ಮರಳು ವಿತರಣೆಯಲ್ಲಿ ಅಕ್ರಮ; ಕ್ರಮಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರ ಒತ್ತಾಯ
ಉಡುಪಿ, ನ.27: ಭಾರೀ ಹೋರಾಟದ ಬಳಿಕ ಜಿಲ್ಲೆಯಲ್ಲಿ ಪ್ರಾರಂಭ ಗೊಂಡಿರುವ ಮರಳುಗಾರಿಕೆಯಲ್ಲಿ ಹಾಗೂ ಮರಳು ಮಾರಾಟದಲ್ಲಿ ಮತ್ತೆ ಅಕ್ರಮಗಳು ಯಥಾಪ್ರಕಾರ ನಡೆಯುತ್ತಿವೆ. ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಬಡವರಿಗೆ ಈಗಲೂ ಸಮರ್ಪಕವಾಗಿ ಕಡಿಮೆ ದರದಲ್ಲಿ ಮರಳು ದೊರಕುತ್ತಿಲ್ಲ ಎಂದು ಬುಧವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಉಡುಪಿ ಜಿಪಂನ 18ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಿಸಿದರು.
ವಿಷಯ ಪ್ರಸ್ತಾಪಿಸಿ ಮಾತನಾಡಿದ ಬಾಬು ಶೆಟ್ಟಿ, ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಬಡವರಿಗೂ ಕೈಗೆಟುಕುವ ದರದಲ್ಲಿ ಮರಳು ಲ್ಯವಾಗು ವಂತಾಗಬೇಕು ಎಂಬ ಉದ್ದೇಶದಿಂದ ಪ್ರಾರಂಭಗೊಂಡಿರುವ ಮರಳುಗಾರಿಕೆ ಹಾಗೂ ಮರಳು ವಿತರಣೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಅಕ್ರಮಗಳು ನಡೆಯುತ್ತಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಬಡವರಿಗೆ ಮತ್ತೆ ಕಡಿಮೆ ದರದಲ್ಲಿ ಮರಳು ದೊರೆಯುವಂತಾಗಬೇಕು ಎಂದವರು ಆಗ್ರಹಿಸಿದರು.
ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಬಾಬು ಶೆಟ್ಟಿ, ಕುಂದಾಪುರ ತಾಲೂಕಿನಲ್ಲಿ ಮರಳು ಸಾಗಾಣಿಕೆ ಯಲ್ಲಿ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿವೆ. ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಮರಳು ಮಾರಾಟವಾಗುತ್ತಿದ್ದು, ಧಕ್ಕೆಯಲ್ಲಿ ತೆಗೆದ ಮರಳು ಸ್ಟಾಕ್ ಯಾರ್ಡ್‌ಗೆ ಬರದೇ ಧಕ್ಕೆಯಿಂದಲೇ ವಾಹನಗಳಿಗೆ ಲೋಡ್ ಆಗುತ್ತಿವೆ ಎಂದು ದೂರಿದರು.
ಮರಳು ಪಡೆಯಲು ಟೋಕನ್ ಪದ್ಧತಿಯನ್ನು ಅನುಸರಿಸುತ್ತಿಲ್ಲ. ಅವರು ಬೇಕಾದವರಿಗೆ ಕೊಡುತ್ತಾರೆ. ಉಳಿದ ಲಾರಿಯವರು ದಿನವಿಡಿ ಕಾದು ಕುಳಿತಿರಬೇಕು. ಕೆಲವೊಮ್ಮೆ ಅವರಿಗೆ ಕಾದರೂ ಸಿಗುವುದಿಲ್ಲ. ಪ್ರಭಾವಿ ವ್ಯಕ್ತಿಗಳು ಗುತ್ತಿಗೆ ಹಿಡಿದಿದ್ದು, ಅವರೇ 20-30 ಲಾರಿ ಇಟ್ಟು ಮರಳು ಸಾಗಿಸುತ್ತಾರೆ. ಅವರ ಲಾರಿಗೆ ಮೊದಲ ಪ್ರಾಶಸ್ತ್ಯ. ಒಂದು ಲಾರಿಗೆ ಸಾಗಾಟ ಖರ್ಚು ಸೇರಿ 10ಸಾವಿರಕ್ಕೆ ಸಿಗಬೇಕಾದ ಮರಳಿಗೆ 16ರಿಂದ 18 ಸಾವಿರ ವಸೂಲು ಮಾಡುತ್ತಾರೆ. ಮರಳು ಗುತ್ತಿಗೆದಾರರು ಯಾವುದೇ ನಿಯಮಗಳನ್ನು ಪಾವತಿಸುತ್ತಿಲ್ಲ. ಇಲ್ಲಿ ದೋಣಿಗಳಿಗೆ ಜಿಪಿಎಸ್ ಇಲ್ಲ. ಅಧಿಕಾರಿಗಳಿಗೆ ದೂರು ನೀಡಿದರೆ ದಾಖಲೆ ಕೊಡಿ ಎಂದು ಕೇಳುತ್ತಾರೆ ಎಂದು ಬಾಬು ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರಾಂಜಿ ನಾಯ್ಕಾ, ಮರಳು ಗುತ್ತಿಗೆ ಪಡೆದವರು ನಿಯಮಗಳನ್ನು ಪಾಲಿಸದಿದ್ದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ತನಿಖೆ ನಡೆಸಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಇಲ್ಲಿ ಚರ್ಚಿಸಿದ ಮರಳುಗಾರಿಕೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಇವುಗಳನ್ನು ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ಸಭೆಗೆ ಆಶ್ವಾನೆ ನೀಡಿದರು.
ಬಿಪಿಎಲ್ ಸಮಸ್ಯೆ: ಜಿಲ್ಲೆಯಲ್ಲಿ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ವಿತರಣೆಯಾಗದೇ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸದಸ್ಯ ಜನಾರ್ದನ ತೋನ್ಸೆ ಹೇಳಿದರು. ಇದಕ್ಕೆ ಉತ್ತರಿಸಿದ ಇಲಾಖೆಯ ಅಧಿಕಾರಿ, ಈ ವರ್ಷ ಜಿಲ್ಲೆಯ ಒಟ್ಟು 6170 ಬಿಪಿಎಲ್ ಪಡಿತರ ಚೀಟಿ ಅರ್ಜಿಗಳು ಸ್ವೀಕೃತವಾಗಿದ್ದು, 2608 ಅರ್ಜಿಗಳು ವಿಲೇವಾರಿ ಆಗಿವೆ. ಇಲಾಖೆ ಯಲ್ಲಿ ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆ ಇದ್ದು, ಇದರಿಂದ ದಿನದಲ್ಲಿ ಕೇವಲ 75 ಅರ್ಜಿಗಳು ಮಾತ್ರ ವಿಲೇವಾರಿ ಸಾದ್ಯವಾಗುತ್ತಿದೆ. ಆದರೂ ಶೀಘ್ರವೇ ವಿತರಣೆಗೆ ಕ್ರವು ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ವಿತರಣೆಯಾಗದೇ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸದಸ್ಯ ಜನಾರ್ದನ ತೋನ್ಸೆ ಹೇಳಿದರು. ಇದಕ್ಕೆ ಉತ್ತರಿಸಿದ ಇಲಾಖೆಯ ಅಧಿಕಾರಿ, ಈ ವರ್ಷ ಜಿಲ್ಲೆಯ ಒಟ್ಟು 6170 ಬಿಪಿಎಲ್ ಪಡಿತರ ಚೀಟಿ ಅರ್ಜಿಗಳು ಸ್ವೀಕೃತವಾಗಿದ್ದು, 2608 ಅರ್ಜಿಗಳು ವಿಲೇವಾರಿ ಆಗಿವೆ. ಇಲಾಖೆ ಯಲ್ಲಿ ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆ ಇದ್ದು, ಇದರಿಂದ ದಿನದಲ್ಲಿ ಕೇವಲ 75 ಅರ್ಜಿಗಳು ಮಾತ್ರ ವಿಲೇವಾರಿ ಸಾದ್ಯವಾಗುತ್ತಿದೆ. ಆದರೂ ಶೀಘ್ರವೇ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಬಗ್ಗೆ ಉಚ್ಚರಿಸಿ ಸಿಇಒ ಗೆಹ್ಲೋಟ್, ಪಡಿತರ ಚೀಟಿ ಇಲ್ಲದಿದ್ದರೂ ತಾತ್ಕಾಲಿಕ ಕಾರ್ಡ್‌ನಲ್ಲಿ ಪಡಿತರ ಪಡೆಯುವಂತೆ ಹಾಗೂ ಬಾಕಿ ಉಳಿದಿರುವ 3449 ಅರ್ಜಿಗಳ ಚೆಕ್‌ಲಿಸ್ಟ್‌ಗಳನ್ನು ಮೊದಲ ಆದ್ಯತೆಯ ಮೇರೆಗೆ ತನಿಖೆ ಮಾಡಿ, ಅರ್ಜಿಗಳನ್ನು ಅನುಮೋದನೆ ಮಾಡುವಂತೆ ಸೂಚಿಸಿದರಲ್ಲದೇ, ಈ ಕುರಿತು ಶೀಘ್ರವೇ ಒಂದು ಸಭೆ ಕರೆದು ರ್ಚಿಸುವುದಾಗಿ ಭರವಸೆ ನೀಡಿದರು.
ಈ ಬಗ್ಗೆ ಉಚ್ಚರಿಸಿ ಸಿಇಒ ಗೆಹ್ಲೋಟ್, ಪಡಿತರ ಚೀಟಿ ಇಲ್ಲದಿದ್ದರೂ ತಾತ್ಕಾಲಿಕ ಕಾರ್ಡ್‌ನಲ್ಲಿ ಪಡಿತರ ಪಡೆಯುವಂತೆ ಹಾಗೂ ಬಾಕಿ ಉಳಿದಿರುವ 3449 ಅರ್ಜಿಗಳ ಚೆಕ್‌ಲಿಸ್ಟ್‌ಗಳನ್ನು ಮೊದಲ ಆದ್ಯತೆಯ ಮೇರೆಗೆ ತನಿಖೆ ಮಾಡಿ, ಅರ್ಜಿಗಳನ್ನು ಅನುಮೋದನೆ ಮಾಡುವಂತೆ ಸೂಚಿಸಿದರಲ್ಲದೇ, ಈ ಕುರಿತು ಶೀಘ್ರವೇ ಒಂದು ಸೆಕರೆದುಚರ್ಚಿಸುವುದಾಗಿರವಸೆ ನೀಡಿದರು. ಬಿಪಿಎಲ್ ಕಾರ್ಡ್ ಇಲ್ಲದ ಕಾರಣ ಬಡವರಿಗೆ ಆಯುಷ್ಮಾನ್ ಯೋಜನೆ ಯಲ್ಲಿ ಚಿಕಿತ್ಸೆ ಪಡೆಯಲು ಕಷ್ಟವಾಗಿದ್ದು, ಆರೋಗ್ಯ ಸಮಸ್ಯೆ ಇರುವ ಕುಟುಂಬ ದವರಿಗೆ ಆದ್ಯತೆಯಲ್ಲಿ ಕಾರ್ಡ್ ವಿತರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸದಸ್ಯೆ ಗೀತಾಂಜಲಿ ಸುವರ್ಣ ಒತ್ತಾಯಿಸಿದರು.
ಸಭೆ ಕರೆಯಲು ವಿಳಂಬ: ಇಂಧಿನ ಸಭೆ ಪ್ರಾರಂಭಗೊಳ್ಳುತಿದ್ದಂತೆ ವಿಪಕ್ಷ ನಾಯಕ ಜನಾರ್ದನ ತೋನ್ಸೆ, ಮೂರು ತಿಂಗಳ ಬಳಿಕ ಸಭೆ ಕರೆದಿರುವ ಬಗ್ಗೆ ಹಾಗೂ ಸ್ಥಾಯಿಸಮಿತಿ ಸಭೆಯ ನಡಾವಳಿ ಇನ್ನೂ ಕೈಸೇರದೇ ಅದನ್ನು ಅನುಮೋದಿಸುವಂತೆ ಅಜೆಂಡಾದಲ್ಲಿ ಕೇಳಲಾಗಿದೆ ಎಂದು ಕಿಡಿಕಾರಿದರು. ಇದು ಯಾರ ಕರ್ತ್ಯಲೋಪ ಎಂದವರು ಪ್ರಶ್ನಿಸಿದರು.
ಈ ಬಗ್ಗೆ ಎರಡೂ ಪಕ್ಷಗಳ ಸದಸ್ಯರ ನಡುವೆ ವಾದ-ವಿವಾದ ನಡೆಯಿತು. ಸಭೆ ವಿಳಂಬ ಇದು ಮೊದಲ ಬಾರಿ ಆಗಿದೆ. ಕೆಲವು ಅನಿವಾರ್ಯ ಕಾರಣ ಗಳಿಂದ ಮೂರು ತಿಂಗಳ ಬಳಿಕ ಸಭೆ ನಡೆಯುತ್ತಿದೆ ಎಂದು ಸಮಜಾಯಿಷಿ ನೀಡಿದರು. ಸಭೆಯಲ್ಲಿ ಚರ್ಚೆಯಾಗುವ ಯಾವ ಸಮಸ್ಯೆಗೂ ಪರಿಹಾರ ಸಿಗುತ್ತಾ ಇಲ್ಲ ಎಂದೂ ತೋನ್ಸೆ ದೂರಿದರು.
ಈ ಪ್ರಾರಂಭಿಸಲಾಗಿರುವ ಮಕ್ಕಳ ಗ್ರಾಮಸಭೆಯ ಜೊತೆಗೆ ಈಗಾಗಲೇ ನಡೆಯುತ್ತಿರುವ ಗ್ರಾಮ ಸಭೆ, ಕೆಡಿಪಿ ಹಾಗೂ ಇತರ ಗ್ರಾಮಸಭೆಗಳ ಉಪಯುಕ್ತತೆ ಕುರಿತಂತೆ ಸದಸ್ಯರು ಗಂಭೀರ ಪ್ರಶ್ನೆ ಎತ್ತಿದರು. ಯಾವುದೇ ಅಧಿಕಾರಿಗಳು ಇಲ್ಲಿ ಭಾಗವಹಿಸುತ್ತಿಲ್ಲ. ಕಾಟಾಚಾರದ ಸಭೆ ನಡೆಯುತ್ತಿದೆ ಎಂದು ಬಾಬು ಶೆಟ್ಟಿ, ಗೌರಿ ದೇವಾಡಿಗ ಹಾಗೂ ಇತರರು ಹೇಳಿದರು.
ಜಿಲ್ಲೆಯ ಗೇರುಬೀಜದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಜನ್ಮ ದಿನಾಂಕ ಮತ್ತು ವಿದ್ಯಾರ್ಹತೆಯ ದಾಖಲೆ ಇಲ್ಲದೆ ಇರುವುದರಿಂದ ಕಡ್ಡಾಯವಾಗಿರುವ ಪಿಎಫ್‌ಗೆ ಆಧಾರ್ ಕಾರ್ಡ್ ಸಂಯೋಜನೆ ಸಾಧ್ಯವಾಗುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿದೆ ಎಂದು ಪ್ರತಾಪ್ ಹೆಗ್ಡೆ ತಿಳಿಸಿದರು. ಉತ್ತರಿಸಿದ ಕಾರ್ಮಿಕ ಇಲಾಖೆ ಅಧಿಕಾರಿ, ಕಾರ್ಮಿಕರ ಜನ್ಮ ದಿನಾಂಕದ ಯಾವುದೇ ದಾಖಲೆ ಇಲ್ಲದೆ ಇರುವ ಕಾರಣ ಸಿವಿಲ್ ನ್ಯಾಯಾಲಯ ಅನುಮತಿ ಪಡೆದು ಆಧಾರ್ ಕಾರ್ಡ್ ಪಡೆಯಬಹುದು ಎಂದರು.
ಹಾವಂಜೆಯಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಭೂಮಿಯೂ ಒತ್ತವರಿಯಾಗಿದ್ದು, ಇದನ್ನು ತೆರವುಗೊಳಿಸುವಂತೆ ಸತತ ನಾಲ್ಕನೇ ಸಭೆಯಲ್ಲಿ ಆಗ್ರಹಿಸುತಿದ್ದು, ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದರು. ಈ ಅತಿಕ್ರಮಣವನ್ನು ಶೀಘ್ರವೇ ತೆರವುಗೊಳಿಸುವಂತೆ ಸಿಇಓ ಪ್ರೀತಿ ಗೆಹ್ಲೋಟ್ ಬ್ರಹ್ಮಾವರ ತಹಶೀಲ್ದಾರಗೆ ಸೂಚಿಸಿದರು.
ಸುಧಾಕರ ಶೆಟ್ಟಿ ಮೈರ್ಮಾಡಿ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಬಜೆ ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೋಟಗಾರಿಕೆ ಬೆಳೆ ಹಾಗೂ ಭತ್ತ, ಬಾಳೆ, ಅಡಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಿಲ್ಲವೆಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಓ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ತಹಶೀಲ್ದಾರರು ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶೋಭಾ ಜಿ ಪುತ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಯೋಜನಾ ನಿರ್ದೇಶಕ ಗುರುದತ್ ಉಪಸ್ಥಿತರಿದ್ದರು.







