ಗಲ್ಫ್ ಪ್ರಾಂತದಲ್ಲಿ ಬೃಹತ್ ದಾಳಿಗೆ ಇರಾನ್ ಸಂಚು
ಅಮೆರಿಕ ಎಚ್ಚರಿಕೆ

ವಾಶಿಂಗ್ಟನ್, ನ.24: ಇರಾನ್ ದೇಶವು ಗಲ್ಫ್ ಪ್ರಾಂತದಲ್ಲಿ ಬೃಹತ್ ದಾಳಿಯೊಂದನ್ನು ನಡೆಸಲು ಸಂಚು ಹೂಡಿದ್ದು, ಕೊಲ್ಲಿ ಪ್ರದೇಶದ ದೇಶಗಳು ಅಪಾಯದಲ್ಲಿವೆ ಎಂದು ಅಮೆರಿಕದ ಮಿಲಿಟರಿ ಕೇಂದ್ರೀಯ ಕಮಾಂಡ್‌ನ ವರಿಷ್ಠ ಜ. ಕೆನೆತ್ ಎಫ್. ಮ್ಯಾಕೆಂಝಿ ಎಚ್ಚರಿಕೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ವಿಶ್ವದ ಅತಿ ದೊಡ್ಡ ತೈಲ ಕಂಪೆನಿ ಸೌದಿ ಅರಾಮ್ಕೊ ದ ಮೇಲೆ ಕೆಲವು ತಿಂಗಳ ಹಿಂದೆ ಇರಾನ್ ಬೆಂಬಲದೊಂದಿಗೆ ನಡೆದಿದೆಯೆನ್ನಲಾ ಡ್ರೋನ್ ದಾಳಿಯನ್ನು ಪ್ರಸ್ತಾವಿಸಿದ ಅವರು ಈ ದಾಳಿಯು ಮತ್ತೊಮ್ಮೆ ನಡೆಯುವ ಎಲ್ಲಾ ಸಾಧ್ಯತೆಗಳು ಬಲವಾಗಿವೆ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಇಸ್ರೇಲ್ ಮೇಲೂ ಬೃಹತ್ ದಾಳಿ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.
‘‘ಸೌದಿಯ ತೈಲ ಕ್ಷೇತ್ರಗಳ ಮೇಲೆ ನಡೆದ ದಾಳಿಯು ಅಘಾತಕಾರಿಯಾದುದಾಗಿತ್ತು. ಇದು ಮತ್ತೆ ಮುಂದುವರಿಯುವುದನ್ನು ನಾನು ತಳ್ಳಿಹಾಕಲಾರೆ ’’ ಎಂದರು.
ತನ್ನ ಕೈವಾಡದೊಂದಿಗೆ ನಡೆಸಲಾದ ಸರಣಿ ದಾಳಿಗಳಿಗೆ ಸೂಕ್ತ ಪ್ರತಿಕ್ರಿಯೆಯ ಕೊರತೆಯಿಂದಾಗಿ ಇರಾನ್‌ಗೆ ಇನ್ನಷ್ಟು ಧೈರ್ಯಬಂದಿದೆಯೆಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಳೆದ ತಿಂಗಳು ಆರೋಪಿಸಿದ್ದರು. ಅಂತಹ ಯಾವುದೇ ದಾಳಿಗೆ ಇಸ್ರೇಲ್ ಬಲವಾಗಿ ಪ್ರತಿಕ್ರಿಯಿಸಲಿದೆ’’ ಎಂದು ಅವರು ಎಚ್ಚರಿಕೆ ನೀಡಿದ್ದರು.
ಅಮೆರಿಕವು ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ತನ್ನ ಸೇನಾ ನಿಯೋಜನೆಯನ್ನು ಹೆಚ್ಚಿಸಿತ್ತು. ಇರಾನ್‌ನಿಂದ ದಾಳಿ ಬೆದರಿಕೆಯ ನೆಪದಲ್ಲಿ ಅಮೆರಿಕವು ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ತನ್ನ ಸೇನಾನಿಯೋಜನೆಯನ್ನು ಹೆಚ್ಚಿಸಿತ್ತು. ಸೌದಿಯ ಅಬೈಕ್ ನಲ್ಲಿರುವ ಅರಾಮ್ಕೊ ತೈಲ ಸಂಸ್ಕರಣಾ ಸ್ಥಾವರ ಹಾಗೂ ಖುರೈನಲ್ಲಿರುವ ಪ್ರಮುಖ ತೈಲ ಕ್ಷೇತ್ರದ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ಡ್ರೋನ್ ದಾಳಿ ನಡೆದ ಬಳಿಕ ಸೌದಿ ಅರೇಬಿಯದಲ್ಲಿ ಅಮೆರಿಕನ್ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಅರಾಮ್ಕದ ಸ್ಥಾವರಗಳ ಮೇಲೆ ನಡೆದ ಡ್ರೋನ್ ದಾಳಿಯ ಹಿಂದೆ ತನ್ನ ಕೈವಾಡವಿದೆಯೆಂಬ ಆರೋಪವನ್ನು ಇರಾನ್ ತಳ್ಳಿಹಾಕಿದೆ. “ಈ ಆರೋಪವು ಅರ್ಥಹೀನ ಹಾಗೂ ವಿವೇಕರಹಿತ ಹಾಗೂ ತಿರುಳಿಲ್ಲದ್ದು’’ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್ ಮೌಸವಿ ಹೇಳಿದ್ದಾರೆ.







