ಅಕ್ರಮ ಮರಳು ಸಾಗಾಟ: ಇಬ್ಬರ ಸೆರೆ
ಕುಂದಾಪುರ, ನ.26: ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಕಟ್ಬೇಲ್ತೂರು ಗ್ರಾಮದ ಸುಳ್ಸೆ ಶಾಲೆಯ ಹತ್ತಿರ ನ. 25ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ವಾಹನ ಚಾಲಕ, ಕಟ್ಬೇಲ್ತೂರು ಗ್ರಾಮದ ರಘು ಮೊಗವೀರ(50) ಹಾಗೂ ದೇವೇಂದ್ರ (28) ಬಂಧಿತ ಆರೋಪಿಗಳು. ಇವರಿಂದ ಪಿಕ್‌ಅಪ್ ವಾಹನ ಹಾಗೂ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





