ನ.24 : ಕೊಡವೂರಿನಲ್ಲಿ ‘ಮನೆಯಂಗಳದಲ್ಲಿ ಸಾಹಿತ್ಯ’
ಉಡುಪಿ, ನ.23: ಕನ್ನಡ ಸಾಹಿತ್ಯ ಪರಿಷತುತಿ ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು, ಜಿಲ್ಲಾಡಳಿತ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉಡುಪ ರತ್ನ ಪ್ರತಿಷ್ಠಾನ ಕೊಡವೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಮನೆಯಂಗಳದಲ್ಲಿ ಸಾಹಿತ್ಯ’ ಕಾರ್ಯಕ್ರಮ ನ.24ರಂದು ಕೊಡವೂರಿನ ಭಾಮಾ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಖ್ಯಾತ ಸಾಹಿತಿ ಬೆಳಗೋಡು ರಮೇಶ ಭಟ್ಟ, ನಾದ ವೈಭವಂ ಸಂಸ್ಥಾಪಕ ವಾಸುದೇವ ಭಟ್ಟ, ಉಡುಪಿ ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ನಗರಸಭಾ ಸದಸ್ಯ ವಿಜಯ ಕೊಡವೂರು, ವಿಮರ್ಶಕ ಜನನಿ ಭಾಸ್ಕರ್ ಭಟ್, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಪ್ರವರ್ತಕ ಹಫೀಜ್ರಹೆಮಾನ್ ಭಾಗವಹಿಸಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
Next Story





