ಕೊಲ್ಲೂರು ದೇವಳದ ಹೆಸರಿನಲ್ಲಿ ವಂಚನೆ
ಉಡುಪಿ, ನ.23: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ಹೆಸರಿನಲ್ಲಿ ಖಾಸಗಿ ವೆಬ್‌ಸೈಟ್ ತೆರೆದು ಭಕ್ತರಿಂದ ಹಣ ವಸೂಲಿ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದಲ್ಲಿ ಅಧಿಕೃತ ಸೇವಾ ಕೌಂಟರ್ ಹಾಗೂ ವೆಬ್ ಸೈಟ್ಗಳಿದ್ದರೂ ಅಪರಿಚಿತ ವ್ಯಕ್ತಿಗಳು ಯಾವುದೇ ಅನುಮತಿಯನ್ನು ಪಡೆಯದೆ ಮೂಕಾಂಬಿಕಾ ಇನ್ಪೋಲೈನ್ ಎಂಬ ಹೆಸರಿನಲ್ಲಿ ಖಾಸಗಿ ವೆಬ್ ಸೈಟ್ ತೆರೆದು ದೇವಸ್ಥಾನದಲ್ಲಿ ನಡೆಯುವ ಚಂಡಿಕಾ ಹೋಮ ಹಾಗೂ ಇತರ ಸೇವೆಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಭಕ್ತರಿಂದ ಹೆಚ್ಚಿನ ಹಣ ವಸೂಲಿ ಮಾಡಿ ವಂಚನೆ ಮಾಡಿರುವುದಾಗಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ ಗುಂಡಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story