Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಸನ್ನಡತೆ ಮತ್ತು ನಿಷ್ಠಾವಂತ...

ಸನ್ನಡತೆ ಮತ್ತು ನಿಷ್ಠಾವಂತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿ: ನ್ಯಾ.ಎನ್.ಕುಮಾರ್

ಸಂವಿಧಾನ ದಿವಸ್ ಆಚರಣೆ

ವಾರ್ತಾಭಾರತಿವಾರ್ತಾಭಾರತಿ26 Nov 2019 10:21 PM IST
share
ಸನ್ನಡತೆ ಮತ್ತು ನಿಷ್ಠಾವಂತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿ: ನ್ಯಾ.ಎನ್.ಕುಮಾರ್

ಬೆಂಗಳೂರು, ನ.26: ಸ್ವಾರ್ಥವನ್ನು ಬದಿಗಿಟ್ಟು ಜನಹಿತವನ್ನು ಕಾಪಾಡುವ ಸನ್ನಡತೆ ಮತ್ತು ನಿಷ್ಠಾವಂತ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎನ್.ಕುಮಾರ್ ಆಶಿಸಿದರು.

ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯ ವಿಧಾನ ಮಂಡಲ ಆಯೋಜಿಸಿದ್ದ ಸಂವಿಧಾನ ದಿವಸ್ ಆಚರಣೆ ಸಮಾರಂಭದಲ್ಲಿ ‘ಭಾರತ ಸಂವಿಧಾನ: ಒಂದು ಪಕ್ಷಿನೋಟ’ ಕುರಿತಂತೆ ಅವರು ಪ್ರಧಾನ ಭಾಷಣ ಮಾಡಿದರು.

ಭಾರತದ ಸಂವಿಧಾನ ಅಂಗೀಕಾರವಾದದ್ದು 1949ರ ನ.26ರಂದು. ಅನುಷ್ಠಾನಕ್ಕೆ ಬಂದಿದ್ದು 1950ರ ಜ.26ರಂದು. ಅಂದಿನಿಂದ ಇಂದಿನವರೆಗೂ ಶಾಸಕಾಂಗ ಮತ್ತು ಕಾರ್ಯಾಂಗದ ನಡೆಯನ್ನು ವ್ಯಾಖ್ಯಾನಿಸಿ ವಿಶ್ಲೇಷಣೆ ಮಾಡಿ ಸಂವಿಧಾನವನ್ನು ರಕ್ಷಿಸುವಲ್ಲಿ ನ್ಯಾಯಾಲಯಗಳು ಮಹತ್ತರ ಪಾತ್ರ ನಿರ್ವಹಿಸಿವೆ ಎಂದು ಅವರು ಬಣ್ಣಿಸಿದರು.

ನಾವು ಸ್ವಾತಂತ್ರ್ಯ ಕಾಣುವ ಮುನ್ನ ಕಂಡ ನೂರಾರು ವರ್ಷಗಳ ನೋವು, ಭಾರತವು ಸ್ವಾತಂತ್ರ್ಯ ಗಳಿಸಿ ಸಂವಿಧಾನ ರಚನೆಯಾದಾಗ ಅಂತ್ಯಗೊಂಡಿದೆ. ಭಾರತ ಸಂವಿಧಾನವು ಕಾನೂನುಗಳ ತಾಯಿಯಾಗಿದೆ. ಅದರ ಮೂಲಕ ರಾಷ್ಟ್ರವು ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂದು ನ್ಯಾ.ಕುಮಾರ್ ಹೇಳಿದರು. ಬ್ರಿಟಿಷರ ಆಳ್ವಿಕೆಯಲ್ಲಿ 1919ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತ ಸರಕಾರ ಕಾಯಿದೆ ಹಾಗೂ ನಂತರ 1935ರಲ್ಲಿ ಜಾರಿಗೊಂಡ ಭಾರತ ಸರಕಾರ ಕಾಯಿದೆ, ತದನಂತರ 1944ರ ಡಿ.9ರಂದು ರಚನೆಗೊಂಡ 18 ವಿವಿಧ ಸಮಿತಿಗಳ ಶಿಫಾರಸ್ಸುಗಳು ಮತ್ತು ಸಲಹೆಗಳು ಭಾರತ ಸಂವಿಧಾನಕ್ಕೆ ಬುನಾದಿಯಾಗಿವೆ ಎಂದು ಅವರು ತಿಳಿಸಿದರು.

ಭಾರತ ಸಂವಿಧಾನದ ಮೊದಲನೆ ಕರಡು 243 ಪರಿಚ್ಛೇಧಗಳನ್ನು ಒಳಗೊಂಡಿತ್ತು. ಎರಡನೆ ಕರಡು 315 ಹಾಗೂ ಮೂರನೆ ಕರಡು 384 ಪರಿಚ್ಛೇಧಗಳನ್ನು ಒಳಗೊಂಡು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವ ಹಾಗೂ ದೂರದೃಷ್ಟಿಯಲ್ಲಿ ಬೃಹತ್ ಸಂವಿಧಾನವಾಗಿ ರೂಪುಗೊಂಡಿದ್ದು, ಇದೀಗ ಇತಿಹಾಸವಾಗಿದೆ ಎಂದು ಅವರು ಹೇಳಿದರು.

ಅಮೆರಿಕ, ಆಸ್ಟ್ರೇಲಿಯ, ಫ್ರಾನ್ಸ್, ಐರ್ಲೆಂಡ್, ಜಪಾನ್, ಸ್ವಿಟ್ವರ್‌ಲ್ಯಾಂಡ್ ಒಳಗೊಂಡಂತೆ ಅರವತ್ತಕ್ಕೂ ಹೆಚ್ಚು ರಾಷ್ಟ್ರಗಳ ಸಂವಿಧಾನಗಳಲ್ಲಿ ಅಡಕಗೊಂಡಿರುವ ಉತ್ಕೃಷ್ಟ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳೊಡನೆ ಅಧಿಕಾರ ಹಂಚಿಕೆ ಮತ್ತು ಹೊಂದಾಣಿಕೆಯ ಒಕ್ಕೂಟ ವ್ಯವಸ್ಥೆ ಹಾಗೂ ಮೂಲಭೂತ ಹಕ್ಕುಗಳ ಪ್ರತಿಪಾದನೆಯನ್ನು ಅಮೆರಿಕ ಸಂವಿಧಾನದಿಂದ ಎರವಲು ಪಡೆದಿದ್ದೇವೆ ಎಂದು ಅವರು ತಿಳಿಸಿದರು.

ಭಾರತ ಸಂವಿಧಾನವು ಒಂದು ನೂರಕ್ಕೂ ಹೆಚ್ಚು ಬಾರಿ ತಿದ್ದುಪಡಿಯಾಗಿದೆಯಾದರೂ, ಸಂವಿಧಾನದ ಮೂಲಭೂತ ಆಶಯಗಳಿಗೆ ಯಾವುದೇ ಧಕ್ಕೆ ಉಂಟಾಗಿಲ್ಲ ಎಂಬುದು ನಮ್ಮ ಸಂವಿಧಾನದ ವಿಶೇಷತೆ ಮತ್ತು ಶ್ರೇಷ್ಠತೆಗೆ ಸಾಕ್ಷಿ ಎಂದು ನ್ಯಾ.ಕುಮಾರ್ ಹೇಳಿದರು. ಸಂವಿಧಾನವು ಎಷ್ಟೇ ಸಶಕ್ತವಾಗಿದ್ದರೂ, ಅದನ್ನು ಅನುಷ್ಠಾನ ಮಾಡುವವರು ಕೆಟ್ಟ ಜನರಾದರೆ, ಸಂವಿಧಾನದ ಆಶಯಗಳು ವೈಫಲ್ಯತೆ ಕಾಣುತ್ತವೆ. ಸಂವಿಧಾನವು ಎಷ್ಟೆ ದುರ್ಬಲವಾಗಿದ್ದರೂ, ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯ ಜನರಾದರೆ, ಸಂವಿಧಾನದ ಆಶಯಗಳು ಸಫಲವಾಗುತ್ತದೆ ಎಂಬ ಅಂಬೇಡ್ಕರ್ ಅವರ ಸ್ಮರಣಾರ್ಹ ನುಡಿಗಳನ್ನು ಅವರು ಮೆಲುಕು ಹಾಕಿದರು.

ಬಡತನ ನಿರ್ಮೂಲನೆ, ಹಸಿವು ಮುಕ್ತ ರಾಷ್ಟ್ರ ನಿರ್ಮಾಣ, ಶಿಕ್ಷಣ ಮತ್ತು ಉದ್ಯೋಗಕ್ಕೆ ಸಮಾನ ಅವಕಾಶ ನಮ್ಮ ಸಂವಿಧಾನದ ಗಮನಾರ್ಹ ಅಂಶಗಳಾಗಿವೆ. ಅಲ್ಲದೆ, 1976ರಲ್ಲಿ ಹಕ್ಕುಗಳ ಜೊತೆಗೆ ಕರ್ತವ್ಯಗಳೂ ಕೂಡಾ ಸಂವಿಧಾನದಲ್ಲಿ ಅಡಕಗೊಂಡಿರುವುದು ಉಲ್ಲೇಖಾರ್ಹ ಎಂದು ನ್ಯಾ.ಕುಮಾರ್ ಹೇಳಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜನೇ ಕಾನೂನು ಆಗಿದ್ದ ಕಾಲದಿಂದ ಕಾನೂನನ್ನೇ ರಾಜನಾಗಿ ಪರಿವರ್ತಿತವಾದದ್ದು ನಮ್ಮ ಸಂವಿಧಾನವನ್ನು ರಚಿಸಿ ರೂಪಿಸಿದ ಅಂಬೇಡ್ಕರ್ ಅವರ ಸ್ವ ಅನುಭವ ಮತ್ತು ಆಳವಾದ ಜ್ಞಾನಕ್ಕೆ ಎಲ್ಲರೂ ತಲೆದೂಗಬೇಕು ಹಾಗೂ ತಲೆಬಾಗಬೇಕು ಎಂದರು.

ನ್ಯಾಯ ವಿಳಂಬವಾದಲ್ಲಿ ನ್ಯಾಯ ನಿರಾಕರಿಸಿದಂತೆ ಎಂಬ ಆಂಗ್ಲ ಭಾಷಾ ನಾಣ್ಣುಡಿ ಕೇವಲ ನ್ಯಾಯಾಂಗಕ್ಕೆ ಅನ್ವಯಿಸುವುದಲ್ಲ, ಶಾಸಕಾಂಗ ಮತ್ತು ಕಾರ್ಯಾಂಗಗಳಿಗೂ ಅನ್ವಯಿಸುತ್ತದೆ. ಭಾರತದ ಸಂವಿಧಾನ ರಚನೆಯಲ್ಲಿ ಕರ್ನಾಟಕದ ಕೊಡುಗೆಯೂ ಇದೆ ಎಂದು ಹೇಳಿ ಕನ್ನಡ ನಾಡಿನ ಬೆನೆಗಲ್ ನರಸಿಂಗರಾಯರನ್ನು ಸ್ಮರಿಸಿದರು.

ವಿಧಾನಪರಿಷತ್ ಸಭಾಪತಿ ಕೆ.ಪ್ರತಾಪ್‌ ಚಂದ್ರ ಶೆಟ್ಟಿ ಮಾತನಾಡಿ, ನಾವು ಭಗವದ್ಗೀತೆಯನ್ನು ಖರೀದಿಸುತ್ತೇವೆ ಓದುತ್ತೇವೆ ಹಾಗೂ ಅನುಷ್ಠಾನಕ್ಕೆ ತರಲು ಯತ್ನಿಸುತ್ತೇವೆ. ಅಂತೆಯೇ, ಎಲ್ಲರೂ ಸಂವಿಧಾನದ ಪುಸ್ತಕವನ್ನು ಖರೀದಿಸಿ, ಓದಿ ಹಾಗೂ ಅದರಲ್ಲಿನ ಅಂಶಗಳನ್ನು ಪಾಲಿಸಲು ಪ್ರಯತ್ನಿಸಬೇಕು ಎಂದು ನುಡಿದರು.

ಹಿರಿಯ ನಿರ್ದೇಶಕ ಶ್ಯಾಮ್ ಬೆನೆಗಲ್ ನಿರ್ದೇಶಿಸಿ, ಸಂಸತ್ತು ನಿರ್ಮಿಸಿದ ‘ಭಾರತ ಸಂವಿಧಾನ’ ಕುರಿತ ಸಾಕ್ಷ ಚಿತ್ರವು ಕನ್ನಡ ಅವತರಣಿಕೆಯಲ್ಲಿ ಹೊರಬರಬೇಕು. ಅದನ್ನು ನೋಡುವ ಸೌಭಾಗ್ಯ ನಮಗೆ ಶೀಘ್ರವೇ ಲಭಿಸಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X