ಮಾದಕ ವಸ್ತು ಮಾರಾಟ ಆರೋಪ: ವಿದೇಶಿ ಪ್ರಜೆ ಸೆರೆ

ಬೆಂಗಳೂರು, ನ.26: ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಸಂಪರ್ಕಿಸಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಆರೋಪದಡಿ ವಿದೇಶಿ ಪ್ರಜೆಯನ್ನು ಇಲ್ಲಿನ ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ದೇಶದ ವಿಕ್ಟರ್(33) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ವೀಸಾ ಮೇಲೆ ನಗರಕ್ಕೆ ಬಂದಿದ್ದ ಆರೋಪಿಯು ನಗರದಲ್ಲಿಯೇ ನೆಲೆಸಿ ಐಷಾರಾಮಿ ಜೀವನ ನಡೆಸಲು ಬೇರೆ ಕಡೆಯಿಂದ ಕೊಕೇನ್ ಪಡೆದುಕೊಂಡು ಸಾರ್ವಜನಿಕರನ್ನು ಸಂಪರ್ಕಿಸಿ ಮಾರಾಟದಲ್ಲಿ ತೊಡಗಿದ್ದನು. ಗಿರಾಕಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಜಯನಗರದ 22ನೆ ಕ್ರಾಸ್‌ನ 5ನೆ ಮುಖ್ಯರಸ್ತೆಗೆ ಆರೋಪಿಯನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸಿ ಜಯನಗರ ಪೊಲೀಸರು ಬಂಧಿಸಿದ್ದಾರೆ.
ಈತನಿಂದ 1ಲಕ್ಷ ಮೌಲ್ಯದ 14ಗ್ರಾಂ ಕೊಕೇನ್, 3 ಸಾವಿರ ನಗದು, ಮೊಬೈಲ್, ಬೈಕ್ ಜಪ್ತಿ ಮಾಡಿಕೊಂಡು, ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದ್ದಾರೆ.
Next Story





