ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ 911, ಬಿಜೆಪಿಗೆ 716 ಕ್ಷೇತ್ರಗಳಲ್ಲಿ ಗೆಲುವು
ಸಂಪೂರ್ಣ ಫಲಿತಾಂಶ ಶೀಘ್ರದಲ್ಲಿ...
ಹೊಸದಿಲ್ಲಿ, ನ.19: ರಾಜಸ್ಥಾನದ 49 ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಕಾಂಗ್ರೆಸ್ 911 ಮತ್ತು ಬಿಜೆಪಿ 716 ಸೀಟುಗಳಲ್ಲಿ ಜಯ ಗಳಿಸಿವೆ.
7,942 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಇಂದು ಸಂಜೆಯ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. 2105 ವಾರ್ಡ್ ಗಳಿಗೆ ಶನಿವಾರ ಮತದಾನ ನಡೆದಿದೆ.
ಕಾಂಗ್ರೆಸ್ 911, ಬಿಜೆಪಿ 716, ಪಕ್ಷೇತರ 376, ಬಿಎಸ್ಪಿ 15, ಸಿಪಿಎಂ 2 ಮತ್ತು ಎನ್ ಸಿಪಿ 2 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
Next Story