ಮಿತ್ತಬೈಲ್: ಇಶ್ಕೇ ಮದೀನಾ ಮೀಲಾದ್ ರ್ಯಾಲಿ, ಎಸ್‍ಕೆಜೆಎಂಸಿಸಿ 60ನೇ ವಾರ್ಷಿಕ ಪ್ರಚಾರ ಸಂಗಮ

ಬಂಟ್ವಾಳ : ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾ ಸಮಿತಿ ಹಾಗೂ ಮದ್ರಸ ವಿದ್ಯಾರ್ಥಿಗಳ ಒಕ್ಕೂಟ ಎಸ್‍ಕೆಎಸ್‍ಬಿವಿ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆ ಪ್ರಯುಕ್ತ "ಇಶ್ಕೇ ಮದೀನಾ" ಮಿಲಾದ್ ಸಂದೇಶ ಜಾಥಾವು ಬಹಳ ವಿಜ್ರಂಭಣೆಯಿಂದ ರವಿವಾರ ಸಂಜೆ ಜರಗಿತು.
ಜಾಥಾದ ಮೊದಲು ಗೂಡಿನಬಳಿ ಮಸೀದಿ ಹುಸೈನ್ ಬಾಳವಿ ತಂಙಳ್ ಕುಕ್ಕಾಜೆ ಅವರು ಝಿಯಾರತ್‍ನ ನೇತೃತ್ವ ವಹಿಸಿದ್ದರು. ಅಮೀರ್ ತಂಙಲ್ ಕೀನ್ಯಾ ಅವರು ಸಂಘದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಇಶ್ಕೇ ಮದೀನಾ ಮಿಲಾದ್ ಸಂದೇಶ ಜಾಥಾಕೆ ಚಾಲನೆ ನೀಡಿದರು.
ಗೂಡಿನಬಳಿಯಿಂದ ಆರಂಭಗೊಂಡ ಜಾಥಾ ಮಿತ್ತಬೈಲಿನಲ್ಲಿ ಸಮಾಪ್ತಿಗೊಂಡಿತು. ಸಮಸ್ತ ಮತ್ತು ಅಧೀನ ಸಂಘಟನೆಗಳ ನೇತಾರರು, ಕಾರ್ಯಕರ್ತರು, ಹಿತೈಷಿಗಳು, ಮುಅಲ್ಲಿಮರು, ವಿದ್ಯಾರ್ಥಿಗಳು ಸಂಗಮಿಸುವ ಜಾಥಾದಲ್ಲಿ ದಫ್, ಸ್ಕೌಟ್ ಮುಂತಾದವು ಮೆರವಣಿಗೆಗೆ ವಿಶೇಷ ಮೆರಗು ನೀಡಿತು.
ಜಾಥಾ ಸಮಾರೋಪ
ಸಂಜೆ ಮಿತ್ತಬೈಲ್ ಮಸೀದಿ ವಠಾರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಕೋಶಾಧಿಕಾರಿ ಅಮೀರ್ ತಂಙಲ್ ಕೀನ್ಯಾ ದುವಾ ನೆರವೇರಿಸಿದರು. ಮಿತ್ತಬೈಲ್ ಮಸೀದಿಯ ಖತೀಬ್ ಅಶ್ರಫ್ ಫೈಝಿ ಉದ್ಘಾಟಿಸಿದರು. ಜಿಲ್ಲಾ ಸಮಿತಿಯ ಸಂಚಾಲಕ ಇಕ್ಬಾಲ್ ಬಾಳಿಲ ಮುಖ್ಯ ಪ್ರಭಾಷಣ ಮಾಡಿದರು.
ಸಮಸ್ತ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಸುಮಾರು 10 ಸಾವಿರದಷ್ಟು ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರ ಒಕ್ಕೂಟ ಸಮಸ್ತ ಕೇರಳ ಜಂಇಯ್ಯತುಲ್ 10 ಮುಅಲ್ಲಿಮೀನ 60ನೇ ವಾರ್ಷಿಕ ಮಹಾಸಮ್ಮೇಳನವು ಡಿ. 27ರಿಂದ ಕೇರಳದ ಕೊಲ್ಲಂನಲ್ಲಿ ನಡೆಯಲಿದ್ದು, ಇದರ ಕರಪತ್ರವನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಎಸ್‍ಕೆಜೆಎಂಸಿಸಿ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೇಂಜಾಡಿ, ಮಿತ್ತಬೈಲ್ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಪ್ರಮುಖರಾದ ಇರ್ಷಾದ್ ದಾರಿಮಿ ಮಿತ್ತಬೈಲ್, ರಫೀಕ್ ಹಾಜಿ ಕೋಡಾಜೆ, ಬಶೀರ್ ದಾರಿಮಿ, ಅಬ್ದುಲ್ ರಝಾಕ್ ಮುಸ್ಲಿಯಾರ್ ಬಾಂಬಿಲ, ಹಾರೂನ್ ರಶೀದ್ ಬಂಟ್ವಾಳ, ಇಬ್ರಾಹಿಂ ದಾರಿಮಿ ಕಡಬ, ಗೂಡಿನಬಳಿ ಮಸೀದಿಯ ಖತೀಬ್ ಶಾಫಿ ಇರ್ಫಾನಿ, ಖಾಸಿಂ ದಾರಿಮಿ, ಇಸ್ಮಾಯಿಲ್ ಯಮಾನಿ, ಆಸಿಫ್ ಅಝ್ಹರಿ ಪುತ್ತೂರು, ಸಿ.ಎಚ್. ಇಬ್ರಾಹಿಂ ಮುಸ್ಲಿಯಾರ್, ಇಬ್ರಾಹಿಂ ದಾರಿಮಿ ಮಿತ್ತಬೈಲ್, ಮುಸ್ತಫಾ ಫೈಝಿ ಮಿತ್ತಬೈಲ್, ಇಕ್ಬಾಲ್ ದಾರಿಮಿ ಕಲ್ಲಡ್ಕ, ಮುಸ್ತಫಾ ಫೈಝಿ, ಯೂಸುಫ್ ಗೊಳ್ತಮಜಲು, ಅನ್ವರ್ ಅಝ್ಹರಿ ಬಂಟ್ವಾಳ, ಮನ್ಸೂರ್ ಮೌಲವಿ, ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಮುಸ್ತಫಾ ಕಟ್ಟದಪಡ್ಪು, ಉಬೈದುಲ್ಲಾ ಹಾಜಿ ಗೂಡಿನಬಳಿ, ರಿಯಾಝ್ ರಹ್ಮಾನಿ ಕೀನ್ಯಾ, ಅಬ್ದುಲ್ ಖಾದರ್ ಬಂಟ್ವಾಳ, ಬಿ.ಎಸ್. ಅನ್ವರ್, ಅಬ್ದುಲ್ ಲತೀಫ್ ಗೂಡಿನಬಳಿ, ಇಸ್ರಾರ್ ಗೂಡಿನಬಳಿ ಹಾಜರಿದ್ದರು.
ಎಸ್‍ಕೆಜೆಎಂಸಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ, ಪ್ರಸ್ತಾವಿಸಿದರು. ಕೆಎಂಎ ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.






.jpg)
.jpg)
.jpg)
.jpg)
.jpg)

