Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ​ಎರಡು ವಿಶ್ವವಿದ್ಯಾಲಯಗಳು ಮತ್ತು ಎರಡು...

​ಎರಡು ವಿಶ್ವವಿದ್ಯಾಲಯಗಳು ಮತ್ತು ಎರಡು ಪ್ರತಿಭಟನೆಗಳು!

ವಾರ್ತಾಭಾರತಿವಾರ್ತಾಭಾರತಿ21 Nov 2019 11:56 PM IST
share
​ಎರಡು ವಿಶ್ವವಿದ್ಯಾಲಯಗಳು ಮತ್ತು ಎರಡು ಪ್ರತಿಭಟನೆಗಳು!

ವಿರುದ್ಧ ಕಾರಣಗಳಿಗಾಗಿ ಎರಡು ವಿಶ್ವವಿದ್ಯಾಲಯಗಳು ದೇಶದಲ್ಲಿ ಸುದ್ದಿಯಲ್ಲಿವೆ. ಮೊದಲನೆಯದು, ವಿಶ್ವಕ್ಕೆ ಹಲವು ಮೇಧಾವಿಗಳನ್ನು ನೀಡಿರುವ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ. ಈ ವಿಶ್ವವಿದ್ಯಾಲಯ ಸಕಾರಣಗಳಿಗಾಗಿ ಬಹುಕಾಲದಿಂದ ಸುದ್ದಿಯಲ್ಲಿದೆ. ಇಲ್ಲಿ ಕಲಿತ ಮೇಧಾವಿಗಳು ವಿಶ್ವದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಿರುವುದು ಜೆಎನ್‌ಯು ಸುದ್ದಿಯಲ್ಲಿರಲು ಒಂದು ಪ್ರಮುಖ ಕಾರಣವಾಗಿದೆ. ನಮ್ಮ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ. ಇತ್ತೀಚೆಗೆ ಅರ್ಥಶಾಸ್ತ್ರಕ್ಕಾಗಿ ನೊಬೆಲ್ ಗೌರವವನ್ನು ತನ್ನದಾಗಿಸಿಕೊಂಡ ಅಭಿಜಿತ್ ಬ್ಯಾನರ್ಜಿ ಇದೇ ವಿಶ್ವವಿದ್ಯಾನಿಲಯದ ಕೊಡುಗೆ. ಈ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದವರಷ್ಟೇ ಅಲ್ಲ, ವಿದೇಶದ ಖ್ಯಾತನಾಮರೂ ಈ ವಿವಿಯ ಜೊತೆಗೆ ಗುರುತಿಸಿಕೊಂಡಿದ್ದಾರೆ. ಲಿಬಿಯಾದ ಮಾಜಿ ಪ್ರಧಾನಿ ಅಲಿ ಝೈದಾನ್, ನೇಪಾಳದ ಮಾಜಿ ಪ್ರಧಾನಿ ಬಾಪೂರಾಮ್ ಭಟ್ಟಾರಾಯ್‌ರಂತಹ ರಾಜಕಾರಣಿಗಳನ್ನು ಈ ವಿಶ್ವವಿದ್ಯಾನಿಲಯ ಬೆಳೆಸಿದೆ.

ಈ ವಿಶ್ವವಿದ್ಯಾನಿಲಯದ ಗುಣಮಟ್ಟ ದೇಶದಲ್ಲೇ ಅತ್ಯುನ್ನತವಾಗಿದೆ. 2016ರಲ್ಲಿ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ 3ನೇ ರ್ಯಾಂಕ್‌ನ್ನು ತನ್ನದಾಗಿಸಿಕೊಂಡಿತ್ತು. 2017ರಲ್ಲಿ ಎರಡನೇ ರ್ಯಾಂಕ್‌ನ್ನು ತನ್ನದಾಗಿಸಿಕೊಂಡಿದ್ದು, 2018ರಲ್ಲಿ ರಾಷ್ಟ್ರಪತಿಯಿಂದ ಭಾರತದ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂಬ ಗೌರವಕ್ಕೆ ಪಾತ್ರವಾಗಿತ್ತು. 2018ರಲ್ಲಿ ಭಾರತದ ಒಟ್ಟಾರೆ ಎಲ್ಲ ಸರಕಾರಿ ಸಾಂಸ್ಥಿಕ ಶ್ರೇಯಾಂಕದಲ್ಲಿ ಜೆಎನ್‌ಯು ಆರನೇ ಸ್ಥಾನ ಗಳಿಸಿದ್ದರೆ, ವಿಶ್ವವಿದ್ಯಾನಿಲಯಗಳಲ್ಲಿ 2ನೇ ಸ್ಥಾನದಲ್ಲಿತ್ತು. ಇದು ಸರಕಾರಿ ಅಂಕಿಅಂಶಗಳಾಗಿರುವುದರಿಂದ ಸದ್ಯ ಇದನ್ನು ಯಾವ ರಾಜಕಾರಣಿಯೂ ಅಲ್ಲಗಳೆಯುವಂತಿಲ್ಲ. ಮುಖ್ಯವಾಗಿ ‘ಸಾಮಾಜಿಕ ನ್ಯಾಯ’ದ ಕಾರಣಕ್ಕಾಗಿ ಜೆಎನ್‌ಯು ಶ್ರೇಷ್ಠ ವಿಶ್ವವಿದ್ಯಾನಿಲಯವೆನಿಸಿದೆ. ಈ ದೇಶದ ಶಿಕ್ಷಣಾಸಕ್ತ ತಳಸ್ತರದ ಬಡ, ಕೆಳಜಾತಿಯ ತರುಣರ ಪೊರೆದ ತಾಯಿಯ ಮಡಿಲು ಈ ವಿವಿ. ಉನ್ನತ ಶಿಕ್ಷಣ ಎಲ್ಲರಿಗೂ ಎಟುಕಬೇಕು ಎನ್ನುವ ಸಂವಿಧಾನದ ಆಶಯವನ್ನು ಜೆಎನ್‌ಯು ಕಳೆದ ಐವತ್ತು ವರ್ಷಗಳಿಂದ ಎತ್ತಿ ಹಿಡಿಯುತ್ತಾ ಬಂದಿದೆ. ಸರ್ವ ಜಾತಿ, ಧರ್ಮ, ಮೇಲು, ಕೀಳುಗಳನ್ನು ತೊಡೆದು ಹಾಕಿ ದೇಶದ ಬಹುತ್ವವನ್ನು ಇದು ಪ್ರತಿನಿಧಿಸುತ್ತಿದೆ. ಇಂತಹ ವಿಶ್ವವಿದ್ಯಾನಿಲಯದ ವಿರುದ್ಧ ಕೇಂದ್ರ ಸರಕಾರವೇ ಸಂಚು ನಡೆಸುತ್ತಿರುವುದು, ಅದನ್ನು ದಮನಿಸಲು ಯತ್ನಿಸುತ್ತಿರುವುದನ್ನು ಭಾರತದ ಸಂವಿಧಾನದ ಆಶಯದ ಮೇಲೆ ನಡೆಯುತ್ತಿರುವ ದಮನವಾಗಿ ತಿಳಿಯಬೇಕಾಗಿದೆ.

ಜೆಎನ್‌ಯುವಿನಲ್ಲಿ ಹೆಚ್ಚಳವಾಗಿರುವ ಶುಲ್ಕದ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಕಳೆದ ಕೆಲವು ದಿನಗಳಿಂದ ವಿಶ್ವವಿದ್ಯಾಲಯದ ಆವರಣ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಘರ್ಷ ತಾಣವಾಗಿ ಪರಿವರ್ತನೆಗೊಂಡಿದೆ. ಅಂಗವಿಕಲರು, ಅಂಧ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಎಂದು ನೋಡದೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಹೋರಾಟವನ್ನು ದಮನಿಸಲು ಹೊರಟಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣ ವಿಶ್ವವಿದ್ಯಾನಿಲಯವೊಂದರ ಶುಲ್ಕಕ್ಕೆ ಸಂಬಂಧಿಸಿದ್ದು ಎಂದು ಬಿಂಬಿಸಲಾಗುತ್ತಿದೆಯಾದರೂ, ಕಳೆದ ಐದಾರು ವರ್ಷಗಳಲ್ಲಿ ಜೆಎನ್‌ಯುವಿನಲ್ಲಾಗಿರುವ ಬೆಳವಣಿಗೆಗಳನ್ನು ಗಮನಿಸಿದವರಿಗೆ, ಜೆಎನ್‌ಯುವಿನಂತಹ ಮಹತ್ವದ ವಿಶ್ವವಿದ್ಯಾನಿಲಯವನ್ನು ನಾಶ ಮಾಡುವ ವ್ಯವಸ್ಥೆಯ ಸಂಚಿನ ವಿರುದ್ಧ ನಡೆಯುತ್ತಿರುವ ಹೋರಾಟವೆನ್ನುವುದು ಸ್ಪಷ್ಟವಾಗಿ ಬಿಡುತ್ತದೆ. ಮೋದಿ ನೇತೃತ್ವದ ಸರಕಾರವನ್ನು ಕಳೆದ ನಾಲ್ಕೈದು ವರ್ಷಗಳಿಂದ ವಿರೋಧ ಪಕ್ಷಗಳು ಕಾಡಿರುವುದಕ್ಕಿಂತ ಜೆಎನ್‌ಯು ಕಾಡಿದ್ದೇ ಹೆಚ್ಚು.

ಕೇಂದ್ರದ ಸರಕಾರ ಜನವಿರೋಧಿ ನೀತಿಗಳ ವಿರುದ್ಧ ಮೊದಲ ಪ್ರತಿಭಟನೆಯ ಧ್ವನಿ ಮೊಳಗಿದ್ದು ಈ ವಿಶ್ವವಿದ್ಯಾನಿಲಯದಿಂದ. ಜೆಎನ್‌ಯು ನಿರ್ಮಿಸುತ್ತಿರುವ ಮೇಧಾವಿಗಳ ಕುರಿತಂತೆ ಕೇಂದ್ರ ಸರಕಾರಕ್ಕೆ ಮಾತ್ರವಲ್ಲ, ಆರೆಸ್ಸೆಸ್‌ನಂತಹ ಸಂಘಟನೆಗಳಿಗೂ ಕೀಳರಿಮೆ ಇದ್ದಂತಿದೆ. ಇದೇ ಸಂದರ್ಭದಲ್ಲಿ, ಮೋದಿಯ ಜನವಿರೋಧಿ ನೀತಿಯ ವಿರುದ್ಧ ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರತಿಭಟನಾ ಧ್ವನಿ ದೇಶಾದ್ಯಂತ ಸದ್ದು ಮಾಡಿತು. ಶೂದ್ರರು, ದಲಿತರು ಸೇರಿದಂತೆ ಬಡವರಿಗೆ ಸರಕಾರದ ವತಿಯಿಂದ ಶಿಕ್ಷಣ ನೀಡುವುದನ್ನು ಆರಂಭದಿಂದಲೇ ವಿರೋಧಿಸುತ್ತಾ ಬಂದಿರುವ ಸಂಘಪರಿವಾರಕ್ಕೆ ಜೆಎನ್‌ಯು ಕುರಿತಂತೆ ತೀವ್ರ ಅಸಮಾಧಾನವಿದೆ. ಯಾವಾಗ ಸರಕಾರದ ವಿರುದ್ಧವೂ ಜೆಎನ್‌ಯು ಒಳಗಿಂದ ಪ್ರತಿಭಟನೆ ವ್ಯಕ್ತವಾಯಿತೋ ಅಲ್ಲಿಂದಲೇ ಈ ವಿವಿಯನ್ನು ಮುಗಿಸುವುದಕ್ಕೆ ಸರಕಾರ ಬೇರೆ ಬೇರೆ ತಂತ್ರಗಳನ್ನು ಅನುಸರಿಸತೊಡಗಿತು. ಜೆಎನ್‌ಯುವಿನಲ್ಲಿ ಇರುವ ವಿದ್ಯಾರ್ಥಿಗಳು ನಕ್ಸಲೈಟ್‌ಗಳು, ದೇಶದ್ರೋಹಿಗಳು ಎಂದು ಬಿಂಬಿಸಲು ಸರ್ವಪ್ರಯತ್ನವನ್ನು ಮಾಡಿ ವಿಫಲವಾಯಿತು.

ಜೆಎನ್‌ಯುವಿನಲ್ಲಿ ಕಾಂಡೋಮ್‌ಗಳ ರಾಶಿ ಪತ್ತೆಯಾದವು ಎಂಬ ವದಂತಿಗಳನ್ನು ರಾಜಕಾರಣಿಗಳು ಹರಡಿದರು. ಒಂದು ರೀತಿಯಲ್ಲಿ ಸಂಘಪರಿವಾರ ಯಾವ ಸರಸ್ವತಿ ದೇವಿಯನ್ನು ಶಿಕ್ಷಣಕ್ಕೆ ರೂಪಕವಾಗಿ ಬಳಸುತ್ತದೆಯೋ ಆ ವಿದ್ಯಾ ಸರಸ್ವತಿಗೆ ಈ ವಿದ್ಯಾಹೀನ ರಾಜಕಾರಣಿಗಳು ಕಳಂಕಗಳನ್ನು ಹಚ್ಚಿದ್ದರು. ಇದಾದ ಬಳಿಕ, ಜೆಎನ್‌ಯುವಿನಲ್ಲಿರುವ ವಿಶ್ವದ ಶ್ರೇಷ್ಠ ಉಪನ್ಯಾಸಕರಿಗೆ ಕಿರುಕುಳಗಳನ್ನು ನೀಡ ತೊಡಗಿದರು. ರೋಮಿಲಾ ಥಾಪರ್‌ರಂತಹ ಇತಿಹಾಸ ತಜ್ಞೆಯ ಬಯೋಡಾಟಗಳನ್ನು ಹೊಸದಾಗಿ ಕೇಳುವ ಮೂಲಕ ಹಾಸ್ಯಾಸ್ಪದಕ್ಕೀಡಾದರು. ಇದೆಲ್ಲದರ ಬೆನ್ನಿಗೆ ಇದೀಗ ಹಾಸ್ಟೆಲ್ ಶುಲ್ಕಗಳನ್ನು ಹೆಚ್ಚಿಸುವ ಮೂಲಕ ಬಡ ಮತ್ತು ತಳಸ್ತರದ ಸಮುದಾಯ ಉನ್ನತ ಶಿಕ್ಷಣ ಪಡೆಯುವುದಕ್ಕೆ ಅಡ್ಡಗಾಲು ಹಾಕಲು ಹೊರಟಿದೆ. ದುರಂತವೆಂದರೆ ಮೋದಿ ಸರಕಾರ ಮತ್ತು ಸಂಘಪರಿವಾರ ಜೆಎನ್‌ಯುವನ್ನು ಇಲ್ಲವಾಗಿಸಲು ಮತ್ತೆ ಬಳಸುತ್ತಿರುವುದು ಶೂದ್ರ ಮತ್ತು ದಲಿತ ವರ್ಗದ ಹುಡುಗರನ್ನೇ. ಜೆಎನ್‌ಯು ವಿರುದ್ಧ ವ್ಯಂಗ್ಯ, ಟೀಕೆ ಮತ್ತು ಸುಳ್ಳುಗಳನ್ನು ಹರಡುವಲ್ಲಿ ಇವರೇ ಮುಂಚೂಣಿಯಲ್ಲಿದ್ದಾರೆ. ಮುಂದಿನ ತಲೆಮಾರಿನ ವಿದ್ಯಾರ್ಥಿಗಳ ಬದುಕಿಗೆ ಈ ಮೂಲಕ ಕೊಳ್ಳಿ ಇಡಲು ಹೊರಟಿದ್ದಾರೆ. ಶಿಕ್ಷಣದ ಹಕ್ಕಿಗಾಗಿ ಬೀದಿಗಿಳಿದಿರುವ ಜೆಎನ್‌ಯು ವಿದ್ಯಾರ್ಥಿಗಳು ದೇಶದ್ರೋಹಿಗಳಾದರೆ, ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಬೇಕು ಎಂಬ ಆಶಯದೊಂದಿಗೆ ಸಂವಿಧಾನವನ್ನು ಬರೆದ ಮಹನೀಯರನ್ನೂ ದೇಶದ್ರೋಹಿಗಳೆಂದು ಕರೆಯಬೇಕಾಗುತ್ತದೆ.

ಇದೇ ಸಂದರ್ಭದಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಇನ್ನೊಂದು ಕಾರಣಕ್ಕಾಗಿ ಸುದ್ದಿಯಲ್ಲಿದೆ. ಅಲ್ಲಿ ನೇಮಕವಾಗಿರುವ ಸಂಸ್ಕೃತ ಪ್ರೊಫೆಸರ್ ಮುಸ್ಲಿಮನಾಗಿರುವುದರಿಂದ ಆತನ ವಿರುದ್ಧ ಅಲ್ಲಿನ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟಕ್ಕೂ ಆಯ್ಕೆಯಾಗಿರುವ ಉಪನ್ಯಾಸಕ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಮಾತ್ರವಲ್ಲ, ಪಿಎಚ್‌ಡಿ ಕೂಡ ಮಾಡಿದ್ದಾರೆ. ಒಂದು ಕಾಲದಲ್ಲಿ ಸಂಸ್ಕೃತ ಭಾಷೆಯನ್ನು ಇತರ ಜಾತಿಯವರು ಮಾತನಾಡಕೂಡದು ಎಂದು ನಿಷೇಧ ಹೇರಿ, ಒಂದು ಪುರಾತನ ಭಾಷೆಯನ್ನೇ ಹೆಣವಾಗಿಸಿದ ಜನರೇ, ಇದೀಗ ಮತ್ತೆ ಈ ವಿಶ್ವವಿದ್ಯಾಲಯದಲ್ಲಿ ಬಾಲ ಬಿಚ್ಚಿದ್ದಾರೆ. ಜೆಎನ್‌ಯುನಲ್ಲಿ ಶಿಕ್ಷಣ ಎಲ್ಲರ ಹಕ್ಕು ಎಂದು ವಿದ್ಯಾರ್ಥಿಗಳು ಬೀದಿಗಿಳಿದಿದ್ದರೆ, ಬನಾರಸ್ ವಿವಿ ಸಂಸ್ಕೃತವನ್ನು ಇತರ ಜಾತಿ, ಧರ್ಮದ ಜನರು ಬೋಧಿಸಬಾರದು ಎಂದು ಪ್ರತಿಭಟನೆಗಿಳಿದಿದೆ. ಅಂದರೆ, ವಿದ್ಯೆ ಕೆಲವೇ ಕೆಲವು ಜಾತಿಯ ಸೊತ್ತು ಎನ್ನುವುದನ್ನು ಎತ್ತಿ ಹಿಡಿಯುವುದಕ್ಕಾಗಿ ಅವರು ಹೋರಾಟ ನಡೆಸುತ್ತಿದ್ದಾರೆ. ಈ ಎರಡು ವಿಶ್ವವಿದ್ಯಾಲಯ ಭಾರತ ಹೆಜ್ಜೆಯಿಟ್ಟಿರುವ ಎರಡು ದಿಕ್ಕುಗಳನ್ನು ಪರಿಚಯಿಸಿದೆ. ಇಂದಿನ ಭಾರತ ಯಾವ ದಿಕ್ಕಿನೆಡೆಗೆ ಹೆಜ್ಜೆಯಿಡುತ್ತದೆಯೋ ಅದುವೇ ನಮ್ಮ ಮುಂದಿನ ತಲೆಮಾರಿನ ಭವಿಷ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X