ಏಶ್ಯನ್ ಆರ್ಚರಿ ಚಾಂಪಿಯನ್‌ಶಿಪ್: ಕಂಚಿನ ಪದಕ ಜಯಿಸಿದ ಅತನು ದಾಸ್

ಬ್ಯಾಂಕಾಕ್, ನ.26: ಭಾರತದ ಬಿಲ್ಗಾರ ಅತನು ದಾಸ್ ಏಶ್ಯನ್ ಆರ್ಚರಿ ಚಾಂಪಿಯನ್‌ಶಿಪ್‌ನ ಪುರುಷರ ರಿಕರ್ವ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಇಲ್ಲಿ ಮಂಗಳವಾರ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ದಾಸ್ ಕೊರಿಯಾದ ಜಿನ್ ಹಾಯೆಕ್ ಒಹ್‌ರನ್ನು 6-5 ಅಂತರದಿಂದ ಶೂಟ್-ಆಫ್‌ನಲ್ಲಿ ಮಣಿಸಿದರು. ಭಾರತದ ಆರ್ಚರಿ ಒಕ್ಕೂಟ ಅಮಾನತಿನಲ್ಲಿರುವ ಕಾರಣ ವಿಶ್ವ ಆರ್ಚರಿ ಧ್ವಜದಡಿ ಸ್ಪರ್ಧಿಸುತ್ತಿರುವ ದಾಸ್, ಸೋಮವಾರ ದೀಪಿಕಾ ಕುಮಾರಿ ಅವರೊಂದಿಗೆ ರಿಕರ್ವ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಕಾಂಪೌಂಡ್ ಮಿಕ್ಸೆಡ್ ಟೀಮ್ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ಬುಧವಾರ ನಡೆಯಲಿರುವ ಫೈನಲ್‌ನಲ್ಲಿ ಚೈನೀಸ್ ತೈಪೆಯ ಜೋಡಿಯನ್ನು ಎದುರಿಸಲಿದೆ.
Next Story





