ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟ : ರಾಷ್ಟ್ರಮಟ್ಟಕ್ಕೆ ಅಬ್ದುಲ್ಲತೀಫ್ ಸಾಹೇಬ್ ಆಯ್ಕೆ

ಮಂಗಳೂರು, ನ.21: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 40ನೆ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಪುತ್ತೂರು ಕಾವು ನಿವಾಸಿ ಅಬ್ದುಲ್ಲತೀಫ್ ಸಾಹೇಬ್ 400 ಮೀ. ತಡೆ ಓಟದಲ್ಲಿ ದ್ವಿತೀಯ, 200 ಮೀ. ಓಟದಲ್ಲಿ ತೃತೀಯ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದು 2020ರ ಫೆಬ್ರವರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
Next Story





