Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೊಳೆಯತೊಡಗಿರುವ ಪ್ರಜಾಸತ್ತೆ

ಕೊಳೆಯತೊಡಗಿರುವ ಪ್ರಜಾಸತ್ತೆ

ವಾರ್ತಾಭಾರತಿವಾರ್ತಾಭಾರತಿ25 Nov 2019 12:05 AM IST
share
ಕೊಳೆಯತೊಡಗಿರುವ ಪ್ರಜಾಸತ್ತೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದನ್ನು ಆತ್ಮಸಾಕ್ಷಿಯಿಲ್ಲದ ರಾಜಕೀಯ ಎಂದು ಕರೆಯುವುದಕ್ಕಿಂತ, ಆತ್ಮವೇ ಇಲ್ಲದ ರಾಜಕೀಯ ಎಂದು ಕರೆಯುವುದು ಸೂಕ್ತ. ಕಳೆದ ಐದು ವರ್ಷಗಳಿಂದ ದೇಶದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಅನೈತಿಕ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿರುವವರಿಗೆ ಇದೇನು ಅಚ್ಚರಿಯನ್ನು ಹುಟ್ಟಿಸಲಾರದು. ಈ ಹಿಂದೆಲ್ಲ ಮೋಸ, ವಂಚನೆ, ಅಕ್ರಮಗಳನ್ನು ರಾಜಕಾರಣಿಗಳು ಕದ್ದು ಮುಚ್ಚಿ ಮಾಡುತ್ತಿದ್ದರು. ಸಿಕ್ಕಿ ಬಿದ್ದಾಗ ‘ನಾವು ನಿರಪರಾಧಿಗಳು’ ಎಂದು ಸಾಬೀತು ಮಾಡಲು ಹೆಣಗುತ್ತಿದ್ದರು. ಸದ್ಯಕ್ಕೆ ದೇಶದ ರಾಜಕೀಯ ಪರಿಕಲ್ಪನೆಗಳು ಬದಲಾಗಿವೆ. ಇಂದು ಅಕ್ರಮ, ವಂಚನೆ, ಮೋಸಗಳ ಮೂಲಕ ಅಧಿಕಾರ ಹಿಡಿಯುವುದು ‘ಚಾಣಕ್ಯ’ತನವಾಗಿದೆ. ಹಾಡಹಗಲೇ ಪ್ರಜಾಸತ್ತೆಗೆ ವಂಚಿಸುವುದನ್ನೇ ತಂತ್ರಗಾರಿಕೆಯೆಂದು ಕರೆಯಲಾಗುತ್ತಿದೆ. ದೇಶದ ರಾಜಕೀಯ ಇದ್ದ ಅಲ್ಪಸ್ವಲ್ಪ ಲಜ್ಜೆಗಳನ್ನು, ಬಟ್ಟೆಗಳನ್ನು ಕಳಚಿಕೊಂಡು ಬಹಿರಂಗವಾಗಿ ಬೆತ್ತಲಾಗಿ ಓಡಾಡುವಂತಹ ಧೈರ್ಯವನ್ನು ಪ್ರದರ್ಶಿಸಿದೆ.

ಮಹಾರಾಷ್ಟ್ರದಲ್ಲಿ ನಡೆದ ಅತ್ಯಂತ ಅಶ್ಲೀಲ ರಾಜಕೀಯಕ್ಕಾಗಿ ಅಮಿತ್ ಶಾರನ್ನು ಅಭಿನಂದಿಸಲಾಗುತ್ತಿದೆ. ಮಾಧ್ಯಮಗಳು ಅವರಿಗೆ ‘ಚಾಣಕ್ಯ’ ಎಂಬ ಬಿರುದನ್ನು ನೀಡುವ ಮೂಲಕ ‘ಚಾಣಕ್ಯ’ ಎನ್ನುವ ವ್ಯಕ್ತಿತ್ವಕ್ಕೆ ಕುಟಿಲತೆ, ವಂಚನೆ, ದ್ರೋಹ ಇತ್ಯಾದಿ ಅರ್ಥಗಳನ್ನು ಅಂಟಿಸುತ್ತಿದೆ. ಒಟ್ಟಿನಲ್ಲಿ ಒಬ್ಬ ರಾಜಕೀಯ ಮುತ್ಸದ್ದಿಯಾಗಬೇಕಾದರೆ ಆತ ರಾಜಕಾರಣಿಯಾಗಿ ಈ ದೇಶವನ್ನು ಯಾವ ರೀತಿಯಲ್ಲಿ ಮುನ್ನಡೆಸುತ್ತಿದ್ದಾನೆ ಎನ್ನುವುದಕ್ಕಿಂತ, ಅಧಿಕಾರ ಹಿಡಿಯುವುದಕ್ಕಾಗಿ ನೈತಿಕವಾಗಿ ಎಷ್ಟು ಪಾತಾಳ ತಲುಪುತ್ತಾನೆ ಎನ್ನುವುದು ಮಾನದಂಡವಾಗಿದೆ. ‘ಭ್ರಷ್ಟಾಚಾರದ ವಿರುದ್ಧ ಹೋರಾಟ’ ಎಂದು ಹೇಳುತ್ತಲೇ ಬಿಜೆಪಿಯು ಇಂದು ಬಹಿರಂಗವಾಗಿ ಶಾಸಕರನ್ನು ಕೋಟಿಗಟ್ಟಲೆ ಹಣ ತೆತ್ತು ಕೊಂಡುಕೊಳ್ಳುವಷ್ಟು ಸಮರ್ಥವಾಗಿ ಬಿಟ್ಟಿದೆ. ನೋಟು ನಿಷೇಧದಿಂದ ಇಡೀ ದೇಶ ಆರ್ಥಿಕವಾಗಿ ತತ್ತರಿಸಿ ಕೂತಿದೆಯಾದರೂ, ಬಿಜೆಪಿಯ ಬಳಿ ಶಾಸಕರನ್ನು ಕೊಳ್ಳುವುದಕ್ಕೆ ಸಾವಿರಾರು ಕೋಟಿ ಹಣವಿದೆ. ನೋಟು ನಿಷೇಧ ಯಾಕೆ ವಿಫಲವಾಯಿತು ಎನ್ನುವುದಕ್ಕೆ ಉತ್ತರವೂ ಇಲ್ಲಿಯೇ ಇದೆ. ಮಹಾರಾಷ್ಟ್ರದಲ್ಲಿ ನಡೆದಿರುವುದು ದಶಕದ ಹಿಂದೆ ಕರ್ನಾಟಕದಲ್ಲಿ ನಡೆದಿತ್ತು. ಮೊತ್ತ ಮೊದಲ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದಕ್ಕೆ ಜಾತ್ಯತೀತ ಜನತಾದಳ ಕಾರಣವಾಯಿತು.

ಎಲ್ಲ ವೌಲ್ಯಗಳನ್ನು ಚರಂಡಿಗೆಸೆದು ಅಧಿಕಾರ ಹಿಡಿಯುವ ಒಂದೇ ಕಾರಣಕ್ಕಾಗಿ ಜೆಡಿಎಸ್ ಬಿಜೆಪಿಯನ್ನು ತಬ್ಬಿಕೊಂಡಿತು. ಹೀಗೂ ರಾಜಕೀಯ ನಡೆಸಬಹುದೇ ಎಂದು ರಾಜ್ಯದ ಜನರು ಮಾತ್ರವಲ್ಲ ದೇಶದ ಜನರೇ ಬೆಚ್ಚಿ ಬಿದ್ದಿದ್ದರು. ದೇವೇಗೌಡರ ಆಣತಿಯನ್ನು ಮೀರಿ ಅಥವಾ ಮೀರಿದಂತೆ ನಟಿಸಿ ಬಿಜೆಪಿಯೊಂದಿಗೆ ಕೈ ಜೋಡಿಸಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರು. ಅಷ್ಟೇ ಅಲ್ಲ ‘ಜಾತ್ಯತೀತತೆಯ ಅರ್ಥ ನನಗೆ ಗೊತ್ತಿಲ್ಲ’ ಎಂದಿದ್ದರು. ಇದೀಗ ಮತ್ತೆ ಬಿಜೆಪಿಯ ಜೊತೆಗೆ ಕೈ ಜೋಡಿಸಿ ಅಧಿಕಾರ ಹಿಡಿಯಲು ಸಮಯ ಸಂದರ್ಭವನ್ನು ಕಾಯುತ್ತಿದ್ದಾರೆ. ಮಹಾರಾಷ್ಟ್ರದ ಬೆಳವಣಿಗೆ ಇದರ ಮುಂದುವರಿದ ಭಾಗವಾಗಿದೆ. ಎಲ್ಲವೂ ಸರಿಯಾಗಿದ್ದರೆ ಶಿವಸೇನೆ ಈ ಹಿಂದೆಯೇ ಬಿಜೆಪಿಯನ್ನು ಕೈ ಬಿಟ್ಟು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿತ್ತು. ಕಳೆದ ಬಾರಿಯೇ ಅದಕ್ಕಾಗಿ ಉಭಯ ಪಕ್ಷಗಳು ಸಿದ್ಧತೆ ನಡೆಸಿದ್ದವು. ಆದರೆ ಇಬ್ಬರು ಜೊತೆ ಸೇರಿದರೂ ಸರಕಾರ ನಡೆಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಶಿವಸೇನೆ ಅನಿವಾರ್ಯವಾಗಿ ಬಿಜೆಪಿಯ ಸಂಗ ಮಾಡಿತ್ತು. ಈ ಬಾರಿ ಬಿಜೆಪಿಯ ಜೊತೆ ಸೇರಿ ಶಿವಸೇನೆ ಚುನಾವಣೆಯನ್ನು ಎದುರಿಸಿತ್ತು. ಆದರೆ ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿ ಹಂಚಿಕೊಳ್ಳಲು ಸಿದ್ಧವಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ತಿರುಗಿ ಬಿದ್ದಿದೆ.

ಇಲ್ಲಿ ಬಿಜೆಪಿಯ ಕುರಿತಂತೆ ಶಿವಸೇನೆ ಯಾವುದೇ ಸೈದ್ಧಾಂತಿಕ ಭಿನ್ನಮತ ಹೊಂದಿಲ್ಲ ಎನ್ನುವುದನ್ನು ಗಮನಿಸಬೇಕು. ಬಿಜೆಪಿಯ ಅನೈತಿಕ ರಾಜಕೀಯವನ್ನು ಚರ್ಚಿಸುವ ಮೊದಲು ಉಳಿದ ಪಕ್ಷಗಳ ಅನೈತಿಕತೆಯನ್ನೂ ಪ್ರಶ್ನಿಸಬೇಕಾಗಿದೆ. ಎನ್‌ಸಿಪಿ ಮತ್ತು ಶಿವಸೇನೆ ಬೇರೆ ಬೇರೆ ವೌಲ್ಯಗಳ ಆಧಾರದಲ್ಲಿ ಮತ ಯಾಚಿಸಿವೆ. ಎನ್‌ಸಿಪಿ ತನ್ನ ಪಕ್ಷ ಜಾತ್ಯತೀತ ವೌಲ್ಯಗಳನ್ನು ಗೌರವಿಸುತ್ತದೆ ಎಂದು ಹೇಳುತ್ತದೆ. ಆದರೆ ಅಧಿಕಾರಕ್ಕಾಗಿ ಶಿವಸೇನೆಯೊಂದಿಗೆ ಕೈ ಜೋಡಿಸುತ್ತದೆ. ಇದೇ ಸಂದರ್ಭದಲ್ಲಿ ‘ಜಾತ್ಯತೀತತೆ’ಯ ಗುತ್ತಿಗೆ ವಹಿಸಿಕೊಂಡಿರುವ ಕಾಂಗ್ರೆಸ್ ಕೂಡ ಶಿವಸೇನೆಯೊಂದಿಗೆ ಸೇರಲು ನಿರ್ಧರಿಸಿದೆ. ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್ ಮೈತ್ರಿಯೇ ಅನೈತಿಕವಾದುದು. ಬಾಬರಿ ಮಸೀದಿ ಧ್ವಂಸ ಮತ್ತು ಮುಂಬೈ ಕೋಮುಗಲಭೆಯಲ್ಲಿ ಶಿವಸೇನೆಯ ಪಾತ್ರವೇನು ಎನ್ನುವುದು ಕಾಂಗ್ರೆಸ್‌ಗೆ ತಿಳಿಯದ್ದೇನೂ ಅಲ್ಲ. ಮುಂಬೈ ಗಲಭೆಯಲ್ಲಿ ಶಿವಸೇನೆಯ ಪಾತ್ರವನ್ನು ಶ್ರೀಕೃಷ್ಣ ಆಯೋಗ ಸ್ಪಷ್ಟವಾಗಿ ಉಲ್ಲೇಖಿಸಿದೆ. ಕೋಮುಗಲಭೆಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಇಂದಿಗೂ ಶಿವಸೇನೆ ತನ್ನ ಪ್ರಖರ ಹಿಂದುತ್ವವಾದಿ ನಿಲುವಿನಿಂದ ಹಿಂದೆ ಸರಿದಿಲ್ಲ. ಹೀಗಿರುವಾಗ ಕಾಂಗ್ರೆಸ್ ಯಾವ ನೈತಿಕ ನೆಲೆಗಟ್ಟಿನಲ್ಲಿ ಶಿವಸೇನೆಯೊಂದಿಗೆ ಕೈಜೋಡಿಸಿದೆ? ಶಿವಸೇನೆಯ ಈವರೆಗಿನ ಕೃತ್ಯಗಳಿಗೆ ಕಾಂಗ್ರೆಸ್ ಮೈತ್ರಿಯ ಮೂಲಕ ವೌನ ಸಮ್ಮತಿಯನ್ನು ನೀಡಿದಂತಾಗಿಲ್ಲವೆ? ಮೈತ್ರಿಯನ್ನು ಒಪ್ಪಿಕೊಳ್ಳುವ ಮೂಲಕ ಶಿವಸೇನೆಯ ಕಳಂಕ ಕಾಂಗ್ರೆಸ್‌ಗೂ ಅಂಟಿಕೊಂಡಿದೆ. ಜಾತ್ಯತೀತ ವೌಲ್ಯಕ್ಕೆ ಕಾಂಗ್ರೆಸ್ ಈ ಮೂಲಕ ದ್ರೋಹ ಎಸಗಿದೆ.

ಇನ್ನು ಬಿಜೆಪಿ ರಾತ್ರೋರಾತ್ರಿ ಎನ್‌ಸಿಪಿಯ ಅಜಿತ್ ಪವಾರ್ ಸಹಿತ ಕೆಲವು ಶಾಸಕರನ್ನು ಅಪಹರಿಸಿ ಅಧಿಕಾರ ಹಿಡಿದಿರುವುದನ್ನು ಚರ್ಚಿಸೋಣ. ಬಿಜೆಪಿ ಅಧಿಕಾರ ಹಿಡಿದಿರುವುದು ಅಜಿತ್ ಪವಾರ್ ಎಂಬ ಪರಮ ಭ್ರಷ್ಟನ ಬೆಂಬಲದೊಂದಿಗೆ. ಕಳೆದ ಬಾರಿಯ ಚುನಾವಣೆಯಲ್ಲಿ ಅಜಿತ್ ಪವಾರ್‌ರ ಭ್ರಷ್ಟಾಚಾರವನ್ನು ಚುನಾವಣೆಯ ವಿಷಯವಾಗಿ ಬಿಜೆಪಿ ಪರಿವರ್ತಿಸಿತ್ತು. ಅವರನ್ನು ಜೈಲಿಗೆ ಕಳುಹಿಸುವ ಕುರಿತಂತೆ ಮೊನ್ನೆಯವರೆಗೂ ಮಾತನಾಡುತ್ತಿತ್ತು. ಇದೀಗ ಅದೇ ಅಜಿತ್ ಪವಾರ್ ಬೆಂಬಲದ ಜೊತೆಗೆ ಬಿಜೆಪಿಯು ಸರಕಾರ ರಚಿಸಲು ಹೊರಟಿದೆ ಮಾತ್ರವಲ್ಲ, ಅವರನ್ನು ಉಪಮುಖ್ಯಮಂತ್ರಿ ಮಾಡಿದೆ. ಬಿಜೆಪಿ ಇಡೀ ದೇಶದ ಮುಂದೆ ನಗ್ನವಾಗಿದೆಯಾದರೂ, ಅದೇ ತನ್ನ ಹೆಗ್ಗಳಿಕೆ ಎಂದು ಮಾಧ್ಯಮಗಳ ಮೂಲಕ ಹೇಳುತ್ತಿದೆ. ಅಜಿತ್ ಪವಾರ್ ಗುಂಪನ್ನು ಬ್ಲಾಕ್‌ಮೇಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ತನಿಖಾ ಸಂಸ್ಥೆಗಳ ಬೆದರಿಕೆ ಅಜಿತ್ ಪವಾರ್‌ರ ನೆತ್ತಿಯ ಮೇಲೆ ತೂಗುಗತ್ತಿಯಾಗಿತ್ತು.

ಇದೀಗ ಬಿಜೆಪಿಯ ಜೊತೆಗೆ ಮೈತ್ರಿ ಮಾಡುವ ಮೂಲಕ ತನಿಖೆಯಿಂದ ಪಾರಾಗಲು ಹೊರಟಿದ್ದಾರೆ. ಇಷ್ಟಾದರೂ, ಅಜಿತ್ ಪವಾರ್ ಬಳಿ ಸಾಕಷ್ಟು ಶಾಸಕರಿಲ್ಲ ಎನ್ನುವುದು ಬಹಿರಂಗವಾಗಿದೆ. ಬಿಜೆಪಿ ಸರಕಾರ ರಚಿಸುವುದಕ್ಕೆ ಯಾವುದೇ ದಾರಿಗಳಿಲ್ಲದೇ ಇದ್ದರೂ ರಾಜ್ಯಪಾಲರು ಆತುರಾತುರವಾಗಿ ಅವರಿಗೆ ಅವಕಾಶವನ್ನು ನೀಡಿ ತನ್ನ ಹುದ್ದೆಯ ಘನತೆಯನ್ನು ಪಾತಾಳಕ್ಕೆ ತಲುಪಿಸಿದ್ದಾರೆ. ಮಹಾರಾಷ್ಟ್ರದ ಪ್ರಜಾಸತ್ತೆಯ ಅಳಿವು ಉಳಿವು ಸುಪ್ರೀಂಕೋರ್ಟ್ ಕೈಯಲ್ಲಿದೆ. ಸುಪ್ರೀಂಕೋರ್ಟ್ ಕೂಡ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡು, ಕೇಂದ್ರ ಸರಕಾರದ ಅಂಗಸಂಸ್ಥೆಯಾಗಿ ಗುರುತಿಸಿಕೊಂಡಿರುವುುದರಿಂದ ಅದರ ಮೇಲೂ ವಿಶೇಷ ನಿರೀಕ್ಷೆಯಿಡುವಂತಿಲ್ಲ. ಒಟ್ಟಿನಲ್ಲಿ, ದೇಶದಲ್ಲಿ ಪ್ರಜಾಸತ್ತೆಯ ಆತ್ಮ ನಾಶವಾಗಿದೆ. ದೇಹ ಕೊಳೆಯುತ್ತಾ ತನ್ನ ದುರ್ವಾಸನೆಯನ್ನು ಬೀರತೊಡಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X