದೆ ನಟ ಸುದೀಪ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾನೆ. ಈಗ ರಂಗಭೂಮಿಯಿಂದ ಚಲನಚಿತ್ರಕ್ಕೆ ಎಂಟ್ರಿ ಕೊಟ್ಟು ಗಾಂಧಿ ನಗರದಲ್ಲಿ ಮಿಂಚುತ್ತಿದ್ದಾನೆ. ಅವನೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ರಾಮದುರ್ಗ.

ಹೌದು ಬಯಲು ಸೀಮೆಯಿಂದ ಬಂದು ಚಲನಚಿತ್ರ ಮತ್ತು ರಾಜಧಾನಿಯಲ್ಲಿ ಹೆಸರು ಮಾಡುವುದೆಂದರೆ ಸಾಮಾನ್ಯದ ಕೆಲಸವಲ್ಲ. ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ಸ್ಪರ್ಧೆ ಮತ್ತು ಕಲಾವಿದರಿಗೇನೂ ಕೊರತೆ ಇಲ್ಲ. ಇದರ ನಡುವೆಯೂ ಯುವ ಕಲಾವಿದ ಅಪ್ಪಣ್ಣ ರಾಮದುರ್ಗ ಇವರ ಕಲಾ ಪ್ರತಿಭೆ ಮೆಚ್ಚಿ ಬಹುದೊಡ್ಡ ಚಿತ್ರ ಮತ್ತು ಬಹುದೊಡ್ಡ ನಟರ ಜೊತೆಗೆ ಅಭಿನಯಿಸಲು ಅವಕಾಶ ದೊರೆತಿರುವುದು ನಿಜಕ್ಕೂ ಅಪ್ಪಣ್ಣನ ಸಾಧನೆಯ ಮೊದಲನೆ ಯಶಸ್ಸಿನ ಮೆಟ್ಟಿಲು. ಅಪ್ಪಣ್ಣ ಹುಟ್ಟಿದ್ದು ಕಡು ಬಡತನದ ಕೂಲಿ ಕಾರ್ಮಿಕ ಕುಟುಂಬದಲ್ಲಿ. ತಂದೆ ಮಹದೇವಪ್ಪ ತಾಯಿ ಕಲಾವತಿ. ಇವರ ತಾಯಿ ಈಗಲೂ ಬಾಳೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಬಡತನವೆಂಬ ಭೂತ ಬೆನ್ನು ಬಿಡದೆ ಕಾಡುತ್ತಿತ್ತು. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಿತ್ತು. ಮಾತಿನಲ್ಲಿ ಉತ್ತಮ ಚತುರತೆ ಹೊಂದಿದ್ದ ಅಪ್ಪಣ್ಣ ಕಾಮಿಡಿ ಮತ್ತು ಪಂಚ್ ಡೈಲಾಗ್ ಮೂಲಕ ಊರ ಜನರ ಮನ ಗೆದ್ದಿದ್ದರು. ನಿತ್ಯ ಜನರಿಗೆ, ಸ್ನೇಹಿತರಿಗೆ ನಗಿಸಿದ ನಂತರ ಅವರು ನೀಡುವ ಪುಡಿಗಾಸಿನಿಂದ ತಮ್ಮ ದಿನ ಹೊಟ್ಟೆ ತುಂಬಿಸಿಕೊಳ್ಳುತಿದ್ದರು. ಕೆಲವೊಮ್ಮೆ ಜನರು ಅಪ್ಪಣ್ಣನಿಗೆ ‘ಜೋಕರ್’ ಎಂದು ಅವಮಾನ ಮಾಡಿದ್ದೂ ಉಂಟು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತೆ ಬಡತನ ಮತ್ತು ಹಸಿವು ಅವರನ್ನು ಅಸಹಾಯಕನನ್ನಾಗಿ ಮಾಡಿತ್ತು.

ಅಪ್ಪಣ್ಣ ಊರಲ್ಲಿ ಉಡಾಫೆ ಹುಡುಗ. ಆದರೆ ಅವನಲ್ಲಿನ ಕಲೆ ಮತ್ತು ಪ್ರತಿಭೆ ಮಾತ್ರ ಅಗಾಧವಾದದ್ದು. ಅದನ್ನು ಗುರುತಿಸಿದ ಅಶೋಕ ಗೋನವಾಲ್ ಎಂಬ ಗುರುಗಳು ಅಪ್ಪಣ್ಣನಿಗೆ ಕರೆದು ಬುದ್ಧಿವಾದ ಹೇಳಿ ಕಲಾವಿದನಾಗುವ ಆಸೆ ಚಿಗುರೊಡಿಸಿದರು. ನೀನಾಸಂ ರಂಗ ಭೂಮಿ ತರಬೇತಿ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಗುರುಗಳು ಹೇಳಿದ ಬುದ್ಧಿವಾದದ ಮಾತು, ಹಸಿವು ಕಲಿಸಿದ ಪಾಠ, ಜೀವನದಲ್ಲಿ ಎದುರಾದ ಸಮಸ್ಯೆಗಳನ್ನೆ ತನ್ನ ಕಲೆಗೆ ಸ್ಫೂರ್ತಿಯಾಗಿ ತೆಗೆದುಕೊಂಡು, ಸಮಾಜದಲ್ಲಿನ ಜನರು ತನಗೆ ಮಾಡಿದ ಅವಮಾನಕ್ಕೆ ಸಾಧನೆಯಿಂದಲೇ ಮರು ಉತ್ತರ ನೀಡಬೇಕು ಎಂದು ನೀನಾಸಂನಲ್ಲಿ ಪ್ರವೇಶ ಪಡೆದರು. ಹಲವು ವರ್ಷಗಳ ಕಾಲ ‘ನೀನಾಸಂ’ನಲ್ಲಿ ಶ್ರದ್ಧೆ, ಭಕ್ತಿಯಿಂದ ಕಲಾ ದೇವಿಯನ್ನು ಒಲಿಸಿಕೊಂಡ ಅಪ್ಪಣ್ಣ, ತನಗಿಂತ ಹಿರಿಯ ರಂಗಭೂಮಿ ಕಲಾವಿದರಿಂದ ಅನೇಕ ಕಲಾ ವಿದ್ಯೆಯನ್ನು ಕಲಿತರು. ಅಲ್ಲಿಂದಲೇ ಅಪ್ಪಣ್ಣನವರ ಬದುಕಿನ ದಿಕ್ಕು ಬದಲಾಗಿದ್ದು. ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಅಲ್ಲದೆ 3-4 ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವುಗಳು ಹಿಟ್ ಆಗದೆ ಇದ್ದ ಸಮಯದಲ್ಲಿ ಅವಕಾಶಗಳು ಸಿಗದೆ ಕೊರಿಯರ್ ಬಾಯ್, ಹೊಟೇಲ್ ಸಪ್ಲಯರ್ ಆಗಿ ಕೆಲಸ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಕನ್ನಡ ಖಾಸಗಿ ವಾಹಿನಿ ನಡೆಸುತಿದ್ದ ಕಾಮಿಡಿ ಕಿಲಾಡಿಗಳು ಸೀಜನ್ 2 ಗೆ ಆಯ್ಕೆ ಆದ ಅಪ್ಪಣ್ಣ ತನ್ನೊಳಗಿದ್ದ ಒಬ್ಬ ಕಲೆಗಾರನನ್ನು ಹೊರ ಹಾಕಿ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಮೂಲಕ ತೀರ್ಪುಗಾರರಾದ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್, ನಟ ಜಗ್ಗೇಶ್, ನಟಿ ರಕ್ಷಿತಾ ಪ್ರೇಮ ಅವರಿಂದ ಬೇಷ್ ಎನಿಸಿಕೊಂಡು ಫೈನಲ್‌ವರೆಗೂ ತಲುಪಿ ಕನ್ನಡಿಗರ ಪ್ರೋತ್ಸಾಹ, ಶುಭ ಹಾರೈಕೆ, ಆಶೀರ್ವಾದದಿಂದ ‘ಕಾಮಿಡಿ ಕಿಲಾಡಿ ಸೀಜನ್ 2’ನಲ್ಲಿ ದ್ವೀತಿಯ ಸ್ಥಾನ ಗಳಿಸಿದರು. ಇದು ಅವರಿಗೆ ಅಪಾರ ಜನ ಮನ್ನಣೆ ತಂದು ಕೊಟ್ಟಿತು. ಅಲ್ಲದೆ ಅದೇ ವಾಹಿನಿಯ ಕಾಮಿಡಿ ಚಾಂಪಿಯನ್ ಶೋನಲ್ಲಿ ತಾನು ನಾಯಕತ್ವ ವಹಿಸಿಕೊಂಡ ತಂಡ ಚಾಂಪಿಯನ್ ಪಡೆದುಕೊಂಡಿತು. ಇದರಿಂದ ಮತ್ತಷ್ಟು ಜನಪ್ರಿಯತೆ ಸಿಕ್ಕಿತು. ಇದಾದ ಬಳಿಕ ಅದೇ ವಾಹಿನಿಯಲ್ಲಿ ‘ಯಾರಿಗುಂಟು ಯಾರಿಗಿಲ್ಲ’ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದ ಅಪ್ಪಣ್ಣನಿಗೆ ಪೈಲ್ವಾನ್ ಚಿತ್ರ ತಂಡದಿಂದ ಚಿತ್ರದಲ್ಲಿ ನಟಿಸಲು ಕರೆ ಬಂತು.

ಈಗಾಗಲೇ 50 ದಿನಗಳು ಪೂರೈಸಿರುವ ಪೈಲ್ವಾನ್ ಚಿತ್ರ ಯಶಸ್ಸಿನತ್ತ ಸಾಗಿದೆ. ಈ ಚಿತ್ರ ಮುಗಿಯೋವರೆಗೂ ಪ್ರಮುಖ ಹಾಸ್ಯ ನಟನಾಗಿ ಜನರಿಗೆ ಹಾಸ್ಯದ ನಗೆಗಡಲಲ್ಲಿ ತೇಲಿಸಿದ್ದಾರೆ. ಸುದೀಪ್ ಮತ್ತು ಸುನಿಲ್ ಶೆಟ್ಟಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಅಪ್ಪಣ್ಣ ರಾಮದುರ್ಗ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಂತಹ ಹಾಸ್ಯ ನಟರ ಅಗತ್ಯವಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಖುದ್ದಾಗಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರೇ ಬಾಲಿವುಡ್ ಚಿತ್ರ ರಂಗಕ್ಕೆ ಬಾ ಎಂದು ಆಹ್ವಾನ ನೀಡಿದ್ದಾರಂತೆ. ಪೈಲ್ವಾನ್ ಸಿನೆಮಾದ ಬಳಿಕ ಅಪ್ಪಣ್ಣನಿಗೆ ಹಲವು ಚಿತ್ರಗಳಲ್ಲಿ ನಟಿಸಲು ಅವಕಾಶಗಳು ದೊರೆತಿದ್ದು, ಸದ್ಯ ಸಿನೆಮಾ ಮತ್ತು ಕನ್ನಡ ಖಾಸಗಿ ವಾಹಿನಿಯ ಹಾಸ್ಯ ಶೋಗಳಲ್ಲಿ ಬ್ಯುಝಿಯಾಗಿದ್ದಾರೆ.

share
ಮೌಲಾಲಿ ಕೆ ಆಲಗೂರ ಬೋರಗಿ
ಮೌಲಾಲಿ ಕೆ ಆಲಗೂರ ಬೋರಗಿ
Next Story
X