ಕೆಎಂಸಿ ವೈದ್ಯರ ಯಶಸ್ವಿ ಸಾಧನೆ: ಕಾಲು ಉಳಿಸುವ ಯಶಸ್ವಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ

ಮಣಿಪಾಲ, ನ.25: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಹಾಗೂಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರು ಇತ್ತೀಚೆಗೆ45 ವರ್ಷ ಪ್ರಾಯದ ಮಹಿಳೆಯ ಶ್ರೋಣಿಯ ಮೂಳೆಯ ಮೇಲೆ ಸಂಕೀರ್ಣ ವಾದಕಾಲುಉಳಿಸುವ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು. ಇದೀಗ ಆರು ವಾರಗಳ ವಿಶ್ರಾಂತಿಯ ಬಳಿಕ ರೋಗಿ ಚೇತರಿಸಿಕೊಂಡಿದ್ದು, ಸಾಕಷ್ಟು ಫಿಸಿಯೋಥೆರಪಿಯ ಬಳಿಕ ಆರಾಮವಾಗಿ ನಡೆದಾಡುತಿದ್ದಾರೆ.
ರೋಗಿಗೆ ಕೆಳಬೆನ್ನಿನಲ್ಲಿ ನೋವು ಮತ್ತು ಊತದ ಸಮಸ್ಯೆ ಮೊದಲಿನಿಂದಲೂ ಇತ್ತು. ಪರೀಕ್ಷೆಯ ವೇಳೆ ರೋಗಿಯ ಬಲಭಾಗದ ಇಲಿಯಮ್ ನಲ್ಲಿ(ಶ್ರೋಣಿಯ ಮೂಳೆಯ ಭಾಗ)ಗೆಡ್ಡೆ ಇರುವುದು ಪತ್ತೆಯಾಯಿತು. ಸಾಕಷ್ಟು ಬಾರಿ ರಕ್ತ ಪರೀಕ್ಷೆಯ ಬಳಿಕ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು. ಶಸ್ತ್ರಚಿಕಿತ್ಸೆಯ ಪ್ರಮುಖ ಭಾಗವೆಂದರೆಬಲಕಾಲಿನ ಪ್ರಮುಖ ನರಗಳು ಮತ್ತು ರಕ್ತನಾಳಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಸುರಕ್ಷಿತವಾಗಿರಿ ಸುವುದಾಗಿತ್ತು.
ರೋಗಿಯ ಸಿಯಾಟಿಕ್ ನರವನ್ನು ರಕ್ಷಿಸಿಕೊಂಡು ಸೊಂಟದ ಕೀಲಿನ ಮೇಲ್ಬಾಗದ ಶ್ರೋಣಿಯ ಮೂಳೆಯನ್ನು ಸೀಳಿ ಸ್ಯಾಕ್ರಲ್ ಮೂಳೆಯ ಪಾರ್ಶ್ವದ ಭಾಗವನ್ನು ಕತ್ತರಿಸುವುದು ಶಸ್ತ್ರಚಿಕಿತ್ಸೆಯ ಪ್ರಮುಖ ಅಂಶವಾಗಿತ್ತು. ಹೀಗೆ ರೋಗದ ಗೆಡ್ಡೆಯನ್ನು ಮತ್ತು ಸ್ಯಾಕ್ರೊಲಿಯಾಕ್ ಸಂದಿಯನ್ನು ಒಟ್ಟಿಗೆ ತೆಗೆದು ಹಾಕಲಾಯಿತು. ಆ ಭಾಗದ ಚರ್ಮದ ದೋಷವನ್ನು ಉಳಿದ ಭಾಗದ ಚರ್ಮ ಬಳಸಿ ಸರಿಪಡಿಸಲಾಯಿತು. ಒಟ್ಟಾರೆಯಾಗಿ ಈ ಕಠಿಣ ಶಸ್ತ್ರಚಿಕಿತ್ಸೆಗೆ ವೈದ್ಯರು ತೆಗೆದುಕೊಂಡ ಅವಧಿ 10 ಗಂಟೆಗಳು.
ಶಸ್ತ್ರಚಿಕಿತ್ಸೆಯನ್ನು ಕೆಎಂಸಿಯ ಕ್ಯಾನ್ಸರ್ ವಿಭಾಗದ ಡಾ.ನವೀನ ಕುಮಾರ್ ಎ.ಎನ್. ಯಶಸ್ವಿಯಾಗಿ ನಡೆಸಿದರು. ಅವರಿಗೆ ಡಾ. ನವಾಝ್ ಉಸ್ಮಾನ್, ಡಾ.ಸುಧೀರ್ ವರ್ಮಾ ಮತ್ತು ಡಾ.ಅನಂತ್ ಎಸ್. ಮತದ್ ಅವರನ್ನೊಳಗೊಂಡ ತಜ್ಞರ ತಂಡ ಸಹಕರಿಸಿತು. ಶಸ್ತ್ರಚಿಕಿತ್ಸಾ ನಂತರದ ಚಿಕಿತ್ಸೆಯನ್ನು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ. ಶ್ರೀಕುಮಾರ್ ಮತ್ತು ಡಾ.ಜೋಸೆಫ್ ನಿರ್ವಹಿಸಿದರು. ಅರಿವಳಿಕೆಯನ್ನು ಡಾ.ಮಂಜುನಾಥ ಪ್ರಭು ಮತ್ತು ಡಾ.ಯೋಗೇಶ್ ಗುಡೆ ನಿರ್ವಹಿಸಿದರು.
ಸಂಕೀರ್ಣವಾದ ಅಂಗರಚನೆಯ ಕಾರಣ ದೇಹದ ಈ ಭಾಗದ ಶಸ್ತ್ರಚಿಕಿತ್ಸೆ ವೈದ್ಯರಿಗೆ ಸವಾಲಿನದ್ದಾಗಿತ್ತು. ಈ ರೋಗಿಯಲ್ಲಿದ್ದ ಕ್ಯಾನ್ಸರ್‌ಕಾರ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದರೊಂದಿಗೆ ಕಾಲನ್ನುಉಳಿಸುವುದು ಒಂದು ಸವಾಲಾಗಿತ್ತು. ಏಕೆಂದರೆಕಾಲಿನಪ್ರಮುಖ ರಕ್ತನಾಳಗಳು ಮತ್ತು ನರಗಳು ದೊಡ್ಡ ಗೆಡ್ಡೆಯಸಮೀಪದಲ್ಲಿದ್ದವು. ಈ ರಕ್ತನಾಳಗಳಿಗೆ ಆಗುವ ಯಾವುದೇ ಸಣ್ಣ ಅಪಾಯ ದೊಡ್ಡ ರಕ್ತಸ್ರಾವಕ್ಕೆ ಕಾರಣವಾಗಬಹುದಾಗಿತ್ತು ಹಾಗೂ ಜೀವಕ್ಕೆ ಅಪಾಯಕಾರಿಯಾಗಬಹುದಿತ್ತು. ನರಗಳಿಗೆ ಆಗುವ ಯಾವುದೇ ಗಾಯಕಾಲಿನಶಾಶ್ವತ ವೈಫಲ್ಯಕ್ಕೆ ಕಾರಣವಾಗಬಹುದಿತ್ತು.
ಮಣಿಪಾಲದ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಅವರು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ತಂಡವನ್ನು ಅಭಿನಂದಿಸಿದರು.







