ಒಎಸ್ಎಫ್ ವತಿಯಿಂದ ನೂತನ ಕಾರ್ಪೊರೇಟರ್ ಗಳಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು: ಕಸಬಾ ಬೆಂಗ್ರೆಯ ಓಲ್ಡ್ ಸ್ಟೂಡೆಂಟ್ ಫೆಡರೇಶನ್ ಟ್ರಸ್ಟ್ ವತಿಯಿಂದ ನೂತನವಾಗಿ ಆಯ್ಕೆಯಾದ ನಗರ ಪಾಲಿಕೆಯ ಸದಸ್ಯರಾದ ಬೆಂಗ್ರೆ ವಾರ್ಡ್ ನ ಮುನೀಬ್ ಬೆಂಗ್ರೆ, ಪೊರ್ಟ್ ವಾರ್ಡ್ ನ ಲತೀಫ್ ಕಂದಕ್, ಕುದ್ರೋಳಿ ವಾರ್ಡ್ ನ ಶಂಶುದ್ದೀನ್ (ಎಚ್. ಬಿ. ಟಿ) ಹಾಗೂ ಬಂದರ್ ವಾರ್ಡ್ ನ ಝೀನತ್ ಅವರ ಪರವಾಗಿ ಅವರ ಪತಿ ಸಂಶುದ್ದೀನ್ ರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮುನೀಬ್ ಬೆಂಗ್ರೆ, ಲತೀಫ್ ಕಂದಕ್ ಹಾಗೂ ಸಂಶುದ್ದೀನ್ ಕುದ್ರೋಳಿ ಮಾತನಾಡಿದರು. ಸಮಾರಂಭ ಅಧ್ಯಕ್ಷತೆಯನ್ನು ಒ.ಎಸ್.ಎಫ್. ಸಂಘಟನೆಯ ಅಧ್ಯಕ್ಷ ನಿಸಾರ್ ವಹಿಸಿದ್ದರು.
ಸಂಘಟನೆಯ ಸಲಹೆಗಾರ ಬಿಲಾಲ್ ಮೊಯ್ದಿನ್ ಒ.ಎಸ್.ಎಫ಼್ ಸಂಘಟನೆ ಸ್ಥಾಪನೆಗೊಂಡು ಸುಮಾರು 29 ವರ್ಷ ಗಳ ಕಾಲ ಬಡವರಿಗೆ, ಅನಾಥರಿಗೆ ಮತ್ತು ಅಸಹಾಯಕರಿಗೆ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಎಲ್ಲಾ ರೀತಿಯ ಸಹಾಯ ಸಹಕಾರ ವನ್ನು ನೀಡುತ್ತಾ ಬಂದಿದೆ ಆದುದರಿಂದ ನಿಮ್ಮೆಲ್ಲರ ಸಹಾಯ ಸಹಕಾರವನ್ನು ನಮ್ಮ ಸಂಘಟನೆಗೆ ಅತೀ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಪ್ರಧಾನ ಕಾರ್ಯದರ್ಶಿ ಹಾಜಿ ಉಮರ್ ಬೆಂಗ್ರೆ ಮಾತನಾಡಿ ಸಂಘಟನೆಯ ಧ್ಯೇಯ ಉದ್ದೇಶಗಳನ್ನು ಸಭೆಯಲ್ಲಿ ವಿವರಿಸಿದರು. ಮಗ್ರಿಬ್ ನಮಾಝ್ ಬಳಿಕ ನಡೆದ ಮೌಲೂದ್ ಪಾರಾಯಣಕ್ಕೆ ಸ್ಥಳೀಯ ಖತೀಬ್ ಶರೀಫ್ ದಾರಿಮಿ ನೇತೃತ್ವ ನೀಡಿದರು.
ಈ ಸಂದರ್ಭ ಒ.ಎಸ್.ಎಫ್ ಗೌರವ ಅಧ್ಯಕ್ಷ ಬಿ.ಎಂ.ಹನೀಫ್, ಎಸ್ಕೆ ಎಸ್ಸೆಸ್ಸೆಫ್ ಬೆಂಗ್ರೆ ಶಾಖೆಯ ಅಧ್ಯಕ್ಷ ಆಸಿಫ್ ಆಚಿ, ಕೋಶಾಧಿಕಾರಿ ಪಯಾಝ್ ಇಬ್ರಾಹಿಂ, ಒ.ಎಸ್.ಫ್ ಜೊತೆ ಕಾರ್ಯದರ್ಶಿ ಬಿ.ಎಂ. ಮುಸ್ತಫಾ ಬೆಂಗ್ರೆ, ಸದಸ್ಯರಾದ ರಿಯಾಝ್ ಹಸ್ಸನ್, ನಾಸೀರ್, ಅಫ್ರಾರ್ ಅಲಿ, ಹಾರೂನ್ ಉಪಸ್ಥಿತರಿದ್ದರು.
ಎನ್.ಎ.ಹಂಝ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







