ಮಂಗಳೂರು : ಎಚ್.ಐ.ಎಫ್ ಸೀರತ್ ಅಭಿಯಾನ ಉದ್ಘಾಟನೆ, ಸ್ನೇಹಕೂಟ
ಮಂಗಳೂರು : ಪ್ರವಾದಿ ಮುಹಮ್ಮದ್ (ಸಅ) ಜೀವನ ಮತ್ತು ಸಂದೇಶ ಪ್ರಚಾರ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ 'ನೇಬರ್ಸ್ ಗೆಟ್ ಟುಗೆದರ್' (ನೆರೆಹೊರೆಯವರ ಸ್ನೇಹಕೂಟ) ಸರ್ವಧರ್ಮೀಯರಿಗೆ ಭಾಷಣ ಕಾರ್ಯಕ್ರಮವು ಶುಕ್ರವಾರ ಹೈಲ್ಯಾಂಡ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಪರಸ್ಪರ ನಮ್ಮನ್ನು ಗುರುತಿಸಲು ಹಲವಾರು ಆಕಾರ, ಬಣ್ಣಗಳಲ್ಲಿ ಮನುಷ್ಯರನ್ನು ನಿರಾಕಾರವಾದ ಸೃಷ್ಟಿಕರ್ತನು ಸೃಷ್ಟಿಸಿದ್ದಾನೆ. ನೀವು ಯಾವುದೇ ಧರ್ಮದವರಾಗಿರಲಿ ನಿವು ಉತ್ತಮ ಮಕ್ಕಳಾಗಿರಬೇಕು. ತೀರಿಹೋದ ಹೆತ್ತವರಿಗಾಗಿ ಪ್ರಾರ್ಥಿಸುವ ಮನೋಭಾವನೆ ನಮ್ಮಲ್ಲಿರಬೇಕು. ನಿಮ್ಮ ಎಲ್ಲಾ ಕೆಟ್ಟ, ಉತ್ತಮ ಕಾರ್ಯಗಳ ಲೆಕ್ಕವನ್ನು ನೀವು ನೀಡಬೇಕು ಎಂದು ಪವಿತ್ರ ಕುರಾಅನ್ ಕಲಿಸುತ್ತದೆ ಎಂದು ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಆಶಾ ಲತಾ ಪೈ ನುಡಿದರು.
ತನ್ನ ಒಂಟೆಯೊಂದು ಆಕಸ್ಮಿತವಾಗಿ ಇನ್ನೊಬ್ಬನ ಸ್ಥಳದಲ್ಲಿ ಮೇಯಲು ಹೋದರೆ 40 ವರ್ಷಗಳ ಕಾಲ ಯುದ್ಧ ನಡೆಸುತ್ತಿದ್ದ ಅಂತಹ ಜನರ ಮಧ್ಯೆ ಶಾಂತಿ ಸಮಾಧಾನ ಮತ್ತು ಅಚ್ಚುಕಟ್ಟು ಅನ್ನು ಕಲಿಸಿದ ಮಹಾನ್ ವ್ಯಕ್ತಿತ್ವ ಪ್ರವಾದಿ ಮಹಮ್ಮದ್ ಅವರು. ರಾಜ ಮತ್ತು ರೈತ ಸಮಾನವಾಗಿ ನಮಾಝ್ ಮಾಡುವುದು, ಏಕದೇವತ್ವದ ಕಲ್ಪನೆ, ಸರಳತೆ ಇದೆಲ್ಲವೂ ಪ್ರವಾದಿಯರ ಜೀವನ ಪದ್ಧತಿಯಾಗಿದ್ದು. ಒಳ್ಳೆಯದನ್ನೇ ಬಯಸುವುದು , ದಾನ-ಧರ್ಮ ನೀಡುವುದು, ಶತ್ರು ಪ್ರೇಮ ಇವೆಲ್ಲವೂ ಎಲ್ಲ ಧರ್ಮಗಳ ಪರಿಕಲ್ಪನೆಯಾಗಿದೆ. ಅಪಘಾತ ಸಂಭವಿಸಿದಾಗ ಆತನ ಧರ್ಮ ನೋಡದೇ ಮನುಷ್ಯತ್ವದ ನೆಲೆಯಲ್ಲಿ ಉಪಕಾರ ಮಾಡುವಂತಹ ಮನೋಭಾವ ನಮ್ಮಲ್ಲಿ ಮೂಡಿಬರಬೇಕು ಎಂದು ಸಂತ ಜೋಸೆಫ್ ಸೆಮಿನರಿಯ ಫಾ. ಕ್ಲಿಫರ್ಡ್ ನುಡಿದರು.
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅವರು ತಪ್ಪು ಕಲ್ಪನೆಗಳು ಎಂಬ ವಿಷಯದಲ್ಲಿ ಮಾತನಾಡಿದರು. ಐಲ್ಯಾಂಡ್ ಇಸ್ಲಾಮಿಕ್ ಫೋರಮ್ ಅಧ್ಯಕ್ಷ ಸಾಜಿದ್ ಎಕೆ ಉಪಸ್ಥಿತರಿದ್ದರು.
ಸುಹೇಲ್ ಬೋಲಾರ್ ಕಿರಾಅತ್ ಪಡಿಸಿದರು. ಮಿಶಾಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಭಿಯಾನದ ಸಂಚಾಲಕರಾದ ಆದಿಲ್ ಪರ್ವೇಝ್ ವಂದಿಸಿದರು.