ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಅಮಾಸೆಬೈಲು, ನ.26: ಅನಾರೊಗ್ಯದಿಂದ ಬಳಲುತ್ತಿದ್ದ ಹಳೆ ಅಮಾಸೆ ಬೈಲು ನಿವಾಸಿ ಚಿಕ್ಕ ಪೂಜಾರಿ(70) ಎಂಬವರು ಮಾನಸಿಕವಾಗಿ ನೊಂದು ನ.25ರಂದು ಬೆಳಗ್ಗೆ ಮಚ್ಚಟ್ಟು ಗ್ರಾಮದ ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕುಂಟಾಡಿಯ ಕಮಲ(71) ಎಂಬವರು ಮಾನಸಿಕವಾಗಿ ನೊಂದು ನ.25ರಂದು ಕಲ್ಯಾ ಗ್ರಾಮದ ಕಲ್ಕಾರ್ ನ ಪಾಪನಾಶಿನಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story