ಎಂಟಿಬಿ ನಾಗರಾಜ್ ನಾಮಪತ್ರ ಕೈಬಿಡಲು ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು

ಬೆಂಗಳೂರು, ನ. 23: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕಾಂಗ್ರೆಸ್ ಮುಖಂಡರಿಗೆ 2 ಕೋಟಿ ರೂ.ಸಾಲ ನೀಡಿದ ಬಗ್ಗೆ ಉಲ್ಲೇಖಿಸಿಲ್ಲ. ಹೀಗಾಗಿ ಎಂಟಿಬಿ ನಾಗರಾಜ್ ಉಮೇದುವಾರಿಕೆ ಕೈಬಿಡಬೇಕು ಎಂದು ಜೆಡಿಎಸ್ ವಕ್ತಾರ ಎನ್.ರಾಜುಗೌಡ, ಆಯೋಗಕ್ಕೆ ದೂರು ನೀಡಿದ್ದಾರೆ.
ನಾಗರಾಜ್ ಅವರು 2 ಕೋಟಿ ರೂ.ಸಾಲ ನೀಡಿರುವ ಬಗ್ಗೆ ಅವರ ಬ್ಯಾಂಕ್ ಖಾತೆಗಳಲ್ಲಿ ಯಾವುದೇ ದಾಖಲೆಗಳಿಲ್ಲ. ಅವರ ಮನೆಯಲ್ಲಿ ಆದಾಯ ತೆರಿಗೆ ಪಾವತಿಸದ ಹಣವನ್ನು ದಾಸ್ತಾನು ಮಾಡಿರುವ ಸಂಶಯವಿದೆ. ಆದುದರಿಂದ ಈ ಕುರಿತು ತನಿಖೆ ನಡೆಸಬೇಕು ಎಂದು ಕೋರಲಾಗಿದೆ.
ದಾಖಲೆಗಳಿಲ್ಲದೆ ಮನೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಇಟ್ಟುಕೊಳ್ಳುವುದು ಅಪರಾಧ. ಹೀಗಾಗಿ ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿ ಈ ಪ್ರಕರಣವನ್ನು ವಿಶಿಷ್ಟ ಪ್ರಕರಣ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ರಾಜುಗೌಡ ಮನವಿ ಮಾಡಿದ್ದಾರೆ.
Next Story





