ಜುಗಾರಿ: ಐವರ ಬಂಧನ
ಕುಂದಾಪುರ, ನ.25: ಕೋಟೇಶ್ವರ ಗ್ರಾಮದ ಪಟ್ಟಾಬಿ ಹಾಲ್ ಬಳಿ ನ.25 ರಂದು ಬೆಳಗ್ಗೆ 10.45ರ ಸುಮಾರಿಗೆ ಗರಗರ ಮಂಡಲ ಜುಗಾರಿ ಆಡುತ್ತಿದ್ದ ಐವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕೋಟೇಶ್ವರದ ಅರಸರಬೆಟ್ಟುವಿನ ವಾಸು ಮೊಗವೀರ(45), ಅರಸಿನಕಟ್ಟೆಯ ಗಣೇಶ ದೇವಾಡಿಗ(42), ಹಂಗಳೂರಿನ ಉಮೇಶ್ ಎಸ್.(40), ಮಾರ್ಕೋಡುವಿನ ರಾಘವೇಂದ್ರ ಕೆ.(38), ಅಂಕದಕಟ್ಟೆಯ ಸುಧಾಕರ ದೇವಾಡಿಗ(47) ಬಂಧಿತ ಆರೋಪಿಗಳು.
ಇವರಿಂದ 4800ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





