Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಭಿಮಾನ, ಆಧರಾತಿತ್ಯ, ಆಶಯಗಳಿಂದ ಬದುಕು...

ಅಭಿಮಾನ, ಆಧರಾತಿತ್ಯ, ಆಶಯಗಳಿಂದ ಬದುಕು ಸುಂದರ- ನಟಿ, ನಿರೂಪಕಿ ಅಪರ್ಣಾ ವಸ್ತಾರೆ

ವಾರ್ತಾಭಾರತಿವಾರ್ತಾಭಾರತಿ23 Nov 2019 10:30 PM IST
share
ಅಭಿಮಾನ, ಆಧರಾತಿತ್ಯ, ಆಶಯಗಳಿಂದ ಬದುಕು ಸುಂದರ- ನಟಿ, ನಿರೂಪಕಿ ಅಪರ್ಣಾ ವಸ್ತಾರೆ

ಪುತ್ತೂರು: ಪ್ರತಿಯೊಬ್ಬರಿಗೂ ತಮ್ಮ ಬದುಕಿನ ಬಗ್ಗೆ ಭರವಸೆ, ಭಯ ಮತ್ತು ಕನಸುಗಳಿರುವುದು ಸಹಜ. ಬದುಕನ್ನು ನಾವು ನೋಡುವುದರಲ್ಲಿ ಅದು ನಮ್ಮ ಚೌಕಟ್ಟಿಗೆ ಬರುತ್ತದೆ. ಅಭಿಮಾನ, ಆಧರ, ಆತಿಥ್ಯ, ಆಶಯಗಳಿಂದ ಬದುಕು ಸುಂದರವಾಗಿರುತ್ತದೆ ಎಂದು ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಹೇಳಿದರು.

ಅವರು ಶನಿವಾರ ಪುತ್ತೂರಿನ ಬಂಟರ ಭವನದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಪುತ್ತೂರಿನ ಕ್ಷೇತ್ರ ಶಿಕ್ಷಣ ಇಲಾಖೆ, ಇನ್ನರ್ ವೀಲ್ ಕ್ಲಬ್ ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ `ಪ್ರೇರಣಾ-2019' ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಶಸ್ಸು ಮತ್ತು ಸಾಧನೆಗೆ ಮಾನದಂಡ ಯಾವುದು ಎಂಬುದು ಮೂಲಭೂತ ಪ್ರಶ್ನೆಯಾಗಿದೆ. ಕಾರು, ಐಶ್ವರ್ಯ ಇದ್ದರೆ ಅದೇ ಯಶಸ್ಸು ಅದನ್ನು ಗಳಿಸುವುದೇ ಸಾಧನೆ ಎಂಬ ಎನ್ನುತ್ತಾರೆ, ಅದು ತಪ್ಪಲ್ಲ. ಆದರೆ ಅದುವೇ ಶ್ರೇಷ್ಠವಲ್ಲ. ಅದುವೇ ಶ್ರೇಷ್ಠ ಎಂಬ ಭಾವನೆ ಸರಿಯಲ್ಲ. ಇನ್ನೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ಬದುಕುವುದರೊಂದಿಗೆ ನಮ್ಮ ಭೂಮಿಯನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳುವುದು ಶ್ರೇಷ್ಠವಾದ ಬದುಕಾಗಿದೆ. ಎಚ್ಚರಿಕೆಯ ನಡೆ ನೆಮ್ಮದಿಯ ಬದುಕು ನೀಡುತ್ತದೆ ಎಂದ ಅವರು ಬದುಕಿನಲ್ಲಿ 2+2=4 ಅಲ್ಲ ಬದುಕಿಗೆ ಇಂತಹುದೇ ಚೌಕಟ್ಟು ಎಂಬುದಿಲ್ಲ. ಬದುಕಿನಲ್ಲಿ ತೂಕಡಿಸಿಕೊಳ್ಳದೆ ಕಣ್ಣು ತೆರೆದು ನೋಡುವ ಪ್ರವೃತ್ತಿ ಬೆಳೆಸಿಕೊಂಡರೆ ಈ ಬದುಕು ಸುಂದರವಾಗಿ ಕಾಣಲು ಸಾಧ್ಯವಿದೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕ ಪಡೆಯುವುದು, ರ್ಯಾಂಕ್ ಗಳಿಸುವುದು  ಮಾತ್ರ ಜ್ಞಾನವಲ್ಲ. ನಮ್ಮ ನೆಲ ಸಂಸ್ಕøತಿಯ ಬಗ್ಗೆ ಅರಿವು ಪಡೆದುಕೊಳ್ಳುವುದು. ಸಮಾಜಿಕ ಚಿಂತನೆಗಳ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳುವುದು  ಕಲಿಕೆ ಮತ್ತು ಜ್ಞಾನದ ಭಾಗವಾಗಿದೆ. ಪ್ರತಿಯೊಬ್ಬರ ಮೌಲ್ಯ ಮತ್ತು ನಂಬಿಕೆ ಅವರದೇ ಆಗಿದ್ದು, ಯಾರಿಗೆ ಯಾರೂ ಸ್ಪರ್ಧಿಗಳಲ್ಲ. ನಮ್ಮ ಕೆಲಸಗಳ ಬಗ್ಗೆ ಶ್ರದ್ಧೆ, ಪಕ್ವತೆ ಇದ್ದಾಗ ಆತ್ಮವಿಶ್ವಾಸ ಬರುತ್ತದೆ. ಬದುಕಿನ ವಿಕಸನಕ್ಕೆ ಓದು ಬಹಳ ಮುಖ್ಯವಾಗಿದ್ದು, ಇದರಿಂದ ಬದುಕಿನ ನೋಟ ಬದಲಾಗಲಿದೆ ಎಂದರು.

ವಿದ್ಯಾರ್ಥಿಗಳ ಕನಸಿನಲ್ಲಿ ಇಂದು ಮತ್ತು ನಾಳೆಗಳ ಭವಿಷ್ಯವಿದೆ. ಅದನ್ನು ತಮ್ಮದಾಗಿಸಿಕೊಳ್ಳಿ. ಬದುಕಿನಲ್ಲಿ ಕಷ್ಟ ಬರುವುದು ಸಹಜ. ಅದನ್ನು ಕಷ್ಟವೆಂದು ಪರಿಗಣಿಸದೆ ಇಷ್ಟವಾಗಿ ಪರಿವರ್ತಿಸಿದಾಗ ಯಶಸ್ವು ಪಡೆಯ ಬಹುದು. ನಡೆಯುವವರು ಎಡವುದು ಸಹಜ. ಆಗಲೇ ಜಾಗರೂಕತೆ ನಮ್ಮಲ್ಲಿ ಬರುತ್ತದೆ. ಕಷ್ಟವೇ ಸಿಗಬಾರದು ಎನ್ನುವುದು ಸರಿಯಲ್ಲ. ಕಷ್ಟಗಳಿಂದ ನಾವು ಮಾಗುತ್ತೇವೆ ಎಂದ ಅವರು ಕಷ್ಟವನ್ನು ಎದುರಿಸುವ ಸಾಧಕರು ನಾವಾಗಬೇಕು. ಕಷ್ಟವನ್ನು ಕಷ್ಟವೆನ್ನದೆ ಅದೊಂದು ಜೀವನದ ಪರೀಕ್ಷೆ ಎಂದು ತಿಳಿದುಕೊಳ್ಳಬೇಕು ಎಂದರು.

ಪ್ರಧಾನಿಗಳ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ತನ್ನ ಅನುಭವವನ್ನು ವಿವರಿಸಿದ ಅಪರ್ಣಾ ಅವರು ನಿರೂಪಕರು ಕಾರ್ಯಕ್ರಮದ ಮುಖವಾಣಿ ಯಾಗುತ್ತಾರೆ. ಅವರು ತಪ್ಪು ಮಾಡಿದಲ್ಲಿ ಕಾರ್ಯಕ್ರಮ ಸಂಘಟಕರ ಶ್ರಮ ವ್ಯರ್ಥವಾಗುತ್ತದೆ. ನಿರೂಪಕ ಮಾಡುವ ಒಂದು ತಪ್ಪು ಗಳು ದೊಡ್ಡ ಪ್ರಮಾದವನ್ನು ಸೃಷ್ಠಿಸುತ್ತದೆ. ಶಿಷ್ಟಾಚಾರ ಪಾಲಿಸುವ ಮನೋಧರ್ಮ ನಿರೂಪಕರಿಗೆ ಇರಬೇಕು ಎಂದರು.

ಈ ಸಂದರ್ಭದಲ್ಲಿ ಅಪರ್ಣಾ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಪುತ್ತೂರಿನ ವಿವಿಧ ಶಾಲೆಗಳ 1ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲಾ ಆಡಳಿತ ಮಂಡಳಿ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಶಾಲಾ ಮುಖ್ಯಗುರು ರೂಪಕಲಾ, ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಶ್ರೀಷ ಭಟ್, ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸಹನಾ ಭುವನ್, ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮತ್ತಿತರರು ಉಪಸ್ಥಿತರಿದ್ದರು.

ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‍ನ ಸದಸ್ಯ ಗಣೇಶ್ ಹಗ್ಡೆ ಸ್ವಾಗತಿಸಿ, ವಂದಿಸಿದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X