ಸಂವಿಧಾನ ಪ್ರಜಾಪ್ರಭುತ್ವದ ಪ್ರಾಣ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.26: ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ನ್ಯಾಯ, ನಂಬಿಕೆ, ಅಭಿವ್ಯಕ್ತಿ, ಆರಾಧನೆಗಳ ಸ್ವಾತಂತ್ರ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ, ಮನುಷ್ಯನ ಘನತೆ ಮತ್ತು ದೇಶದ ಏಕತೆಯನ್ನು ಕಾಪಾಡುವ ಭ್ರಾತೃತ್ವ. ಈ ಆಶಯಗಳನ್ನು ಸಾಕಾರಗೊಳಿಸುವುದೇ ಸಂವಿಧಾನಕ್ಕೆ ಸಲ್ಲಿಸುವ ಗೌರವ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಮಾಧ್ಯಮರಂಗವನ್ನು ಬಲಪಡಿಸುವ ಮೂಲಕವೇ ಸಂವಿಧಾನವನ್ನು ರಕ್ಷಿಸಬೇಕಾಗಿದೆ. ಸಂವಿಧಾನ ಪ್ರಜಾಪ್ರಭುತ್ವದ ಪ್ರಾಣ. ಸಂವಿಧಾನ ಉಳಿದರೆ ನಾವು ಉಳಿದೇವು, ಅಳಿದರೆ ನಾವು ಅಳಿದೇವು ಎಂದು ಅವರು ತಿಳಿಸಿದ್ದಾರೆ.
Next Story





