Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಂಸ್ಕೃತಕ್ಕೆ ಬೇಕೇ ಧರ್ಮದ ಭದ್ರಕೋಟೆ?

ಸಂಸ್ಕೃತಕ್ಕೆ ಬೇಕೇ ಧರ್ಮದ ಭದ್ರಕೋಟೆ?

ಡಾ.ಬಿ.ಭಾಸ್ಕರ ರಾವ್ಡಾ.ಬಿ.ಭಾಸ್ಕರ ರಾವ್25 Nov 2019 12:26 PM IST
share
ಸಂಸ್ಕೃತಕ್ಕೆ ಬೇಕೇ ಧರ್ಮದ ಭದ್ರಕೋಟೆ?

ಮುಸ್ಲಿಮರೆಂಬ ಕಾರಣಕ್ಕಾಗಿ ಫಿರೋಝ್ ಖಾನ್‌ರ ನೇಮಕಾತಿಯನ್ನು ಪ್ರತಿಭಟಿಸುವ, ಅವರು ಮಾಡುವ ಸಂಸ್ಕೃತ ಪಾಠಗಳನ್ನು ನಾವು ಕೇಳುವುದಿಲ್ಲ ಎನ್ನುವ ವಿದ್ಯಾರ್ಥಿಗಳ ಹಿಂದಿರುವವರಿಗೆ ಸಂಸ್ಕೃತ ದೇವಭಾಷೆ ಎಂದು ನಂಬಿರುವವರು ದೇವರಿಗೆ ಭಾಷೆಯ ಭದ್ರಕೋಟೆ ಬೇಕಾಗಿಲ್ಲ; ಆತ ಎಲ್ಲರೊಳಗೂ ಕುಳಿತು ಎಲ್ಲ ಭಾಷೆಗಳಲ್ಲೂ ಸಂಪಾದಿಸಬಲ್ಲವ ಎಂದು ತಿಳಿಸಿಹೇಳಬೇಕಾಗಿದೆ.

ಈ ದೇಶದ ಜನ ಯಾಕಾಗಿ ಧರ್ಮ, ದೇವರಿಗೆ ಆತುಕೊಳ್ಳುತ್ತಾರೋ ಎಂದು ಯೋಚಿಸುತ್ತಾ ಹೋದರೆ ಒಮ್ಮಾಮ್ಮೆ ತುಂಬ ವಿಷಾದದ ಭಾವ ಕಾಡುತ್ತದೆ. ನಾನಾಗ ಪ್ರೈಮರಿ ಸ್ಕೂಲಿನ ಐದನೇ ತರಗತಿಯಲ್ಲಿದ್ದೆ. ಹತ್ತು ವರ್ಷದ ನನಗೆ ಆ ಶಾಲೆಯಲ್ಲಿ ಹನ್ನೊಂದು ಸಂಸ್ಕೃತ ಪಠ್ಯ ಪುಸ್ತಕಗಳಿದ್ದವು. ಅವುಗಳಲ್ಲಿ ಮಹಾ ಕವಿ ಕಾಳಿದಾಸನ ಕುಮಾರ ಸಂಭವ, ಮೇಘದೂತ, 15ನೇ ಶತಮಾನದ ರಾಮೋದಂತ, ಹಿತೋಪದೇಶ ಪಠ್ಯಗಳು ಸೇರಿದ್ದವು. ಅಲ್ಲದೆ ಸಂಸ್ಕೃತ ಭಾಷೆಯ ಪ್ರಾಥಮಿಕ ಚೌಕಟ್ಟನ್ನು ಅರ್ಥಮಾಡಿಕೊಳ್ಳಲು ಅಭ್ಯಾಸ ಮಾಡಲೇಬೇಕಾದ ಶಬ್ದ ರೂಪಾವಲಿ ಧಾತುರೂಪಾವಲಿ, ಶ್ಲೋಕಗಳ ರೂಪದಲ್ಲೇ ಇರುವ ರಾಗವಾಗಿ ಹಾಡಲು ಬಹುದಾದ ಸಂಸ್ಕೃತ ಅರ್ಥಕೋಶ (ಡಿಕ್ಷನರಿ) ಅಮರಕೋಶ ಕೂಡ ಸಂಸ್ಕೃತ ಕಲಿಕೆಯ ಭಾಗವಾಗಿತ್ತು. ಹತ್ತು ಹನ್ನೊಂದು ವರ್ಷದ ಮಕ್ಕಳಿಗೆ ಪಾರ್ವತಿಯ ಶೃಂಗಾರ ವರ್ಣನೆ, ಮೇಘದೂತ ಕಾವ್ಯದಲ್ಲಿ ನಲ್ಲ ತನ್ನನಲ್ಲೆಗೆ ಸಂದೇಶ ಕಳುಹಿಸುವ ಕಾವ್ಯಮಯವಾದ ಪ್ರೇಮ ಸಿಂಚಿತ ಸನ್ನಿವೇಶಗಳ ಜತೆಗೆ ಸಂಸ್ಕೃತ ವ್ಯಾಕರಣದ ಅಡಿಪಾಯವನ್ನೂ ಬೋಧಿಸುವ ಆ ಪಠ್ಯ ಕ್ರಮವನ್ನು ಗೊತ್ತುಪಡಿಸಿದ ಶಿಕ್ಷಣ ತಜ್ಞರಿಗೆ ಏನು ಹೇಳಬೇಕೋ! ಮುಂದೆ ಮಿಡ್ಲ್ ಸ್ಕೂಲ್, ಹೈಸ್ಕೂಲಿಗೆ ಬಂದಾಗ ಭಾಸ ಕವಿಯ ನಾಟಕ, ವಿಶ್ವದ ಭಾಷೆಗಳಲ್ಲೇ ಅತ್ಯಂತ ಸೂತ್ರಬದ್ಧವಾದ ಸಂಸ್ಕೃತ ವ್ಯಾಕರಣ ಗ್ರಂಥ ಸಿದ್ಧಾಂತ ಕೌಮುದಿ, ಪಂಚತಂತ್ರದ ಜತೆಗೆ ವೇದಗಳ ಅಧ್ಯಯನದ ನಂತರ ಓದಬೇಕಾದ ಲೌ ಗಾಕ್ಷಿ ಭಾಸ್ಕರನ ಅರ್ಥ ಸಂಗ್ರಹ 15ನೇ ವಯಸ್ಸಿನಲ್ಲೇ ನಾನು ಓದಲೇಬೇಕಾಗಿದ್ದ ಸಂಸ್ಕೃತ ಪಠ್ಯಗಳು. ಇದನ್ನೆಲ್ಲ ನಾನು ಯಾಕೆ ಬರೆಯುತ್ತಿದ್ದೇನೆಂದರೆ ಇಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಕಲಿಯುವವರಿಗೆ ಐದು ಆರು ದಶಕಗಳ ಹಿಂದೆ ಸಾಂಪ್ರದಾಯಿಕ ಸಂಸ್ಕೃತ ಶಾಲೆಗಳಲ್ಲಿ ಸಂಸ್ಕೃತ ಕಲಿಯಲೇಬೇಕಾಗಿದ್ದ ವಿದ್ಯಾರ್ಥಿಗಳ ಕಲಿಕೆಯ ಹೊರೆ ಎಷ್ಟೊಂದು ಭಾರವಾಗಿತ್ತು ಎಂಬ ಕಲ್ಪನೆ ಕೂಡ ಬರಲಾರದು. ಕಬ್ಬಿಣದ ಕಡಲೆಯಾಗಿರುವ ಸಂಸ್ಕೃತವನ್ನು ಅರಗಿಸಿಕೊಂಡು ಅದರ ಮೇಲೆ ಹಿಡಿತ ಸಾಧಿಸುವುದು ಎಷ್ಟೊಂದು ಕಷ್ಟವೆಂದರೆ ಸಂಸ್ಕೃತದಲ್ಲಿ ಹೆಸರಿಗೆ ಸ್ನಾತಕೋತ್ತರ ಪದವಿ ಪಡೆದವರು ಕೂಡಾ ಸಂಸ್ಕೃತದಲ್ಲಿ ನಿರ್ಗಳವಾಗಿ ಭಾಷಣ ಮಾಡಲು ಪರದಾಡಬೇಕಾಗುತ್ತದೆ.

 ಪರಿಸ್ಥಿತಿ ಹೀಗಿರುವಾಗ ಸಂಸ್ಕೃತ ಕಲಿಯಲು,ಕಲಿಸಲು ಯಾರೇ ಮುಂದೆ ಬಂದರೂ ಅವರು ಕಲಿಯದಂತೆ, ಅಥವಾ ಅವರು ಕಲಿಸದಂತೆ ಅವರನ್ನು ತಡೆಯುವುದಾಗಲಿ ಅಂಥವರ ವಿರುದ್ಧ ಪ್ರತಿಭಟಿಸುವುದಾಗಲಿ ಒಂದು ಪ್ರಜಾಸತ್ತಾತ್ಮಕ ಪ್ರಭುತ್ವದಲ್ಲಿ ಯಾರಿಗೂ ಭೂಷಣವಲ್ಲ. ಯಾವುದೇ ಭಾಷೆಯ ಕಲಿಕೆಗಾಗಲಿ ಬೋಧನೆಗಾಗಲಿ ಜಾತಿ ಮತಪಂಥಗಳ ಗಡಿ ಇಲ್ಲ, ಗೋಡೆಯೂ ಇಲ್ಲ. ಗಡಿ, ಗೋಡೆಗಳಿರುವುದು ಮತಾಂಧರ ಮನಸ್ಸುಗಳಲ್ಲಿ ಮಾತ್ರ. ಬನಾರಸ್ ಹಿಂದೂ ವಿಶ್ವ ವಿದ್ಯಾನಿಲಯದಲ್ಲಿ ಸಂಸ್ಕೃತ ಅಧ್ಯಾಪಕ ಹುದ್ದೆಗೆ ಓರ್ವ ಮುಸ್ಲಿಮ್ ನೇಮಕವಾಗಿರುವ, ಹಾಗೂ ಅವರಿಂದ ತಾವು ಪಾಠ ಕೇಳಿಸಿಕೊಳ್ಳುವುದಿಲ್ಲವೆಂದು ಕೆಲವು ವಿದ್ಯಾರ್ಥಿಗಳು ಪ್ರತಿಭಟಿಸಿರುವ ಹಿನ್ನೆಲೆಯಲ್ಲಿ ಈ ದೇಶದ ತಥಾಕಥಿತ ಸಂಸ್ಕೃತ ಪ್ರಿಯರು ಸ್ವಲ್ಪ ಗಂಭೀರವಾಗಿ ಯೋಚಿಸಬೇಕಾಗಿದೆ.

  ಕುತೂಹಲದ ವಿಷಯವೆಂದರೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್‌ನ ನಿರ್ದೇಶಕರಾಗಿ ಆ ವಿಶ್ವವಿದ್ಯಾನಿಲಯಕ್ಕೆ ಬಹಳ ಮುಖ್ಯವಾದ ಕೊಡುಗೆ ನೀಡಿದವರು ಉಡುಪಿ ಜಿಲ್ಲೆಯವರೇ ಆದ ಕೆ.ಎನ್. ಉಡುಪ (ಕಟೀಲು ನರಸಿಂಹ ಉಡುಪ). ಕಿನ್ನಿಗೋಳಿಯ ಯುಗ ಪುರುಷ ಪ್ರಕಟನಾಲಯದ ದಿವಂಗತ ಕೊ.ಅ. ಉಡುಪರ ಸಹೋದರರಾದ ಕೆ.ಎನ್. ಉಡುಪರ ನೇತೃತ್ವದಲ್ಲಿ ಅಂದಿನ ಕೇಂದ್ರ ಸರಕಾರ ದೇಶೀಯ ವೈದ್ಯಕೀಯ ವಿಜ್ಞಾನವನ್ನು ಪ್ರೋತ್ಸಾಹಿಸಿ ಅಭಿವೃದ್ಧಿಪಡಿಸುವ ಕುರಿತು ರಚಿಸಿದ್ದ ಸಮಿತಿಯ ವರದಿ ಮುಂದಿನ ದಿನಗಳಲ್ಲಿ ‘ಉಡುಪ ರಿಪೋರ್ಟ್’ ಎಂದೇ ಪ್ರಸಿದ್ಧವಾಯಿತು. ಇವತ್ತು ನಮ್ಮ ದೇಶದಲ್ಲಿ ದೇಶೀಯ ವೈದ್ಯಕೀಯ ವಿಜ್ಞಾನಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರಕಲು ‘ಉಡುಪ ವರದಿ’ಯ ಶಿಫಾರಸುಗಳೇ ಕಾರಣವಾದವು ಎನ್ನಲಾಗಿದೆ. ಬನಾರಸ್ ವಿಶ್ವವಿದ್ಯಾನಿಲಯ ಕೆ.ಎನ್. ಉಡುಪರ ಸೇವೆಯನ್ನು ಎಷ್ಟೊಂದು ವೌಲ್ಯಯುತವೆಂದು ಪರಿಗಣಿಸಿತೆಂದರೆ ಅವರ ನಿಧನಾನಂತರ ಅದು ‘ಉಡುಪ ಆಡಿಟೋರಿಯಮ್’ ಎಂಬ ಸಭಾಭವನವನ್ನು ಅವರ ಹೆಸರಿನಲ್ಲಿ ನಿರ್ಮಿಸಿತು. 1972ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಉಡುಪರು ಇಂದು ಬದುಕಿರುತ್ತಿದ್ದರೆ ಅಲ್ಲಿ ಈಗ ನಡೆದಿರುವ ಘಟನೆಯ ಕೋಮುವಾದಿ ಸ್ವರೂಪದಿಂದ ಖಂಡಿತವಾಗಿಯೂ ನೊಂದುಕೊಳ್ಳುತ್ತಿದ್ದರು. ಉಡುಪಿ ಜಿಲ್ಲೆಯವರೇ ಆದ ಉಡುಪರನ್ನು ಅಷ್ಟೊಂದು ಗೌರವದಿಂದ ಕಂಡಿದ್ದ ಒಂದು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಭಾಷಾ ಬೋಧನೆಗೆ ಸಂಬಂಧಿಸಿ ಧರ್ಮದ ಭದ್ರಕೋಟೆ ಕಟ್ಟಿ ಅನ್ಯ ಧರ್ಮೀಯರನ್ನು ಹೊರಗಿಡಲು ಪ್ರಯತ್ನಿಸುತ್ತಿರುವ ಮತೀಯ ಶಕ್ತಿಗಳ ವಿರುದ್ಧ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಾವೊಬ್ಬ ಧಾರ್ಮಿಕ ಮುಖಂಡರಾಗಲಿ, ಪೀಠಾಧಿಪತಿಗಳಾಗಲಿ ಪ್ರತಿಕ್ರಿಯಿಸದಿರುವುದು ಆಶ್ಚರ್ಯ.

 ಸಂಸ್ಕೃತ ಭಾಷೆಯ ಗಂಭೀರ ಅಧ್ಯಯನ ಯಾವುದೇ ಒಂದು ಧರ್ಮದ ಸರ್ವಸ್ವಾಮ್ಯವಲ್ಲ. ಹಾಗೆ ನೋಡಿದರೆ ಯಾವ ಭಾಷೆಯೂ ಯಾವುದೇ ಒಂದು ಮತ ಪಂಥ ಅಥವಾ ಧರ್ಮದ ಸರ್ವಸ್ವಾಮ್ಯವಲ್ಲ. ಸಂಸ್ಕೃತಕ್ಕೆ ಸಂಬಂಧಿಸಿ ಈ ದೇಶದಲ್ಲಿ ಭಾಷಾ ಗಡಿಯನ್ನು ದಾಟಿ ಪರಸ್ಪರ ಧರ್ಮಗಳ ನಡುವೆ, ವಿಶೇಷವಾಗಿ ಹಿಂದೂ ಹಾಗೂ ಇಸ್ಲಾಂ ಧರ್ಮದ ನಡುವೆ, ಶತಮಾನಗಳಿಂದ ಸಾಹಿತ್ಯ ಹಾಗೂ ಕಲಿಕೆಯ ವಿನಿಮಯ ನಡೆಯುತ್ತಲೇ ಬಂದಿದೆ. ಸಂಸ್ಕೃತದ ಅಭಿಜಾತ ರಚನೆಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆಯೂ ಸೇರಿದಂತೆ ಹತ್ತಾರು ಸಂಸ್ಕೃತ ಕೃತಿಗಳು ಮೊಗಲರ ಆಳ್ವಿಕೆಯ ಅವಧಿಯಲ್ಲಿ ಮುಸ್ಲಿಂ ವಿದ್ವಾಂಸರಿಂದ ಪರ್ಶಿಯನ್, ಅರೆಬಿಕ್ ಭಾಷೆಗಳಿಗೆ ಅನುವಾದಗೊಂಡ ಸಾಕಷ್ಟು ಉದಾಹರಣೆಗಳು ಇತಿಹಾಸದ ಉದ್ದಕ್ಕೂ ಸಿಗುತ್ತವೆ. ಪ್ರೊ. ರಹಮತ್ ತರೀಕೆರೆಯವರು ಇಂತಹ ಕೆಲವು ಉದಾಹರಣೆಗಳನ್ನು ‘ನಾನು ಮತ್ತು ಸಂಸ್ಕೃತ’ದಲ್ಲಿ ಉಲ್ಲೇಖಿಸಿದ್ದಾರೆ.

ಸಂಸ್ಕೃತ ಭಾಷೆಗೆ ಧರ್ಮದ ಗಡಿಯನ್ನು ಗುರುತಿಸುವುದಾದರೆ ಇವತ್ತು ನಮ್ಮನ್ನು ಸಂಪೂರ್ಣವಾಗಿ ಆವರಿಸಿರುವ ಇಂಗ್ಲಿಷ್ ಭಾಷೆಗೆ ಯಾವ ಧರ್ಮದ ಗಡಿಯನ್ನು ಗುರುತಿಸುವುದು? ಸಂಸ್ಕೃತ ಸಾಹಿತ್ಯ, ಶಾಸ್ತ್ರ, ಸ್ಮತಿಗಳನ್ನು ಇಂಗ್ಲಿಷಿಗೆ ಅನುವಾದಿಸಿರುವ ಪಾಶ್ಚಾತ್ಯ ವಿದ್ವಾಂಸರ ಧರ್ಮವನ್ನು ಕಟ್ಟಿಕೊಂಡು ನಾವೇನು ಮಾಡೋಣ?

ನಾನು ಸಂಸ್ಕೃತದ ಮೂಲಕ ಕಂಡುಕೊಂಡ ಕೆಲವು ಒಳನೋಟಗಳು ನನ್ನಲ್ಲಿ ಬೌದ್ಧಿಕ ವಿಸ್ಮಯ ಹುಟ್ಟಿಸಿವೆ. ಸುಮಾರು 2,500 ವರ್ಷಗಳ ಹಿಂದಿನ ರಚನೆಯಾಗಿರುವ ಋಗ್ವೇದದ ಪುರುಷಸೂಕ್ತದಲ್ಲಿ ಬರುವ ನಾಲ್ಕು ವರ್ಣ ವಿಭಜನೆ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ಮತ್ತು ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಗ್ರೀಕ್ ರಚನೆ ಪ್ಲೇಟೋನ ‘ರಿಪಬ್ಲಿಕ್’ನಲ್ಲಿ ಉಲ್ಲೇಖಿಸಲಾಗಿರುವ ನಾಲ್ಕು ರೀತಿಯ ವರ್ಗವಿಭಜನೆಯ ನಡುವೆ ಇರುವ ಸಾಮ್ಯ ನನ್ನನ್ನು ಧೀಮಂತ ಗೊಂದಲಕ್ಕೆ ತಳ್ಳಿದೆ. ಹಾಗೆಯೇ ಸಂಸ್ಕೃತದಲ್ಲಿ ಲಭ್ಯವಿರುವ ಸತ್ಯಹರಿಶ್ಚಂದ್ರನ ಕಥೆ ಹಾಗೂ ಕ್ರಿಶ್ಚಿಯನ್ ಧರ್ಮಗ್ರಂಥವಾಗಿರುವ ಬೈಬಲ್‌ನಲ್ಲಿ ಬರುವ ಜೋಬನ ಕತೆಯ ನಡುವೆ ಇರುವ ಹೋಲಿಕೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ಚರ್ಚ್‌ವೊಂದರ ಶತಮಾನೋತ್ಸವ ಸಮಾರಂಭದಲ್ಲಿ ಭಾಷಣ ಮಾಡುತ್ತ ನಾನು ಈ ಹೋಲಿಕೆಯನ್ನು ವಿವರಿಸಿದಾಗ ಅಲ್ಲಿ ನೆರೆದಿದ್ದ ಹಲವು ಕ್ರಿಶ್ಚಿಯನ್ ಬಾಂಧವರು ಆಶ್ಚರ್ಯಪಟ್ಟಿದ್ದರು. ಬಳಿಕ ಚರ್ಚ್‌ನ ಬಿಷಪರು ಸತ್ಯಹರಿಶ್ಚಂದ್ರ ಮತ್ತು ಜೋಬನ ಕತೆಯ ಕುರಿತು ಪಾದ್ರಿಯೋರ್ವರು ಪಿಎಚ್‌ಡಿ ಅಧ್ಯಯನ ನಡೆಸಿರುವುದಾಗಿ ಹೇಳಿದ್ದರು.

ಸಂಸ್ಕೃತದ ಮೂಲಕ ನನಗೆ ದೊರೆತ ಅರಿವಿನ ಪರಿಧಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾನು ಪವಿತ್ರ ಕುರ್‌ಆನ್, ಪವಿತ್ರ ಬೈಬಲ್, ಭಗವದ್ಗೀತೆ, ಉಪನಿಷತ್ತುಗಳನ್ನು ಓದಿದಾಗ ನಾನ ಕಂಡುಕೊಂಡ ಕೆಲವು ಸತ್ಯಗಳು ಯಾವುದೇ ಧರ್ಮದ ಕುರಿತು ಅತಿಭಾವುಕತನದ ನಿರರ್ಥಕತೆಯನ್ನು ನನಗೆ ಮನವರಿಕೆ ಮಾಡಿಸಿವೆ. ಎಲ್ಲ ಧರ್ಮಗಳೂ ‘ನೀನು ಬದುಕು, ಇತರರಿಗೆ ಬದುಕಲು ಬಿಡು; ನೀನು ಕಲಿ/ಕಲಿಸು, ಇತರರಿಗೂ ಕಲಿಯಲು/ಕಲಿಸಲು ಬಿಡು’ ಎನ್ನುತ್ತವೆಯೇ ಹೊರತು ‘ನಿನ್ನ ಧರ್ಮದ ಸುತ್ತ ಕೋಟೆ ಕಟ್ಟಿ ಅನ್ಯಧರ್ಮೀಯರು ಅದರೊಳಗೆ ಪ್ರವೇಶಿಸದಂತೆ ಕತ್ತಿ, ಗುರಾಣಿ ಹಿಡಿದು ನಿಂತುಕೋ’ ಎಂದು ಹೇಳುವುದಿಲ್ಲ.

ಮುಸ್ಲಿಮರೆಂಬ ಕಾರಣಕ್ಕಾಗಿ ಫಿರೋಝ್ ಖಾನ್‌ರ ನೇಮಕಾತಿಯನ್ನು ಪ್ರತಿಭಟಿಸುವ, ಅವರು ಮಾಡುವ ಸಂಸ್ಕೃತ ಪಾಠಗಳನ್ನು ನಾವು ಕೇಳುವುದಿಲ್ಲ ಎನ್ನುವ ವಿದ್ಯಾರ್ಥಿಗಳ ಹಿಂದಿರುವವರಿಗೆ ಸಂಸ್ಕೃತ ದೇವಭಾಷೆ ಎಂದು ನಂಬಿರುವವರು ದೇವರಿಗೆ ಭಾಷೆಯ ಭದ್ರಕೋಟೆ ಬೇಕಾಗಿಲ್ಲ; ಆತ ಎಲ್ಲರೊಳಗೂ ಕುಳಿತು ಎಲ್ಲ ಭಾಷೆಗಳಲ್ಲೂ ಸಂಪಾದಿಸಬಲ್ಲವ ಎಂದು ತಿಳಿಸಿಹೇಳಬೇಕಾಗಿದೆ.

share
ಡಾ.ಬಿ.ಭಾಸ್ಕರ ರಾವ್
ಡಾ.ಬಿ.ಭಾಸ್ಕರ ರಾವ್
Next Story
X