ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆ: ಜಿಲ್ಲಾ ಮಟ್ಟದ ಸಮಿತಿ ರಚನೆಗೆ ಸಿದ್ಧತೆ
ಉಡುಪಿ, ನ.25: ಸರಕಾರದ ಸುತ್ತೋಲೆಯಂತೆ ಪಿಓಎ ಕಾಯ್ದೆಯ ಅನುಷ್ಟಾನ, ಕಾಯ್ದೆಯಡಿ ನೊಂದಾಯಿಸಲಾದ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳಲ್ಲಿ ನೀಡಬೇಕಾದ/ ನೀಡಲಾದ ಪರಿಹಾರ, ಸಂತ್ರಸ್ತರ ಪುನರ್‌ವಸತಿ ಇತ್ಯಾದಿಗಳ ಬಗ್ಗೆ ಕ್ರಮವಹಿಸಲು ಜಿಲ್ಲಾ ಮಟ್ಟದ ಜಾಗೃತಿ ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳಗಿನಿಂದ (ಪರಿಶಿಷ್ಟ ಜಾತಿ-3, ಪರಿಶಿಷ್ಟ ಪಂಗ -2 ಒಟ್ಟು-5) ಆಯ್ಕೆ ಮಾಡಬೇಕಿದೆ.
ಅಲ್ಲದೇ ಉಡುಪಿ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಕ್ಕೆ ಸೇರಿರದ ಎನ್‌ಜಿಓಯಿಂದ ಮೂವರನ್ನು 3 ವರ್ಷಗಳ ಅವಧಿಗೆ ನಾಮ ನಿರ್ದೇಶನ ಮಾಡಿ ಉಡುಪಿ ಜಿಲ್ಲಾಧಿಕಾರಿ ನೇಮಿಸಬಹುದಾಗಿದೆ.
ಆಸಕ್ತ ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರದ ಸರಕಾರೇತರ ಸಂಘ ಸಂಸ್ಥೆಗಳು(ಎನ್‌ಜಿಓ) ಹಾಗೂ ಸರಕಾರಿ ನೌಕರರೇತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳು ಸಮಿತಿ ಸಭೆಯ ಸದಸ್ಯರಾಗ ಬಯಸುವವರು ತಮ್ಮ ಸ್ವವಿವರವುಳ್ಳ ಅರ್ಜಿಯನ್ನು ಜಾತಿ ಪತ್ರ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದಲ್ಲಿ ಅಂತಹ ವಿವರಗಳನ್ನೊಳಗೊಂಡ ದಾಖಲೆಗಳನ್ನು ಡಿ.2ರೊಳಗೆ ಉಡುಪಿ ಜಿಲ್ಲಾಧಿಕಾರಿಗೆ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಉಡುಪಿ ಇವರ ಮೂಲಕ ಅಂಚೆ ಅಥವಾ ಖುದ್ದಾಗಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







