ಉಡುಪಿ: ಡಿ.10ರಿಂದ ಕೆಎಸ್‌ಐಸಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ, ಮಾರಾಟ
ಉಡುಪಿ, ನ.27:ಕರ್ನಾಟಕದ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆಎಸ್‌ಐಸಿ) ಕರ್ನಾಟಕ ಸರಕಾರದ ಒಂದು ಉದ್ಯಮವಾಗಿದ್ದು, ಮುಂಬ ರುವ ಕ್ರಿಸ್‌ಮಸ್, ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಡಿ.10ರಿಂದ 13ರವರೆಗೆ ಉಡುಪಿಯ ಜೋಡುಕಟ್ಟೆ ಬಳಿ ಇರುವ ಡಯಾನಾ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಡಿ.10ರಂದು ಬೆಳಗ್ಗೆ 11:00ಕ್ಕೆ ಡಯಾನಾ ಹೋಟೆಲ್‌ನಲ್ಲಿ ಉದ್ಘಾಟಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story





