ಸುಂದರಂ ಮೋಟರ್ಸ್ ನ ಮರ್ಸಿಡಿಸ್ ಎಎಂಜಿ ಸೆಂಟರ್ ಗೆ ಯಶಸ್ವೀ ಐದು ವರ್ಷ

ಬೆಂಗಳೂರು : ಮರ್ಸಿಡಿಸ್ ಬೆಂಝ್ ನ ಹೈ ಪರ್ಫಾರ್ಮೆನ್ಸ್ ಕಾರುಗಳ ವಿಶೇಷ ವಿಭಾಗ ಮರ್ಸಿಡಿಸ್ ಎಎಂಜಿ ಸೆಂಟರ್ ಯಶಸ್ವೀ ಐದು ವರ್ಷಗಳನ್ನು ಇತ್ತೀಚಿಗೆ ಪೂರೈಸಿದೆ. ಎಎಂಜಿ ಪರ್ಫಾರ್ಮೆನ್ಸ್ ಸೆಂಟರ್ ಎಂದೇ ಖ್ಯಾತವಾಗಿರುವ ಈ ಎಕ್ಸ್ ಕ್ಲೂಸಿವ್ ವಿಭಾಗ ಉನ್ನತ ಸಾಮರ್ಥ್ಯದ, ವಿಶೇಷ ಅತ್ಯಾಧುನಿಕ ವಿನ್ಯಾಸದ ಕಾರು ಪ್ರಿಯರ ನೆಚ್ಚಿನ ತಾಣವಾಗಿದೆ.
ಮರ್ಸಿಡಿಸ್ ಎಎಂಜಿ ಸೆಂಟರ್ ಜಾಗತಿಕವಾಗಿ ಕೆಲವು ಪ್ರಮುಖ ನಗರಗಳಲ್ಲಿ ಮಾತ್ರ ಇದ್ದು ಬೆಂಗಳೂರಿನ ಕೇಂದ್ರ ಇಡೀ ದಕ್ಷಿಣ ಭಾರತಕ್ಕೆ ಪ್ರಪ್ರಥಮವಾಗಿದೆ. 2014 ರಲ್ಲಿ ಪ್ರಾರಂಭವಾದ ಈ ಎಎಂಜಿ ಸೆಂಟರ್ ಕರ್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳ ವಿಲಾಸಿ ಕಾರು ಪ್ರಿಯರ ಪಾಲಿನ ಆದ್ಯತೆಯ ಕೇಂದ್ರವಾಗಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 150 ಎಎಂಜಿ ಕಾರುಗಳಿವೆ ಹಾಗು ಪ್ರತಿದಿನ ಈ ಕಾರುಗಳ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಈ ಸುಸಜ್ಜಿತ, ಆಕರ್ಷಕ ಎಎಂಜಿ ಪರ್ಫಾರ್ಮೆನ್ಸ್ ಸೆಂಟರ್ ಮರ್ಸಿಡಿಸ್ ಎಎಂಜಿ ಕಾರುಗಳ ಎಕ್ಸ್ ಕ್ಲೂಸಿವ್ ಗ್ರಾಹಕರಿಗೆ ಸೇವೆ ಹಾಗು ಸಮಗ್ರ ಮಾಹಿತಿ ನೀಡುತ್ತದೆ. ಜೊತೆಗೆ ಜಾಗತಿಕವಾಗಿ ಹೊರಬರುವ ಹೊಸ ಎಎಂಜಿ ಕಾರುಗಳ ಕುರಿತು ವಿವರ ಹಾಗು ಅವುಗಳ ಸವಾರಿಯ ಖುಷಿ ಒದಗಿಸುತ್ತದೆ.
ಎಎಂಜಿ ಕಾರುಗಳು ಹಾಗು ಹೈ ಪರ್ಫಾರ್ಮೆನ್ಸ್ ಸೆಂಟರ್ ಕುರಿತು ಹೆಚ್ಚಿನ ಮಾಹಿತಿಗೆ ಈ ನಂಬರನ್ನು ಸಂಪರ್ಕಿಸಿ +91-9148155175 ಅಥವಾ ಈ ಇಮೇಲ್ ಗೆ ಬರೆಯಿರಿ panchajanya.c@sundarammotors.com
ಪ್ರತಿಷ್ಠಿತ ಟಿವಿಎಸ್ ಸುಂದರಂ ಮೋಟರ್ಸ್
ಟಿವಿ ಸುಂದರಂ ಐಯ್ಯಂಗಾರ್ ಆ್ಯಂಡ್ ಸನ್ಸ್ ಪ್ರೈ. ಲಿ. ನ ಅಂಗ ಸಂಸ್ಥೆಯಾಗಿರುವ ಸುಂದರಂ ಮೋಟರ್ಸ್ ಕರ್ನಾಟಕ ಹಾಗು ತಮಿಳುನಾಡಿನಲ್ಲಿ ಮರ್ಸಿಡಿಸ್ ಬೆಂಝ್ ಕಾರುಗಳ ಅಧಿಕೃತ ಡೀಲರ್ ಆಗಿದೆ.
ಅಟೋಮೊಬೈಲ್ ಕ್ಷೇತ್ರದಲ್ಲಿ ಭಾರೀ ಹೆಸರು ಹಾಗು ವಿಶ್ವಾಸಾರ್ಹತೆ ಗಳಿಸಿರುವ ಸುಂದರಂ ಮೋಟರ್ಸ್ 6 ದಶಕಗಳಿಗೂ ಹೆಚ್ಚು ಕಾಲದಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಸಂಸ್ಥೆ. ಇದರ ಮೂಲಕ 2001 ರಲ್ಲಿ ಕರ್ನಾಟಕದಲ್ಲಿ ಹಾಗು 2003 ರಲ್ಲಿ ಕೊಯಂಬತ್ತೂರಿನಲ್ಲಿ ಮರ್ಸಿಡಿಸ್ ಬೆಂಝ್ ಡೀಲರ್ ಶಿಪ್ ಪ್ರಾರಂಭಿಸಲಾಯಿತು.
ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದು ಹಾಗು ಸದಾ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುವುದು ಸುಂದರಂ ಮೋಟರ್ಸ್ ನ ವಿಶೇಷತೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.








