ಹರೀಶ್ ಜೋಗಿಗೆ ಪಿಹೆಚ್.ಡಿ ಪದವಿ

ಉಡುಪಿ, ನ.22: ಅಧ್ಯಾಪಕ ಹರೀಶ್ ಜೋಗಿ ಇವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ‘ಯಕ್ಷಗಾನದ ಶೈಕ್ಷಣಿಕ ಆಯಾಮಗಳು’ ಎಂಬ ವಿಷಯದ ಕುರಿತ ಮಹಾಪ್ರಬಂಧ ಪಿಎಚ್.ಡಿ ಪದವಿಗೆ ಆಯ್ಕೆಯಾಗಿದೆ. ಹರೀಶ್ ಜೋಗಿ, ಮಣಿಪಾಲದ ಡಾ. ಉದಯಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು.
ಪ್ರಸ್ತುತ ಇವರು ಮಣಿಪಾಲದ ಮಾಧವ ಕೃಪಾ ಶಾಲೆ (ಸಿಬಿಎಸ್‌ಸಿ)ಯಲ್ಲಿ ಕನ್ನಡ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ.
Next Story





