Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಯೋಧ್ಯೆ ತೀರ್ಪಿನ ತಾತ್ಪರ್ಯವೇನು?

ಅಯೋಧ್ಯೆ ತೀರ್ಪಿನ ತಾತ್ಪರ್ಯವೇನು?

ನ್ಯಾಯಾಂಗದ ಸ್ವವಿವೇಚನೆ ಮತ್ತು ಅದನ್ನು ಆಧರಿಸಿ ನೀಡುವ ಆದೇಶಗಳು ಸಂಪೂರ್ಣ ನ್ಯಾಯವನ್ನು ಒದಗಿಸುತ್ತವೆಯೇ?

ವಾರ್ತಾಭಾರತಿವಾರ್ತಾಭಾರತಿ20 Nov 2019 11:43 PM IST
share
ಅಯೋಧ್ಯೆ ತೀರ್ಪಿನ ತಾತ್ಪರ್ಯವೇನು?

ಕೃಪೆ: Economic and Political Weekly

ಬಾಬರಿ ಮಸೀದಿಯ ಒಡೆತನಕ್ಕೆ ಸಂಬಂಧಪಟ್ಟ ವ್ಯಾಜ್ಯದ ಬಗ್ಗೆ ಸುಪ್ರೀಂಕೋರ್ಟು ಕೊಟ್ಟಿರುವ ಆದೇಶದಷ್ಟೇ ದೊಡ್ಡಧ್ವನಿಯಲ್ಲಿ ಅದರೊಳಗಿರುವ ಮೌನವೂ ಮಾತಾಡುತ್ತದೆ. ಅಂದರೆ ಈ ವಿವಾದದ ಬಗ್ಗೆ ಕೋರ್ಟಿನ ಆದೇಶವೇನೆಂದು ತಿಳಿದುಕೊಳ್ಳಬೇಕೆಂದರೆ ಅದು ಏನನ್ನು ಹೇಳುತ್ತಿದೆ ಎಂಬಷ್ಟೇ ಮುಖ್ಯವಾಗಿ ಅದು ಏನನ್ನು ಹೇಳಲು ನಿರಾಕರಿಸುತ್ತಿದೆ ಎಂಬುದನ್ನೂ ಸಹ ಅರ್ಥಮಾಡಿಕೊಳ್ಳಬೇಕು. ವಿವಾದಿತ 2.77 ಎಕರೆ ಜಮೀನಿನ ಒಡೆತನವನ್ನು ದೇವರಾದ ‘ಭಗವಾನ್ ಶ್ರೀರಾಂ ವಿರಾಜ್‌ಮಾನ್’ ಮತ್ತು ಅವರ ಪೋಷಕರಿಗೆ ನೀಡಿದ ನಂತರ ಕೋರ್ಟು ಉಳಿದ ಎಂಟು ನಿರ್ದೇಶನಗಳನ್ನು ಏಕೆ ಕೊಡಬೇಕಾಯಿತೆಂಬುದು ಆಶ್ಚರ್ಯಕರ. ಹಾಗೆ ನೋಡಿದರೆ 1949ರಿಂದಲೂ ನಡೆಯುತ್ತಿದ್ದ ಈ ವಿವಾದದಲ್ಲಿ ಅದರ ಒಡೆತನವನ್ನು ಆಗ್ರಹಿಸಿ ಹಲವಾರು ಹಿಂದೂ ಹಾಗೂ ಮುಸ್ಲಿಂ ಕಕ್ಷಿದಾರರು ದಾವೆ ಹೂಡಿದ್ದರು. ಆದ್ದರಿಂದ ಒಮ್ಮೆ ವಿವಾದಿತ ಜಮೀನು ಭಗವಾನ್ ರಾಮನಿಗೆ ಸೇರಬೇಕೆಂದು ಆದೇಶಿಸಿದ ನಂತರದಲ್ಲಿ ಆ ಜಾಗದಲ್ಲಿ ಏನಾಗುತ್ತದೋ ಎಂಬುದರ ಬಗ್ಗೆ ನ್ಯಾಯಾಲಯವೇಕೆ ಚಿಂತಿಸಬೇಕಿತ್ತು ಎಂದು ನಾವು ಕೇಳಬೇಕಿದೆ.

1993ರ ಅಯೋಧ್ಯಾ ಕಾಯ್ದೆಯನ್ವಯ ಕೇಂದ್ರ ಸರಕಾರವು 1993ರಲ್ಲಿ ಆ ಸ್ಥಳವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು ಕೆಲವು ಶರತ್ತಿಗೆ ಒಳಪಟ್ಟು ಅದನ್ನು ಯಾವ ಪ್ರಾಧಿಕಾರದ ಅಥವಾ ಟ್ರಸ್ಟಿನ ಸುಪರ್ದಿಗೆ ವಹಿಸುವ ಅಧಿಕಾರವನ್ನು ಪಡೆದುಕೊಂಡಿದೆ. ಅಯೋಧ್ಯಾ ಆದೇಶವನ್ನು ನೀಡಿದ ನಂತರದಲ್ಲಿ 1993ರ ಕಾಯ್ದೆಯನ್ವಯ ಸರಕಾರವು ಯಾವ ರೀತಿಯಲ್ಲಿ ಮಾಡುವುದು ಉಚಿತವೆಂದು ಭಾವಿಸುತ್ತದೋ ಆ ರೀತಿಯಲ್ಲಿ ಮಾಡಲು ಅವಕಾಶ ನೀಡದೆ ಅದನ್ನೂ ಹೀಗೆಯೇ ಮಾಡಬೇಕೆಂದು ಸುಪ್ರೀಂ ಕೋರ್ಟು ನಿರ್ದೇಶನವನ್ನು ನೀಡಿಬಿಟ್ಟಿದೆ. ನ್ಯಾಯಾಲಯವು ಈ ರೀತಿಯ ನಿರ್ದೇೀಶನ ಕೊಡುವ ಅಗತ್ಯವೇನಿತ್ತು ಎಂಬುದು ಸೋಜಿಗವಾಗಿದೆಯಲ್ಲದೆ ಕೇಂದ್ರ ಸರಕಾರವು ನಿಜಕ್ಕೂ ಎಲ್ಲವನ್ನೂ ಕೋರ್ಟು ಹೇಳಿದಂತೆ ಮಾಡುತ್ತದೆಯೇ ಎಂಬುದನ್ನು ಸಹ ಕಾದು ನೋಡಬೇಕಿದೆ. ‘‘ಕಕ್ಷಿದಾರರಿಬ್ಬರಿಗೂ ಸಂಪೂರ್ಣ ನ್ಯಾಯ ಒದಗಿಸಬೇಕಾದ ಅಗತ್ಯವು ಕಂಡುಬಂದರೆ’’ ಅದನ್ನು ಮಾಡಲು ಸುಪ್ರೀಂ ಕೋರ್ಟಿಗೆ ಅಧಿಕಾರ ನೀಡುವ ಸಂವಿಧಾನದ 142ನೇ ಕಲಮಿನ ಪ್ರಕಾರ ಕೋರ್ಟು ಈ ನಿರ್ದೇಶನವನ್ನು ನೀಡಿದೆ. ಈ ನಿರ್ದೇಶನಗಳು ಗಾಳಿಯಲ್ಲೇನೂ ತೇಲಿ ಬಂದಿದ್ದಲ್ಲ.

‘ಮಾನವ ಇತಿಹಾಸದ ಮತ್ತು ನಡವಳಿಕೆಗಳ ಸಂಕೀರ್ಣತೆಯನ್ನು’ ಗಮನದಲ್ಲಿಟ್ಟುಕೊಂಡಾಗ ಕೆಲವೊಮ್ಮೆ ಶಾಸನಾತ್ಮಕ ಕಾನೂನಿನಲ್ಲಿರುವ ‘ಮೌನಗಳನ್ನು’ ಮೀರಬೇಕಾದ ಅಗತ್ಯ ಉದ್ಭವಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದಲ್ಲಿ ಈ ಕಲಮನ್ನು ಸೇರಿಸಲಾಯಿತೆಂದು ಈ ನ್ಯಾಯಾದೇಶದಲ್ಲಿ ಕೋರ್ಟು ವಿವರವಾಗಿ ಹೇಳುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಒಂದೆಡೆ ಹಿಂದೂ ಕಕ್ಷಿದಾರರು ವಿವಾದಿತ ಜಾಗದ ಮೇಲೆ ತಮ್ಮ ಒಡೆತನವನ್ನು ಕಾನೂನಾತ್ಮಕವಾಗಿ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದರೂ ಮುಸ್ಲಿಂ ಕಕ್ಷಿದಾರರಿಗೂ ಪರಿಹಾರ ನೀಡುವ ಮೂಲಕ ಮಾತ್ರ ಸರಿಸಮನಾದ ನ್ಯಾಯ ಒದಗಿಸಿದಂತಾಗುತ್ತಿತ್ತು ಎಂದು ಕೆಲವರು ಸಕಾರಣವಾಗಿ ಈ ಆದೇಶವನ್ನು ಸಮರ್ಥಿಸಿಕೊಳ್ಳಬಹುದು. ಹೀಗಾಗಿ ಕೋರ್ಟು ಅಯೋಧ್ಯಾ ಕಾಯ್ದೆಯ ಭಾಗವಾಗಿ ಕೇಂದ್ರ ಸರಕಾರವು ಯಾವುದೇ ಯೋಜನೆಯನ್ನು ರೂಪಿಸಿದರೂ ಮಸೀದಿಯ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಬೋರ್ಡಿಗೆ ಜಮೀನನ್ನು ಕೊಡುವುದನ್ನು ಅದರ ಅಂತರ್ಗತ ಭಾಗವನ್ನಾಗಿಸಿದೆ.

ಆದರೂ ಒಂದು ಪ್ರಶ್ನೆ ಉಳಿದುಕೊಳ್ಳುತ್ತದೆ: ಇದನ್ನು ‘ನ್ಯಾಯ’ವೆನ್ನ ಬಹುದೇ? ಹಿಂದೂಗಳ ಒಡೆತನವು ಕಾನೂನಿನ ಪ್ರಕಾರ ಸಾಬೀತಾಗದಿದ್ದಲ್ಲಿ, ‘ಮಾನವರ ಇತಿಹಾಸ ಮತ್ತು ನಡವಳಿಕೆಗಳ ಸಂಕೀರ್ಣತೆಯ’ ಯಾವ ನಿರ್ದಿಷ್ಟ ಅಂಶಗಳಿಂದಾಗಿ ಕೋರ್ಟು ಉತ್ತರಪ್ರದೇಶದ ಸುನ್ನಿ ವಕ್ಫ್ ಬೋರ್ಡಿಗೆ ಜಮೀನನ್ನು ಕೊಡಬೇಕೆಂದು ಉತ್ತರ ಪ್ರದೇಶ ಸರಕಾರಕ್ಕೆ ಆದೇಶ ನೀಡುವಂತೆ ಪ್ರೇರೇಪಿಸಿತು?

 ಅದಕ್ಕೆ ಉತ್ತರ ಸಿಗುವುದು ಅಷ್ಟೇನೂ ಕಷ್ಟವಲ್ಲ. ಬಾಬರಿ ಮಸೀದಿಯಲ್ಲಿ 1949ರ ಮಧ್ಯರಾತ್ರಿ ನಡುಗುಮ್ಮಟದ ಅಡಿಯಲ್ಲಿ ಮೂರ್ತಿಗಳನ್ನು ಸ್ಥಾಪಿಸುವ ಮೂಲಕ ಮತ್ತು 1992ರಲ್ಲಿ ಎಲ್ಲರೆದುರಿನಲ್ಲೇ ಕರಸೇವಕರ ಒಂದು ಗುಂಪು ಬಾಬರಿ ಮಸೀದಿಯ ಗುಮ್ಮಟವನ್ನು ಕೆಡವಿ ಬೀಳಿಸಿದಾಗ ಎರಡೆರಡು ಬಾರಿ ಮಸೀದಿಯನ್ನು ಅಪವಿತ್ರಗೊಳಿಸಲಾಗಿದೆಯೆಂಬುದನ್ನು ಕೋರ್ಟು ಎರಡು ಮಾತಿಲ್ಲದೆ ಒಪ್ಪಿಕೊಳ್ಳುತ್ತದೆ.

ಆದರೆ ಈ ಎರಡೂ ಘಟನೆಗಳೂ ಆ ಜಾಗದ ಮೇಲೆ ಹಿಂದೂಗಳ ಒಡೆತನದ ದಾವೆಯ ಮಾನ್ಯತೆಗೇನೂ ಧಕ್ಕೆ ತರುವುದಕ್ಕೆ ಕೋರ್ಟು ಅವಕಾಶ ಮಾಡಿಕೊಟ್ಟಿಲ್ಲ. ಅದು ಬಾಬರಿ ಮಸೀದಿಯ ನಡುಗುಮ್ಮಟದ ಕೆಳಗೆ ರಾಮ ಜನ್ಮಭೂಮಿಯಿದೆಯೆಂಬ ಹಿಂದೂಗಳ ನಂಬಿಕೆ ಹಾಗೂ ಶ್ರದ್ಧೆಗಳಿಗೆ ಹೆಚ್ಚಿನ ತೂಕವನ್ನು ಕೊಟ್ಟಿದೆಯೇ ವಿನಾ 1857ರ ನಂತರವೂ ಮುಸ್ಲಿಮರು ಬಾಬರಿ ಮಸೀದಿಯಲ್ಲಿ ನಮಾಝ್ ಮಾಡುತ್ತಿದ್ದರು ಎಂಬ ಪ್ರತಿಪಾದನೆಗೆ ಯಾವ ತೂಕವನ್ನೂ ನೀಡಿಲ್ಲ. ಆದ್ದರಿಂದ ನ್ಯಾಯಾಲಯವು ಬಾಯಿಬಿಟ್ಟು ಹೇಳದೇ ಇರುವುದೇನೆಂದರೆ: 1949ರ ಹಾಗೂ 1992ರ ಕಾನೂನು ಬಾಹಿರ ನಡವಳಿಕೆಗಳಿಂದ ಹಿಂದೂಳ ಪ್ರತಿಪಾದನೆಗೆ ಇನ್ನೂ ಹೆಚ್ಚು ಪುಷ್ಟಿ ಸಿಕ್ಕಿರುವುದು ನಿಜ. ಆದರೂ ಆ ಲಾಭವನ್ನು ಹಿಂದೂಗಳು ಪಡೆಯುವುದನ್ನೇನೂ ನಾವು ನಿರ್ಬಂಧಿಸುವುದಿಲ್ಲ.

ಮುಸ್ಲಿಂ ಕಕ್ಷಿದಾರರು 1949 ಮತ್ತು 1992ರಲ್ಲಿ ಅನುಭವಿಸಿದ ಅನ್ಯಾಯಗಳಿಗೆ ನಾವು ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಈ ಆದೇಶದಲ್ಲಿ ಅವರಿಗೆ ಏನೂ ನೀಡಿದ್ದೇವೆಯೋ ಅದರಿಂದ ಅವರು ತೃಪ್ತರಾಗುತ್ತಾರೆಂದು ನಾವು ನಿರೀಕ್ಷಿಸುತ್ತೇವೆ. ಹೀಗಾಗಿ ಸುಪ್ರೀಂ ಕೋರ್ಟು ನೀಡಿರುವ ಆದೇಶವನ್ನು ಹೆಚ್ಚೆಂದರೆ ಒಂದು ನ್ಯಾಯಿಕ ದಾನಭಿಕ್ಷೆಯೆಂದಷ್ಟೇ ಅರ್ಥ ಮಾಡಿಕೊಳ್ಳಬಹುದು. ಒಂದು ಸಂಪೂರ್ಣ ನ್ಯಾವು ಜಾಗದ ಒಡೆತನವನ್ನು ತೀರ್ಮಾನಿಸುವುದರ ಜೊತೆಗೆ 1992ರಲ್ಲಿ ನಡೆದ ಅನ್ಯಾಯಗಳಿಗೂ ಒಂದು ನೈಜವಾದ ಮತ್ತು ಅರ್ಥಪೂರ್ಣ ರೀತಿಯಲ್ಲಿ ಪರಿಹಾರವನ್ನು ಒಳಗೊಳ್ಳಬೇಕಿತ್ತು. ಈ ವಿಷಯದಲ್ಲಿ ಕೋರ್ಟಿನ ಇತಿಹಾಸವು ಅದರ ಹುಳುಕನ್ನು ಬಿಚ್ಚಿಡುವಂತಿದೆ. ತನ್ನ ಆದೇಶಕ್ಕೆ ವ್ಯತಿರಿಕ್ತವಾಗಿ ಮಸೀದಿಯನ್ನು ರಕ್ಷಿಸಲು ಯಾವ ಕ್ರಮಗಳನ್ನೂ ಕೈಗೊಳ್ಳದ ಅಂದಿನ ಉತ್ತರಪ್ರದೇಶದ ಮುಖ್ಯಮಂತ್ರಿಯ ಮೇಲೆ ಕೋರ್ಟು ಯಾವ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ. ಬಾಬರಿ ಮಸೀದಿಯ ನಾಶ ಪ್ರಕರಣದ ಕ್ರಿಮಿನಲ್ ವಿಚಾರಣೆಯು ಬಸವನಹುಳುವಿನಂತೆ ತೆವಳುತ್ತಿದ್ದು ಕೋರ್ಟು ತಾನು ವಿಧಿಸಿದ ಗಡುವನ್ನು ತಾನೇ ಪದೇಪದೇ ವಿಸ್ತರಿಸುತ್ತಾ ಬಂದಿದೆ. ಸಂವಿಧಾನದ 142ನೇ ಕಲಮಿನನ್ವಯ ನೋಡುವುದಾದರೆ ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಆದೇಶವನ್ನು ಯಾವ ಅರ್ಥದಲ್ಲೂ ‘ಸಂಪೂರ್ಣ ನ್ಯಾಯ’ವೆಂದು ಹೇಳಲಾಗುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X