ವಾಮಂಜೂರು: ವೈದ್ಯಕೀಯ ತಪಾಸಣಾ ಶಿಬಿರ

ವಾಮಂಜೂರು, ನ.24: ಧರ್ಮಜ್ಯೋತಿ ಸೋಶಿಯಲ್ ಸೆಂಟರ್ ವಾಮಂಜೂರು ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ಜಂಟಿ ಆಶ್ರಯದಲ್ಲಿ ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಸಾರ್ವಜನಿಕ ವೈದ್ಯಕೀಯ ತಪಾಸಣಾ ಶಿಬಿರವು ರವಿವಾರ ಜರುಗಿತು.
ಧರ್ಮಜ್ಯೋತಿ ಸಾಮಾಜಿಕ ಕೇಂದ್ರದ ನಿರ್ದೇಶಕಿ ಸಿಸ್ಟರ್ ಜೋಯೆಲ್ ಲಸ್ರಾದೊ ಶಿಬಿರ ಉದ್ಘಾಟಿಸಿದರು. ಸಿಸ್ಟರ್ ಲೋರಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಡುಶೆಡ್ಡೆ ಗ್ರಾಪಂ ಸದಸ್ಯೆ ವಸಂತಿ ಮುಖ್ಯ ಅತಿಥಿಯಾಗಿದ್ದರು.
ಕೆಎಂಸಿ ದಂತ ವೈದ್ಯಾಧಿಕಾರಿ ಡಾ. ಕಾವೇರಿ ಚೆನ್ನಪ್ಪಮಾಹಿತಿ ನೀಡಿದರು. ಧರ್ಮಜ್ಯೋತಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ, ನಿವೃತ್ತ ಶಿಕ್ಷಕ ಟಿ. ನಾಗೇಂದ್ರ ಸ್ವಾಗತಿಸಿದರು. ಲಿಲ್ಲಿ ಮೇರಿ ಕಾರ್ಯಕ್ರಮ ನಿರೂಪಿಸಿದರು. ರೆವಿಟ್ಟಾ ವಂದಿಸಿದರು.
Next Story





