ಕೊಳ್ಳೇಗಾಲ: ಕುಕ್ಕರ್ ಸಿಡಿದು ಅಂಗನವಾಡಿ ಕೇಂದ್ರದ ನಾಲ್ಕು ಮಕ್ಕಳಿಗೆ ಗಾಯ

ಕೊಳ್ಳೇಗಾಲ, ನ.20: ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಸಿಡಿದು ನಾಲ್ಕು ಮಕ್ಕಳು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕುಣಗಳ್ಳಿ ಗ್ರಾಮದ ದಲಿತ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದ ಕುನ್ನಮಯ್ಯ, ತರುಣ, ಕೃಷ್ಣ ಹಾಗೂ ಜ್ಞಾನೇಶ್ ಗಾಯಗೊಂಡಿರುವ ಮಕ್ಕಳು.
ಘಟನೆ ವಿವರ: ತಾಲ್ಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಸ್ವಂತ ಕಟ್ಟಡವಿಲ್ಲದೆ ಅಂಗನವಾಡಿ ಕೇಂದ್ರ ದಲಿತ ಬೀದಿಯ ಛಾವಡಿಯಲ್ಲಿ ಚಿಕ್ಕದಾದ ಕೊಠಡಿಯಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಅಲ್ಲಿಯೇ ಮಕ್ಕಳ ವಿದ್ಯಾಭ್ಯಾಸ, ಅಡುಗೆ ಕೆಲಸ ಹಾಗೂ ಪಠ್ಯೇತರ ಚಟುವಟಿಕೆಗಳು ನಡೆಸಲಾಗಿದ್ದು. ಇಂದು ಬೆಳಿಗ್ಗೆ 11:30 ಗಂಟೆಯಲ್ಲಿ ಎಂದಿನಂತೆ ಅಡುಗೆ ಮಾಡಲು ಗ್ಯಾಸ್‍ಸಿಲಿಂಡರ್ ನ ಸ್ಟೋವ್ ಮೇಲೆ ಕುಕ್ಕುರ್ ಇಟ್ಟ ಅಂಗನವಾಡಿ ಕಾರ್ಯಕರ್ತೆಯರ ಬೇಜಾವ್ದಾರಿಯಿಂದಾಗಿ ಕುಕ್ಕರ್ ಸಿಡಿದು ಅಲ್ಲೇ ಆಟವಾಡುತ್ತಿದ್ದ ಮಕ್ಕಳ ಮೇಲೆ ಸಾಂಬಾರ್ ಮೈಮೇಲೆ ಚೆಲ್ಲಿ ಗಾಯಗೊಂಡಿದ್ದಾರೆ.
ಬಳಿಕ ಮಾಂಬಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಯಿತು. ವಿಷಯ ತಿಳಿದ ತಕ್ಷಣ ಸಿಡಿಪಿಒ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಆರೈಕೆ ಮಾಡಿ ಬಳಿಕ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಬೇಜಾವ್ದಾರಿಗೆ ನೋಟೀಸ್ ಜಾರಿ ಮಾಡುವುದಾಗಿ ಪೋಷಕರಿಗೆ ತಿಳಿಸಿದರು.
ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದೇ ಇಂತಹ ಅನಾಹುತಗಳು ಆಗುತ್ತಿದೆ. ಅದಕ್ಕೆ ಶೀಗ್ರದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣಾಧಿಕಾರಿರವರಿಗೆ ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷ ರಂಗಸ್ವಾಮಿ, ಗ್ರಾಮಸ್ಥರುಗಳಾದ ಮಹೇಶ್, ಲೋಕೇಶ್, ನಿಂಗಯ್ಯ ಸೇರಿದಂತೆ ಹಲವರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಡಿಪಿಒ ನಾಗೇಶ್ ಅಂಗನವಾಡಿ ನಿರ್ಮಾಣ ಮಾಡಲು ಇಲಾಖೆಯಲ್ಲಿ ಅನುದಾನ ಇದೆ. ಆದರೆ ಜಾಗವಿಲ್ಲದೆ ಅಂಗನವಾಡಿ ಕಟ್ಟಟಡ ನಿರ್ಮಾಣವಾಗುತ್ತಿಲ್ಲ. ಗ್ರಾಮಸ್ಥರು ಎಲ್ಲಾ ಸೇರಿ ಜಾಗ ಕೊಡಿಸಿದರೆ ಶೀಘ್ರದಲ್ಲಿ ಅಂಗನವಾಡಿ ನೂತನ ಕಟ್ಟಡ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಎಂದರು.









