ಇರಾನ್‌ನಲ್ಲಿ ಇಂಟರ್‌ನೆಟ್ ಸ್ಥಗಿತ: ಸಂಪರ್ಕ ಸಚಿವರ ವಿರುದ್ಧ ಅಮೆರಿಕ ದಿಗ್ಬಂಧನ
ವಾಶಿಂಗ್ಟನ್, ನ. 23: ಇರಾನ್‌ನಲ್ಲಿ ಪೆಟ್ರೋಲ್ ಬೆಲೆ ಏರಿಕೆಯ ಬಳಿಕ ಹುಟ್ಟಿಕೊಂಡ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸರಕಾರವು ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿರುವುದಕ್ಕಾಗಿ ಆ ದೇಶದ ಸಂಪರ್ಕ ಸಚಿವರ ವಿರುದ್ಧ ಅಮೆರಿಕ ಖಜಾನೆ ಇಲಾಖೆ ದಿಗ್ಬಂಧನ ವಿಧಿಸಿದೆ.
‘‘ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿರುವುದಕ್ಕಾಗಿ ಇರಾನ್‌ನ ವಾರ್ತಾ ಮತ್ತು ಸಂಪರ್ಕ ತಂತ್ರಜ್ಞಾನ ಸಚಿವ ಜವಾದ್ ಅಝರಿ ಜಾಹ್ರೂಮಿ ವಿರುದ್ಧ ನಾವು ದಿಗ್ಬಂಧನ ಹೇರುತ್ತಿದ್ದೇವೆ. ಅವರ ಈ ಕ್ರಮದಿಂದಾಗಿ ಕೋಟ್ಯಂತರ ಇರಾನಿಯನ್ನರು ಬಳಸುವ ಜನಪ್ರಿಯ ಸಂಪರ್ಕ ಆ್ಯಪ್‌ಗಳು ಸ್ಥಗಿತಗೊಂಡಿವೆ ಹಾಗೂ ಜನರು ಪರಸ್ಪರ ಹಾಗೂ ಬಾಹ್ಯ ಜಗತ್ತಿನ ಸಂಪರ್ಕದಿಂದ ವಂಚಿತರಾಗಿದ್ದಾರೆ’’ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story





