ದರೋಡೆಗೆ ಸಂಚು ಆರೋಪ: ನಾಲ್ವರ ಸೆರೆ

ಬೆಂಗಳೂರು, ನ.26: ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಂಚು ರೂಪಿಸಿದ ಆರೋಪದಡಿ ನಾಲ್ವರನ್ನು ಇಲ್ಲಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಾಣವಾರದ ರಾಘವೇಂದ್ರ(30), ಶಿವಕೋಟೆಯ ಆಕಾಶ್ ಕುಮಾರ್(23), ಬಾಗಲಕುಂಟೆಯ ದುರ್ಗಾಪ್ರಸಾದ್ (21), ಅಭಿಷೇಕ್(21) ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಗುಂಪು ಕಟ್ಟಿಕೊಂಡು ಸೋಲದೇವನಹಳ್ಳಿಯ ಸಿಲ್ವೇಪುರದಿಂದ ಕೊಡಗಿ ತಿಮಲಾಪುರಕ್ಕೆ ಹೋಗುವ ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಒಂಟಿಯಾಗಿ ಓಡಾಡುವವರನ್ನು ವಾಹನ ಚಾಲಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
Next Story





