26 ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಕೇಂದ್ರದ ಒಪ್ಪಿಗೆ
ಹೊಸದಿಲ್ಲಿ, ನ.23: ಹಾಲಿ ಜಿಲ್ಲಾ/ಉಲ್ಲೇಖಿತ ಆಸ್ಪತ್ರೆಗಳ ಸಂಯೋಜನೆಯೊಂದಿಗೆ ನೂತನ ಮೆಡಿಕಲ್ ಕಾಲೇಜುಗಳ ಸ್ಥಾಪನೆಯ ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್‌ಎಸ್)ಯಡಿ 26 ಹೊಸ ಕಾಲೇಜುಗಳ ಸ್ಥಾಪನೆಗೆ ಕೇಂದ್ರ ಸರಕಾರವು ಹಸಿರು ನಿಶಾನೆ ತೋರಿಸಿದೆ.
ಲೋಕಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಹಾಯಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶ್ವಿನಿಕುಮಾರ ಚೌಬೆ ಅವರು,ಸಿಎಸ್‌ಎಸ್‌ನ ಮೂರನೇ ಹಂತದಲ್ಲಿ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಕರ್ನಾಟಕ,ರಾಜಸ್ಥಾನ,ತಮಿಳುನಾಡು,ಉತ್ತರ ಪ್ರದೇಶ,ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ಗಳಲ್ಲಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಈ ಹಂತದಡಿ 2022-23ರ ವೇಳೆಗೆ ಇನ್ನೂ 75 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
Next Story





