Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮ್ಮ ವಾಹನದ ವಿಮೆಯನ್ನು...

ನಿಮ್ಮ ವಾಹನದ ವಿಮೆಯನ್ನು ನವೀಕರಿಸುತ್ತಿದ್ದೀರಾ?: ಈ ಮಹತ್ವದ ಅಂಶಗಳು ನಿಮ್ಮ ಗಮನದಲ್ಲಿರಲಿ

ವಾರ್ತಾಭಾರತಿವಾರ್ತಾಭಾರತಿ24 Nov 2019 6:59 PM IST
share
ನಿಮ್ಮ ವಾಹನದ ವಿಮೆಯನ್ನು ನವೀಕರಿಸುತ್ತಿದ್ದೀರಾ?: ಈ ಮಹತ್ವದ ಅಂಶಗಳು ನಿಮ್ಮ ಗಮನದಲ್ಲಿರಲಿ

ನಿಮ್ಮ ಕಾರಿನ ವಿಮೆಯನ್ನು ನವೀಕರಿಸುವುದು ಮುಖ್ಯ ಮಾತ್ರವಲ್ಲ,ಮೋಟರ್ ವಾಹನಗಳ ಕಾಯ್ದೆಯಡಿ ಕಡ್ಡಾಯವೂ ಆಗಿದೆ. ಈ ಕಾಯ್ದೆಯಡಿ ಥರ್ಡ್ ಪಾರ್ಟಿ ವಿಮೆ ರಕ್ಷಣೆಯನ್ನೂ ಕಡ್ಡಾಯ ಮಾಡಲಾಗಿದೆ. ಆದರೆ ಹಾಗೆ ಮಾಡುವಾಗ ಸ್ವಲ್ಪ ಹಣ ಉಳಿಯುತ್ತದೆ ಎಂದಾದರೆ ಯಾರಾದರೂ ಬೇಡವೆನ್ನುತ್ತಾರಾ?

ಉದಾಹರಣೆಗೆ ನವೀಕರಣದ ಸಮಯದಲ್ಲಿಯೂ ಪಾಲಿಸಿಗಳ ಹೋಲಿಕೆ,ಸೂಕ್ತ ಅಂಶಗಳ ಪರಿಶೀಲನೆ,ಪಾಲಿಸಿ ಎಕ್ಸ್‌ಪೈರ್ ಆಗದಂತೆ ನೋಡಿಕೊಳ್ಳುವದು ಇವು ನೀವು ಬಹಳಷ್ಟು ಹಣವನ್ನು ಉಳಿಸಬಹುದಾದ ಕೆಲವು ಮಾರ್ಗಗಳಾಗಿವೆ. ಹೆಚ್ಚಿನ ವಾಹನ ವಿಮೆ ಕಂಪನಿಗಳು ಆನ್‌ಲೈನ್‌ನಲ್ಲಿ ಪಾಲಿಸಿ ಖರೀದಿಗೆ ಅವಕಾಶವನ್ನು ಕಲ್ಪಿಸಿರುವುದರಿಂದ ಪಾಲಿಸಿ ನವೀಕರಣ ಸುಲಭವಾಗಿದೆಯಾದರೂ ಈ ಅವಕಾಶವನ್ನು ಬಳಸಿಕೊಳ್ಳಲು ಬಯಸದ ಹಲವರು ಈಗಲೂ ಇದ್ದಾರೆ.

ಹೀಗಾಗಿ ನೀವಿನ್ನೂ ನಿಮ್ಮ ವಾಹನದ ವಿಮೆಯನ್ನು ನವೀಕರಿಸಿರದಿದ್ದರೆ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಚಾರಗಳು ಇಲ್ಲಿವೆ......

ಆನ್‌ಲೈನ್‌ನಲ್ಲಿ ಸಂಶೋಧನೆ ಮಾಡಿ

ನೀವು ವಾಹನದ ವಿಮೆಗಾಗಿ ಅತಿಯಾದ ಶುಲ್ಕವನ್ನು ಪಾವತಿಸುತ್ತಿದ್ದೀರಿ ಅಥವಾ ಸೂಕ್ತ ಲಾಭಗಳು ದೊರೆಯುತ್ತಿಲ್ಲ ಎಂದು ನಿಮಗನ್ನಿಸಿದ್ದರೆ ನವೀಕರಣದ ಸಂದರ್ಭದಲ್ಲಿ ಇತರ ಕಂಪನಿಗಳ ವಿಮೆ ಪಾಲಿಸಿಗಳತ್ತ ನೀವು ಕಣ್ಣು ಹಾಯಿಸಬಹುದು.

 ಆನ್‌ಲೈನ್‌ನಲ್ಲಿ ವಿಮೆ ಕಂಪನಿಗಳನ್ನು ಆಯ್ದುಕೊಂಡು ಮಾರಾಟಕ್ಕೆ ಮುನ್ನ ಮತ್ತು ಮಾರಾಟದ ನಂತರ ಅವು ಗ್ರಾಹಕರಿಗೆ ಒದಗಿಸುವ ಸೇವೆಗಳನ್ನು ಪರಸ್ಪರ ಹೋಲಿಸಿ ನೋಡಿ. ನೀವು ವಾಹನಕ್ಕೆ ಬಯಸುವ ವಿಮೆ ರಕ್ಷಣೆಯನ್ನು ನಿರ್ಧರಿಸಿಕೊಂಡು ಅದಕ್ಕೆ ತಗಲುವ ವೆಚ್ಚಗಳನ್ನು ತಾಳೆ ಹಾಕಿ. ಅಲ್ಲದೆ ಆನ್‌ಲೈನ್‌ನಲ್ಲಿ ವಿಮೆ ಕಂಪನಿಗಳ ಸೇವೆಗಳ ಕುರಿತು ಗ್ರಾಹಕರ ವಿಮರ್ಶೆಗಳನ್ನೂ ಅಧ್ಯಯನ ಮಾಡಿ. ಇದು ಸೂಕ್ತ ವಿಮೆ ಕಂಪನಿಯನ್ನು ಆಯ್ದುಕೊಳ್ಳಲು ನಿಮಗೆ ನೆರವಾಗುತ್ತದೆ.

► ಪಾಲಿಸಿಯ ವಿಧ

ನೀವು ಪಾಲಿಸಿಯನ್ನು ಖರೀದಿಸಲು ಕಂಪನಿಯೊಂದನ್ನು ಆಯ್ದುಕೊಂಡ ಬಳಿಕ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ವಾಹನ ವಿಮೆ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ನೀವು ಕಡ್ಡಾಯ ಥರ್ಡ್ ಪಾರ್ಟಿ ವಾಹನ ವಿಮೆ ಪಾಲಿಸಿಗೆ ಅಂಟಿಕೊಳ್ಳಬಹುದು ಅಥವಾ ಸೂಕ್ತ ಕವರೇಜ್‌ಗಾಗಿ ಸಮಗ್ರ ವಾಹನ ವಿಮೆಯನ್ನು ಆಯ್ದುಕೊಳ್ಳಬಹುದು.

ಥರ್ಡ್ ಪಾರ್ಟಿ ಪಾಲಿಸಿ ಕಾನೂನಿನಡಿ ಕಡ್ಡಾಯವಾಗಿದ್ದು,ಥರ್ಡ್ ಪಾರ್ಟಿ ಬಾಧ್ಯತೆಗಳಿಗೆ ಮಾತ್ರ ರಕ್ಷಣೆಯನ್ನು ಒದಗಿಸುತ್ತದೆಯಾದರೆ ಸಮಗ್ರ ಪಾಲಿಸಿಯು ಥರ್ಡ್ ಪಾರ್ಟಿ ಬಾಧ್ಯತೆಗಳ ಜೊತೆಗೆ ಸ್ವಯಂ ಹಾನಿಗೂ ವಿಮೆ ರಕ್ಷಣೆಯನ್ನು ಒದಗಿಸುತ್ತದೆ.

► ನಿಮ್ಮ ಪಾಲಿಸಿಯನ್ನು ಹೋಲಿಸಿ ನೋಡಿ

ಇತರ ಕಂಪನಿಗಳ ಕೊಡುಗೆಗಳ ಜೊತೆಗೆ ನಿಮ್ಮ ಪಾಲಿಸಿಯನ್ನು ಹೋಲಿಸಿ ನೋಡುವುದು ನಿಮಗೆ ಪ್ರಯೋಜನಕಾರಿ ಯಾಗುತ್ತದೆ. ನಿಮ್ಮ ಪಾಲಿಸಿಯಲ್ಲಿರುವ ಪ್ರಯೋಜನಗಳನ್ನೇ,ಆದರೆ ಕಡಿಮೆ ಬೆಲೆಯಲ್ಲಿ ಒದಗಿಸುವ ಇನ್ನೊಂದು ಕಂಪನಿ ನಿಮ್ಮ ಕಣ್ಣಿಗೆ ಬೀಳುವ ಅವಕಾಶಗಳಿರುತ್ತವೆ. ಹೀಗೆ ಹೋಲಿಸುವಾಗ ಕಂಪನಿಯು ಡಿಜಿಟಲ್ ಅಸ್ತಿತ್ವವನ್ನು ಹೊಂದಿದೆಯೇ ಎನ್ನುವುದನ್ನು ಪರಿಶೀಲಿಸಿ ಮತ್ತು ಪಾಲಿಸಿ ಖರೀದಿಗೆ ಮುನ್ನ ಅತ್ಯಂತ ಮುಖ್ಯವಾಗಿ ಕಂಪನಿಯು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ದ ಪ್ರಮಾಣಪತ್ರ ಹೊಂದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

► ಹೆಚ್ಚುವರಿ ಸೌಲಭ್ಯಗಳನ್ನು ಪಡೆದುಕೊಳ್ಳಿ

ಸರಿಯಾದ್ದನ್ನು ಆಯ್ಕೆ ಮಾಡಿಕೊಂಡರೆ ಈ ಸೌಲಭ್ಯಗಳು ಅತ್ಯಂತ ಲಾಭದಾಯಕವಾಗಬಲ್ಲವು. ಇವು ಮೂಲ ವಾಹನ ವಿಮೆ ಪಾಲಿಸಿಯ ವ್ಯಾಪ್ತಿಯನ್ನೂ ಹೆಚ್ಚಿಸುತ್ತವೆ. ಝೀರೊ ಡಿಪ್ರಿಷಿಯೇಶನ್ ಅಥವಾ ಶೂನ್ಯ ಸವಕಳಿ,ಇಂಜಿನ್ ರಕ್ಷಣೆ,ಎನ್‌ಸಿಬಿ ಅಥವಾ ನೋ ಕ್ಲೇಮ್ ಬೋನಸ್ (ನೀವು ಇಡೀ ವರ್ಷದಲ್ಲಿ ಯಾವುದೇ ವಿಮೆ ಮೊತ್ತಕ್ಕೆ ಹಕ್ಕು ಸಲ್ಲಿಸಿರದಿದ್ದರೆ ನಿಮಗೆ ದೊರೆಯುವ ರಿಯಾಯಿತಿ) ರಕ್ಷಣೆ ಮತ್ತು ರೋಡ್‌ಸೈಡ್ ನೆರವು ಇತ್ಯಾದಿಗಳು ಜನಪ್ರಿಯ ಹೆಚ್ಚುವರಿ ಸೌಲಭ್ಯಗಳಲ್ಲಿ ಸೇರಿವೆ. ಝೀರೊ ಡಿಪ್ರಿಷಿಯೇಷನ್ ಪಡೆದುಕೊಂಡಿದ್ದರೆ ಹಕ್ಕು ಮಂಡನೆಯ ಸಮಯದಲ್ಲಿ ಕಂಪನಿಯು ನಿಮ್ಮ ವಾಹನದ ಸವಕಳಿಯನ್ನು ಪರಿಗಣಿಸುವುದಿಲ್ಲ. ರಿಟರ್ನ್ ಟು ಇನ್ವಾಯ್ಸಾ ಸೌಲಭ್ಯವು ಕಳ್ಳತನ ಅಥವಾ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೆರವಾಗುತ್ತದೆ. ನಿಮ್ಮ ವಾಹನವು ಈ ಹೆಚ್ಚುವರಿ ಸೌಲಭ್ಯವನ್ನು ಹೊಂದಿದ್ದರೆ ಪ್ರಕೃತಿ ವಿಕೋಪ ಅಥವಾ ಕಳ್ಳತನದ ಬಳಿಕ ಅದನ್ನು ಸಂಪೂರ್ಣ ನಷ್ಟವೆಂದು ಪರಿಗಣಿಸಲಾಗುತ್ತದೆ ಮತ್ತು ಕಾರಿನ ಎಕ್ಸ್ ಶೋರೂಮ್ ಬೆಲೆಗೆ ಹಕ್ಕು ಮಂಡಿಸಲು ನಿಮಗೆ ಸಾಧ್ಯವಾಗುತ್ತದೆ.

ನಿಮ್ಮ ಕಾರಿನ ಇಂಜಿನ್‌ಗೆ ಹಾನಿಯಾಗಿದ್ದರೆ ಅದರ ದುರಸ್ತಿ ಅಥವಾ ಬದಲಾವಣೆ ದುಬಾರಿಯಾಗುತ್ತದೆ ಮತ್ತು ಇಂತಹ ಸಂದರ್ಭಲ್ಲಿ ಇಂಜಿನ್ ರಕ್ಷಣೆ ಹೆಚ್ಚುವರಿ ಸೌಲಭ್ಯವು ನಿಮ್ಮ ನೆರವಿಗೆ ಬರುತ್ತದೆ. ನಿಮ್ಮ ಕಾರು ರಸ್ತೆ ಮಧ್ಯೆ ಕೆಟ್ಟು ನಿಂತರೆ ಟೋವಿಂಗ್,ಇಂಧನ,ಬ್ಯಾಟರಿ ಜಂಪ್ ಸ್ಟಾರ್ಟ್ ಅಥವಾ ಸಣ್ಣಪುಟ್ಟ ರಿಪೇರಿಯನ್ನು ರೋಡ್‌ಸೈಡ್ ನೆರವು ಸೌಲಭ್ಯವು ಒದಗಿಸುತ್ತದೆ.

ಎನ್‌ಸಿಬಿ ರಕ್ಷಣೆಯು ನೀವು ಎರಡು ಸಲ ವಿಮೆ ಹಣವನ್ನು ಪಡೆದುಕೊಂಡಿದ್ದರೂ ನಿಮ್ಮ ಎನ್‌ಸಿಬಿಯನ್ನು ಉಳಿಸಿಕೊಳ್ಳಲು ನಿಮಗೆ ನೆರವಾಗುತ್ತದೆ.

ನೀವು ವೈಯಕ್ತಿಕ ಸೊತ್ತುಗಳ ನಷ್ಟಕ್ಕೆ ಹೆಚ್ಚುವರಿ ಸೌಲಭ್ಯವನ್ನು ಪಡೆದುಕೊಂಡಿದ್ದರೆ ನಿಮ್ಮ ಕಾರಿನಿಂದ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್‌ಟಾಪ್‌ನಂತಹ ಸೊತ್ತುಗಳ ಕಳ್ಳತನವಾದರೆ ನೀವು ಅದರ ಮೌಲ್ಯವನ್ನು ವಿಮೆ ಕಂಪನಿಯಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X