ಪ್ರೇಕ್ಷಕರೊಂದಿಗೆ ಗಂಗುಲಿ ಸೆಲ್ಫಿ
ಕೋಲ್ಕತಾ, ನ.22: ಭಾರತ-ಬಾಂಗ್ಲಾದೇಶದ ಮಧ್ಯೆ ಮೊದಲ ಬಾರಿ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯುತ್ತಿರುವಾಗ ಕಿಕ್ಕಿರಿದು ನೆರೆದಿದ್ದ ಈಡನ್ಗಾರ್ಡನ್ಸ್ನ ಪ್ರೇಕ್ಷಕರ ಮಧ್ಯೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಸೆಲ್ಫಿ ತೆಗೆದುಕೊಂಡು ಗಮನ ಸೆಳೆದರು.
ಎರಡನೇ ಟೆಸ್ಟ್ನ ಮೊದಲ ನಾಲ್ಕು ದಿನಗಳ ಎಲ್ಲ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ ಎಂದು ವರದಿಯಾಗಿದೆ.
ಪಂದ್ಯ ಆರಂಭಕ್ಕೆ ಮೊದಲು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ,ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸಚಿನ್ ತೆಂಡುಲ್ಕರ್ ಅವರು ಭಾರತ ಹಾಗೂ ಬಾಂಗ್ಲಾದೇಶದ ಆಟಗಾರರನ್ನು ಸ್ವಾಗತಿಸಿದರು. ಗಂಗುಲಿ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾದೇಶದ ಪಿಎಂನ್ನು ಬರಮಾಡಿಕೊಂಡರು.
Next Story