ಹಿರಾ ಶಿಕ್ಷಣ ಸಂಸ್ಥೆಯಲ್ಲಿ ಅಂತರ್ ಶಾಲಾ ವಿಜ್ಞಾನ ಮೇಳ

ಉಳ್ಳಾಲ: ಶಾಂತಿ ಎಜುಕೇಶನಲ್ ಟ್ರಸ್ಟ್ ಹಿರಾ ನಗರ ಬಬ್ಬುಕಟ್ಟೆ ಹಾಗೂ ಎ.ಜೆ. ಅಕಾಡೆಮಿ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್‍ಮೆಂಟ್ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ್ ಶಾಲಾ ವಿಜ್ಞಾನ ಮೇಳವನ್ನು ಹಿರಾ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಹಿರಾ ಪ್ರೌಢ ಶಾಲಾ ಹಳೆ ವಿದ್ಯಾರ್ಥಿನಿ ಡಾ. ಆಶಿಯಾ ಲಿಫಾಮ್ ಮೇಳವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಹಿತವಚನ ನೀಡಿದರು. ಕಾರ್ಯಕ್ರಮದಲ್ಲಿ ಎ.ಜೆ. ಅಕಾಡೆಮಿ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್‍ಮೆಂಟ್ ಇದರ ನಿರ್ದೇಶಕ ಅಬ್ದುಲ್ಲ ಜಾವೇದ್ ವಿಜ್ಞಾನ ಮೇಳದ ಮಹತ್ವವನ್ನು ವಿವರಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಫಿಸಿಕ್ಸ್ ವಿಭಾಗದ ಪ್ರೊ. ಡಾ. ಬಾಲಕೃಷ್ಣ, ಕರ್ನಾಟಕ ಸರಕಾರದ ಸಂದ್ಯಾ ಪಾಲಿಟೆಕ್ನಿಕ್ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಬ್ದುಲ್ ಖಾದರ್ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜಿನ ಬಯೊ ಕೆಮಿಸ್ಟ್ರಿ ವಿಭಾಗದ ಸಹಾಯಕ ಪ್ರೊ. ಸಮೀನ ಕೆ.ಎ. ಮೇಳದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷ ಎ.ಎಚ್.ಮಹಮೂದ್ ಕಾರ್ಯದರ್ಶಿ ಯು.ಎ.ಅಬ್ದುಲ್ ಕರೀಮ್, ಟ್ರಸ್ಟಿಗಳಾದ ಕೆ.ಎಂ. ಶರೀಫ್, ರಹ್ಮತುಲ್ಲ, ಇಲ್ಯಾಸ್ ಇಸ್ಮಾಯಿಲ್, ಹಸನ್ ಪಿಲಾರ್ , ಯು.ಎ.ಅಬ್ದುಲ್ ಖಾದರ್, ಉಮರ್ ಬಾವ, ಪಿ.ಅಬ್ಬಾಸ್, ಯು.ಎಂ. ಹಸನಬ್ಬ, ಮಹಿಳಾ ಟ್ರಸ್ಟಿಗಳಾದ ಸಮೀರ ಮುಝಮ್ಮಿಲ್ , ನಸೀರಾ ಕೊಟೇಕಾರ್ ಹಾಗೂ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಕೆ.ಎಂ.ಅಶ್ರಫ್ ವಹಿಸಿದ್ದರು. ಶಾಲಾ ಸಂಚಾಲಕ ಕೆ.ಅಬ್ದುಲ್ ರಹ್ಮಾನ್ ಸ್ವಾಗತಿಸಿದರು. ಹಿರಾ ಶಾಲೆಯ ಶಿಕ್ಷಕಿ ಜಸೀರ ಕಾರ್ಯಕ್ರಮ ನಿರೂಪಿಸಿದರು.







