ಚೂರಿ ಇರಿದು ಕಾರು ಚಾಲಕನ ಕೊಲೆ

ಬೆಂಗಳೂರು, ನ.25: ಕಾರು ಚಾಲಕನ ಮೇಲೆ ದಾಳಿ ನಡೆಸಿ, ಕೊಲೆಗೈದಿರುವ ಘಟನೆ ಇಲ್ಲಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀನಗರದ ಕಾರು ಚಾಲಕ ಪ್ರದೀಪ್(26) ಕೊಲೆಯಾದ ಕಾರು ಚಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ವೃಷಭಾವತಿ ನಗರದ 5ನೆ ಕ್ರಾಸ್‌ನ ಓರ್ವ ಮಹಿಳೆಯೊಂದಿಗೆ ಪ್ರದೀಪ್ ಮತ್ತು ವಿನೋದ್ ಕುಮಾರ್ ಎಂಬವರು ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಸೋಮವಾರ ಮುಂಜಾನೆ ಮಹಿಳೆಯನ್ನು ಹುಡುಕಿಕೊಂಡು ಶ್ರೀನಗರದಿಂದ ಬಂದಿದ್ದ ಪ್ರದೀಪ್, ಆಕೆಯ ಜೊತೆಗಿದ್ದ ವಿನೋದ್ ಕುಮಾರ್‌ನನ್ನು ನೋಡಿ ಜಗಳ ತೆಗೆದಿದ್ದಾನೆ ಎಂದು ಹೇಳಲಾಗಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ವಿನೋದ್ ಕುಮಾರ್ ಚಾಕುವಿನಿಂದ ಪ್ರದೀಪ್‌ನ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರದೀಪ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





