ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿ ಮೃತ್ಯು
ಮಲ್ಪೆ, ನ.24: ಟೂತ್ಪೇಸ್ಟ್ ಬದಲು ಇಲಿ ಪಾಷಾಣ ಟ್ಯೂಬ್ನಿಂದ ಹಲ್ಲು ಹುಜ್ಜಿದ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಮಲ್ಪೆ ಕೊಳ ಎಂಬಲ್ಲಿ ನಡೆದಿದೆ.
ಮೃತರನ್ನು ಮಲ್ಪೆಕೊಳ ನಿವಾಸಿ ಲೀಲಾ ಕರ್ಕೆರಾ(57) ಎಂದು ಗುರುತಿಸ ಲಾಗಿದೆ. ಇವರು ಮನೆಯಲ್ಲಿ ನ.19ರಂದು ಬೆಳಗಿನ ಜಾವ ಟೂತ್ ಪೇಸ್ಟ್ ನ ಬದಲಾಗಿ ಕೈ ತಪ್ಪಿನಿಂದ ಇಲಿ ಪಾಷಾಣ ಟ್ಯೂಬ್ನ ಪೇಸ್ಟ್ ನಿಂದ ಹಲ್ಲು ಉಜ್ಜಿದ್ದು, ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಲೀಲಾ ಕರ್ಕೆರಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ನ.24ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story