ಮೂವರು ಮನೆಗಳ್ಳತನ ಆರೋಪಿಗಳ ಬಂಧನ: 32.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು, ನ.26: ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಹೊರ ರಾಜ್ಯದ ಮೂವರನ್ನು ಇಲ್ಲಿನ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿ 32.30 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಾಸ್ತಾನದ ಜೋಗರಾಮ್ (22), ರಾಮ್ ಗಿರಿ(20), ವಿಷ್ಣು ಪೂಜಾ (44) ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳ ಬಂಧನದಿಂದ ಪುಟ್ಟೇನಹಳ್ಳಿಯ 4, ಸುಬ್ರಮಣ್ಯಪುರ 2, ಗಿರಿನಗರ, ಚಂದ್ರಲೇಔಟ್, ಹನುಮಂತನಗರ, ಬನಶಂಕರಿ ತಲಾ ಒಂದು ಸೇರಿ 10 ಹಗಲು ರಾತ್ರಿ ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 850 ಗ್ರಾಂ ಚಿನ್ನ, 3 ಕೆ.ಜಿ. 110 ಗ್ರಾಂ ಬೆಳ್ಳಿ, ಹೊಂಡಾ ಆಕ್ಟೀವಾ ಸೇರಿ 32 ಲಕ್ಷ 30 ಸಾವಿರ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story





